ಇಂದಿನಿಂದ ಅನ್ನದಾನೀಶ್ವರ ಯಾತ್ರಾ ಮಹೋತ್ಸವ

KannadaprabhaNewsNetwork |  
Published : Feb 02, 2025, 11:48 PM IST
 ಮುಂಡರಗಿ ಅನ್ನದಾನೀಶ್ವರ ಯಾತ್ರಾಮಹೋತ್ಸವದ ಕುರಿತು ಜ.ಡಾ.ಅನ್ನದಾನೀಶ್ವರ ಸ್ವಾಮಿಜಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ಫೆ. 5ರಂದು ಸಂಜೆ 7 ಗಂಟೆಗೆ ಸಾವಯವ ಕೃಷಿ ಗೋಷ್ಠಿ ಜರುಗಲಿದ್ದು, ರೈತರಿಂದ ಸಿರಿಧಾನ್ಯಗಳ ಪ್ರದರ್ಶನ ಜರುಗಲಿದೆ. ನಂದಿಪುರದ ದೊಡ್ಡ ಬಸವೇಶ್ವರ ಮಠದ ಡಾ. ಮಹೇಶ್ವರ ಸ್ವಾಮೀಜಿ ಅತಿಥಿಗಳಾಗಿ ಆಗಮಿಸಲಿದ್ದು, ರಾಘವೇಂದ್ರ ಕುರಿಯವರಿಗೆ ಗುರು ರಕ್ಷೆ ಜರುಗಲಿದೆ.

ಮುಂಡರಗಿ: ಫೆ. 3ರಿಂದ ಫೆ.12ರವರೆಗೆ ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ 155ನೇ ಯಾತ್ರಾ ಮಹೋತ್ಸವವು ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ಜ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.3 ಸಂಜೆ 7 ಗಂಟೆಯಿಂದ 8:30ರವರೆಗೆ ವಚನ ಪ್ರವಚನ ಕಾರ್ಯಕ್ರಮದ ಉದ್ಘಾಟನೆ ಜರುಗಲಿದೆ. ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ದೋಣಿಯ ಶಶಿಧರ ಶಾಸ್ತ್ರಿಗಳು ಪ್ರವಚನ ಮಾಡಲಿದ್ದಾರೆ.

ಫೆ. 5ರಂದು ಸಂಜೆ 7 ಗಂಟೆಗೆ ಸಾವಯವ ಕೃಷಿ ಗೋಷ್ಠಿ ಜರುಗಲಿದ್ದು, ರೈತರಿಂದ ಸಿರಿಧಾನ್ಯಗಳ ಪ್ರದರ್ಶನ ಜರುಗಲಿದೆ. ನಂದಿಪುರದ ದೊಡ್ಡ ಬಸವೇಶ್ವರ ಮಠದ ಡಾ. ಮಹೇಶ್ವರ ಸ್ವಾಮೀಜಿ ಅತಿಥಿಗಳಾಗಿ ಆಗಮಿಸಲಿದ್ದು, ರಾಘವೇಂದ್ರ ಕುರಿಯವರಿಗೆ ಗುರು ರಕ್ಷೆ ಜರುಗಲಿದೆ.

ಫೆ. 6ರಂದು ಬೆಳಗ್ಗೆ 8:30ಕ್ಕೆ ಲಿಂಗ ನಾಯಕನಹಳ್ಳಿಯ ಜ. ಚನ್ನವೀರ ಮಹಾಸ್ವಾಮೀಜಿಯವರಿಂದ ಷಟಸ್ಥಲ ಧ್ವಜಾರೋಹಣ ಹಾಗೂ ಕಳಸಾರೋಹಣ ಜರುಗಲಿದೆ.

ನಂತರ ಕಲ್ಯಾಣ ಮಂಟಪದಲ್ಲಿ ರಕ್ತದಾನ ಹಾಗೂ ಉಚಿತ ಕಣ್ಣು ಮತ್ತು ಆರೋಗ್ಯ ತಪಾಸಣಾ ಶಿಬಿರ,ನಂತರ ಯೋಗ ತರಬೇತಿ ಹಾಗೂ ಯೋಗಾಸನದ ವಿವಿಧ ಆಟಗಳು ಜರುಗಲಿವೆ. ಮಧ್ಯಾಹ್ನ 12 ಗಂಟೆಗೆ ಅನ್ನಪೂರ್ಣೇಶ್ವರಿ ಪೂಜೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬ ಕಾರ್ಯಕ್ರಮ ಜರುಗಲಿದೆ. ಸಂಜೆ 7 ಗಂಟೆಗೆ ಅರಣ್ಯ ಹಾಗೂ ಪರಿಸರ ಜಾಗೃತಿ ಗೋಷ್ಠಿ ಜರುಗಲಿದ್ದು, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಅತಿಥಿಯಾಗಿ ಆಗಮಿಸಲಿದ್ದು, ಪ್ರೊ. ಸಿ.ಎಸ್. ಅರಸನಾಳ ಉಪನ್ಯಾಸ ನೀಡಲಿದ್ದಾರೆ.

ಫೆ.7ರಂದು ಸಂಜೆ 7ಗಂಟೆಗೆ ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರಿಂದ ಹಿತನುಡಿಗಳು ನಂತರ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಫೆ. 8ರಂದು ಆರೋಗ್ಯ ಹಾಗೂ ಜೀವನಶೈಲಿ ಕುರಿತು ಹುಲಕೋಟಿ ಕೆ.ಎಚ್. ಪಾಟೀಲ ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ.ಸತೀಶ ಹೊಂಬಾಳೆ ಮಾತನಾಡಲಿದ್ದಾರೆ. ನಂತರ ಸುವರ್ಣಗಿರಿಯ ಜ.ಸಿದ್ದಲಿಂಗ ಮಹಾಸ್ವಾಮೀಜಿ, ಹೂವಿನಹಡಗಲಿಯ ಡಾ. ಹಿರಿಯ ಶಾಂತವೀರ ಮಹಾಸ್ವಾಮೀಜಿ, ಲಿಂಗನಾಯಕನಹಳ್ಳಿಯ ನಿರಂಜನ ದೇವರು ನೇತೃತ್ವ ವಹಿಸಲಿದ್ದಾರೆ.

ಫೆ. 9ರಂದು ಸಂಜೆ 7ಗಂಟೆಗೆ ಪ್ರವಚನ ಮಂಗಳ ಹಾಗೂ ಮಹಿಳಾ ಗೋಷ್ಠಿ ಜರುಗಲಿದ್ದು, ಮೂಲೆಗದ್ದೆಯ ಅಭಿನವ ಚನ್ನಬಸವ ಮಹಾಸ್ವಾಮೀಜಿ ನೇತೃತ್ವ ವಹಿಸಲಿದ್ದು, ಹಿರೇಮಲ್ಲನಕೇರಿಯ ಚನ್ನಬಸವ ಮಹಾಸ್ವಾಮೀಜಿ, ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ, ಬಳಗಾನೂರಿನ ಶಿವಶಾಂತವೀರ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಧಾರವಾಡ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಪ್ರಸ್ತುತ ಮಹಿಳಾ ಸವಾಲುಗಳ ಬಗ್ಗೆ ಮಾತನಾಡಲಿದ್ದಾರೆ.

ಫೆ.10 ರಂದು ಬೆಳಗ್ಗೆ 6 ಗಂಟೆಗೆ 8ನೇ ಜಗದ್ಗುರುಗಳವರ 98ನೇ ಪುಣ್ಯಸ್ಮರಣೋತ್ಸವ, ಶಿವ ದೀಕ್ಷೆ ಹಾಗೂ ಅಯ್ಯಾಚಾರ ಜರುಗಲಿದ್ದು, ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಲಿದ್ದಾರೆ. ಬೆಳಗ್ಗೆ 11ಗಂಟೆಗೆ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ 25 ಜೋಡಿ ಸಾಮೂಹಿಕ ವಿವಾಹಗಳು ಜರುಗಲಿವೆ.

ರೋಣ ಶಾಸಕ ಜಿ.ಎಸ್. ಪಾಟೀಲ, ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ, ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಉಪಸ್ಥಿತರಿರುವರು.

ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಸಂಜೆ 5:30ಕ್ಕೆ ಧರ್ಮಸಭೆ ಜರುಗಲಿದ್ದು, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ. ಚಂದ್ರು ಲಮಾಣಿ, ಮುಖ್ಯಮಂತ್ರಿಗಳ ಹಣಕಾಸು ಸಲಹೆಗಾರ ಬಸವರಾಜ ರಾಯರೆಡ್ಡಿ, ಕೊಪ್ಪಳ ಸಂಸದ ಕೆ. ರಾಜಶೇಖರ್ ಹಿಟ್ನಾಳ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಬನ್ನಿಕೊಪ್ಪದ ದೊಡ್ಡವೆಂಕಣ್ಣ ಯೆರಾಶಿ ಆಗಮಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಮುಂಡರಗಿ ಶ್ರೀಗಳ ಗುರುವುದೇ ಭಾಗ ಎರಡು ಕೃತಿ ಬಿಡುಗಡೆ ಜರುಗಲಿದೆ.

ಫೆ. 11ರಂದು ಬೆಳಗ್ಗೆ 10 ಗಂಟೆಗೆ ನವ ದೆಹಲಿಯ ಶ್ರೀಕಂಠ ಚೌಡಕಿಮಠ ಇವರಿಗೆ ಶ್ರೀ ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಜರುಗಲಿದೆ. ನಂತರ ಜಗದ್ಗುರು ಅನ್ನದಾನೇಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಸಂಭ್ರಮದ ನೆನಹಿನಲ್ಲಿ ಜಗದ್ಗುರು ಅನ್ನದಾನೀಶ್ವರ ಸಿಬ್ಬಂದಿ ಸಮಾವೇಶ ಹಾಗೂ ನಿವೃತ್ತ ರಿಗೆ, ಪ್ರತಿಭಾವಂತರಿಗೆ ಪುರಸ್ಕಾರ ಜರುಗಲಿದೆ. ಶ್ರೀಮಠದ ಉತ್ತರ ಅಧಿಕಾರಿ ಜ.ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ವಿರೇಶ ಹಂಚಿನಾಳ ಅವರಿಗೆ ಗುರುರಕ್ಷೆ ಜರುಗಲಿದೆ. ಮುಖ್ಯ ಅತಿಥಿಗಳಾಗಿ ವಿಪ ಸದಸ್ಯ ಎಸ್.ವಿ. ಸಂಕನೂರ ಪಾಲ್ಗೊಳ್ಳಲಿದ್ದಾರೆ. ಸಂಜೆ 4.20ಕ್ಕೆ ಜಂಗಮೋತ್ಸವ, 6 ಗಂಟೆಗೆ ಭಕ್ತ ಹಿತ ಚಿಂತನ ಗೋಷ್ಠಿ ಜರುಗಲಿದ್ದು, ಕನಕಗಿರಿಯ ಡಾ. ಚನ್ನಮಲ್ಲ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಎಸ್.ಎಂ.ಹಿರೇಮಠ ರಚಿಸಿದ ಕರ್ನಾಟಕ ವೀರಶೈವ ಸಾಹಿತಿ ಭಾಗ-1, 2 ಗ್ರಂಥ ಬಿಡುಗಡೆಗೊಳ್ಳಲಿದೆ.ಮಾಜಿ ಸಂಸದ ಪ್ರತಾಪ್ ಸಿಂಹ ಉಪನ್ಯಾಸ ನೀಡಲಿದ್ದಾರೆ.

ಫೆ. 12ರಂದು ಸಂಜೆ 6ಗಂಟೆಗೆ ಹುಣ್ಣಿಮೆ ಕಾರ್ಯಕ್ರಮ ಹಾಗೂ ಶಿವಾನುಭೋಗೋಷ್ಠಿ ಜರುಗಲಿದೆ ಕುಕನೂರಿನ ಡಾ. ಮಹಾದೇವ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಮಕ್ಕಳ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ.

ಸುದ್ದಿಗೋಷ್ಠಿಯಲ್ಲಿ ಯಾತ್ರಾ ಕಮಿಟಿ ಅಧ್ಯಕ್ಷ ವಿ.ಜೆ. ಹಿರೇಮಠ, ದೇವ ಹಡಪದ, ಹಿರಿಯರಾದ ಕರಬಸಪ್ಪ ಹಂಚಿನಾಳ, ಎಂ.ಎಸ್.ಶಿವಶೆಟ್ಟರ, ಡಾ. ಬಿ.ಜಿ. ಜವಳಿ, ದೇವಪ್ಪ ಇಟಗಿ, ಶಿವು ವಾಲಿಕಾರ, ನಾಗರಾಜ ಮುರುಡಿ, ಹಾಲಯ್ಯ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ