ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶ

KannadaprabhaNewsNetwork |  
Published : Sep 14, 2026, 02:30 AM IST
ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡಿರುವ ಪೊಲೀಸರು. | Kannada Prabha

ಸಾರಾಂಶ

ಕಲಘಟಗಿಯ ಗಾಂಧಿನಗರದ ಶಾರೂಕ್ ಮಹಮ್ಮದ್ ನಜೀರ ನೇಸರಗಿ ಹಾಗೂ ಶಾನು ರೆಹಮಾನ್ ಯಾದವಾಡ ಬಂಧಿತರು.

ಯಲ್ಲಾಪುರ: ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ಪಟ್ಟಣದ ನೂತನನಗರ ಜಡ್ಡಿಯಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.ಕಲಘಟಗಿಯ ಗಾಂಧಿನಗರದ ಶಾರೂಕ್ ಮಹಮ್ಮದ್ ನಜೀರ ನೇಸರಗಿ ಹಾಗೂ ಶಾನು ರೆಹಮಾನ್ ಯಾದವಾಡ ಬಂಧಿತರು. ಇವರು ನೂತನನಗರ ಜಡ್ಡಿಯಲ್ಲಿ ಸಾರ್ವಜನಿಕರಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿಮೆ ದರದಲ್ಲಿ ಕೊಂಡು, ಹೆಚ್ಚಿನ ದರಕ್ಕೆ ಮಾರುವ ಉದ್ದೇಶದಿಂದ ಟಾಟಾ ಎಂಟ್ರಾ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ವಾಹನವನ್ನು ಹಾಗೂ ಸಾಗಾಟ ಮಾಡುತ್ತಿದ್ದ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿದ್ದ 15 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಆಹಾರ ನಿರೀಕ್ಷಕ ರಾಘವೇಂದ್ರ ಗೌಡ ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಳೆಯ ವಿದ್ಯಾರ್ಥಿಗಳ ಸಮಾವೇಶ

ಹಳಿಯಾಳ: ಪಟ್ಟಣದ ಕೆಎಲ್‌ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮಾವೇಶ ಶನಿವಾರ ಜರುಗಿತು.

2016ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ 52ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುಣೆಯ ಮಾಸ್ಟರ್ಕಾರ್ಡ್‌ನ ಹಿರಿಯ ಪ್ರಾಡಕ್ಟ್ ಡಿಸೈನರ್ ಶುಭೋದಯ ಶೆಟ್ಟರ್, ಹಿರಿಯ ಪ್ರಾಜೆಕ್ಟ್ ಮ್ಯಾನೇಜರ್ ಸಂತೋಷ್ ಎ.ಬಿ., ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಕ್ಷತಾ ಹಿರೇಮಠ್, ಅಮೆಜಾನ್ ಸಂಸ್ಥೆಯ ಸಾಫ್ಟವೇರ್ ಅರ್ಕಿಟೆಕ್ಟ್ ಪೂಜಾ ವೈ, ಶಿವಲೀಲಾ ಪಾಟೀಲ್, ಮಾಳವಿಕಾ, ಸುತೀರ್ಥ್, ಸಂತೋಷ್ ಎಚ್. ಅವರು ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದ ನೆನಪು ಮಾಡಿಕೊಂಡು, ತಮ್ಮ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಕರ, ಪಾಲಕರ ಮತ್ತು ಸಹಪಾಠಿಗಳ ಪಾತ್ರವನ್ನು ಸ್ಮರಿಸಿ ಧನ್ಯವಾದ ಅರ್ಪಿಸಿದರು.ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಮಾತನಾಡಿ, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಔದ್ಯೋಗಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ವಿಷಯ ಎಂದರು. ಮಹಾವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಲಹೆ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಎಲ್ಲ ವಿಭಾಗದ ಡೀನ್‌ಗಳು ಹಾಗೂ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. 2012ರಿಂದ 2016ರ ವರೆಗೆ ಓದಿದ ಹಳೆಯ ವಿದ್ಯಾರ್ಥಿಗಳು ವಿಡಿಐಟಿಯಲ್ಲಿ ಕಳೆದ ದಿನಗಳ ಅನುಭವ ಹಂಚಿಕೊಂಡರು.ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗವಕಾಶ ಸೃಷ್ಟಿಗೆ ಕೈಜೋಡಿಸುವ ಭರವಸೆ ನೀಡಿದರು. ಡಾ. ವಿನೋದ್ ನಾಯ್ಕ್ ಹಾಗೂ ಪ್ರೊ. ಸೂರಜ್ ಕಡ್ಲಿ ಸಂಯೋಜಿಸಿದ್ದರು. ಪ್ರೊ. ಲಕ್ಷ್ಮಿ ಹಟ್ಟಿಹೋಳಿ, ಪ್ರೊ. ವಿಜಯಲಕ್ಷ್ಮಿ ಕಲಾಲ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣರ ತತ್ವಗಳಿಗೆ ಮಾನ್ಯತೆ ಅಗತ್ಯ: ಎಚ್.ಕೆ. ಪಾಟೀಲ
ನೆಮ್ಮದಿಯ ಹುಡುಕಾಟದಲ್ಲಿ ತೊಡಗಿದ ಮನುಷ್ಯ: ಮುಪ್ಪಿನ ಬಸವಲಿಂಗ ಸ್ವಾಮೀಜಿ