ಮುಂಡರಗಿ: ತಾಲೂಕು ರೈತ ಸಂಘದ ಆಶ್ರಯದಲ್ಲಿ ಡಿ. ೨೫ರಂದು ಬೆಳಗ್ಗೆ ೧೧ಕ್ಕೆ ಪುರಸಭೆ ಮೈದಾನದಲ್ಲಿ ರೈತ ನಾಯಕ ದಿ. ಕೆ.ಎಸ್. ಪುಟ್ಟಣ್ಣಯ್ಯ ೭೫ನೇ ಜನ್ಮದಿನೋತ್ಸವ ನಿಮಿತ್ತ ತಾಲೂಕು ಅನ್ನದಾತರ ಸಮಾವೇಶ ಹಾಗೂ ಅನುಭವಿ ರೈತರ ಸನ್ಮಾನ ಜರುಗಲಿದೆ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜ. ಡಾ. ಅನ್ನದಾನೀಶ್ವರ ಸ್ವಾಮಿಗಳು, ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ತಾಲೂಕಿನ ಪ್ರತಿ ಗ್ರಾಮದಿಂದ ಇಬ್ಬರು, ಮೂವರು ಅನುಭವಿ ರೈತರು ಹಾಗೂ ರೈತ ಮಹಿಳೆಯರನ್ನು ಸನ್ಮಾನಿಸಲಾಗುವುದು.ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ಕಾರ್ಯಕ್ರಮ ಉದ್ಘಾಟಿಸುವರು. ತಾಲೂಕು ರೈತ ಸಂಘದ ಅಧ್ಯಕ್ಷ ಶರಣಪ್ಪ ಕಂಬಳಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್., ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರೆಡ್ಡಿ, ರಾಜ್ಯಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ ಸಂಕನಗೌಡ್ರು, ತಹಸೀಲ್ದಾರ್ ಎಂ. ಧನಂಜಯ, ಕುಮಟಾ ಸಹಾಯಕ ಕೃಷಿ ನಿರ್ದೇಶಕ ಟಿ.ಸಿ. ವೆಂಕಟೇಶಮೂರ್ತಿ, ಮುಂಡರಗಿ ಕೃಷಿ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ, ಸಿಪಿಐ ಮಂಜುನಾಥ ಕುಸುಗಲ್, ರಾಮಣ್ಣ ಇಲ್ಲೂರ, ಚಂದ್ರಕಾಂತ ಉಳ್ಳಾಗಡ್ಡಿ, ಹುಸೇನಸಾಬ ಕುರಿ, ಶರಣಪ್ಪ ಚನ್ನಳ್ಳಿ, ಚಂದ್ರಪ್ಪ ಬಳ್ಳಾರಿ, ವಂದನಾ ಬೆಲಿಗೌಡ್ರು, ಅಶ್ವಿನಿ ಗೌಡರ ಇತರರು ಪಾಲ್ಗೊಳ್ಳುವರು.
ಸುದ್ದಿಗೋಷ್ಠಿಯಲ್ಲಿ ಚಂದ್ರಪ್ಪ ಗದ್ದಿ, ಚಂದ್ರಕಾಂತ ಉಳ್ಳಾಗಡ್ಡಿ, ಶರಣಪ್ಪ ಕಂಬಳಿ, ಎಚ್.ಬಿ. ಕುರಿ, ಬಿಮೇಶ ಬಂಡಿವಡ್ಡರ, ಹುಚ್ಚಪ್ಪ ಹಂದ್ರಾಳ, ಕಸ್ತೂರವ್ವ ಅರಕೇರಿ, ಹನುಮವ್ವ ಹಲವಾಗಲಿ, ಅಶೋಕ ಬನ್ನಿಕೊಪ್ಪ, ವೀರೇಂದ್ರ ತಾಮ್ರಗುಂಡಿ, ಮಂಜಪ್ಪ ಹುಯಿಲಗೋಳ, ಶ್ರೀಕಾಂತಗೌಡ ಪಾಟೀಲ, ದೇವಪ್ಪ ಕೋವಿ ಇತರರು ಉಪಸ್ಥಿತರಿದ್ದರು.