ನಾಳೆ ವರ್ಧಂತ್ಯುತ್ಸವ ಕಾರ್ಯಕ್ರಮ

KannadaprabhaNewsNetwork |  
Published : Sep 25, 2026, 02:30 AM IST
(24ಎನ್.ಆರ್.ಡಿ3 ಶ್ರೀಗಳ ಪೋಟೋ.)  | Kannada Prabha

ಸಾರಾಂಶ

ಪಟ್ಟಣದ ತಪೋತಾಣ ಪುಣ್ಯಾರಣ್ಯ ಪತ್ರಿವನಮಠದ ನಿರಂಜನ ಗುರು ಶಂಭುಲಿಂಗ ಮಹಾಸ್ವಾಮಿಗಳ 101ನೇ ಸ್ಮರಣೆ, ಪ್ರಸ್ತುತ ಪೀಠಾಧ್ಯಕ್ಷ ಡಾ. ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳ 44ನೇ ವರ್ಧಂತ್ಯುತ್ಸವ ಸೆ.26ರಂದು ಅನಂತನ ಹುಣ್ಣಿಮೆಯಂದು ಜರುಗಲಿದೆ.

ನರಗುಂದ:

ಪಟ್ಟಣದ ತಪೋತಾಣ ಪುಣ್ಯಾರಣ್ಯ ಪತ್ರಿವನಮಠದ ನಿರಂಜನ ಗುರು ಶಂಭುಲಿಂಗ ಮಹಾಸ್ವಾಮಿಗಳ 101ನೇ ಸ್ಮರಣೆ, ಪ್ರಸ್ತುತ ಪೀಠಾಧ್ಯಕ್ಷ ಡಾ. ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳ 44ನೇ ವರ್ಧಂತ್ಯುತ್ಸವ ಸೆ.26ರಂದು ಅನಂತನ ಹುಣ್ಣಿಮೆಯಂದು ಜರುಗಲಿದೆ.

ಸೆ.26ರ ಬೆಳಗ್ಗೆ 10ಕ್ಕೆ ಶ್ರೀಗಳಿಗೆ ಭಕ್ತರೆಲ್ಲರೂ ಸೇರಿ ತೈಲಭ್ಯಂಗ ಸ್ನಾನ ಮಾಡಿಸಿ ಸಕಲ ರಾಜೋಪಚಾರ ಪೂಜೆಗಳ ಜರುಗಿದ ನಂತರ ತೊಟ್ಟಿಲು ಆರೋಹಣ, ಮಹಾತ್ಮರಿಂದ ಉಪದೇಶಾಮೃತ, ಮಧ್ಯಾಹ್ನ 1ಕ್ಕೆ ಮಹಾಗಣಾರಾಧನೆ ಜರುಗಿ ಕಾರ್ಯಕ್ರಮ ಮಂಗಲಗೊಳ್ಳುವುದು.

ಶಿರಹಟ್ಟಿಯ ಫಕೀರಸಿದ್ದರಾಮ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ತೋರಗಲ್ ಚನ್ನಮಲ್ಲ ಶಿವಾಚಾರ್ಯ ಶ್ರೀ, ಹೊಳೆ ಹುಚ್ಚೇಶ್ವರ ಶ್ರೀ, ಮುನವಳ್ಳಿ ಮುರಕೇಂದ್ರ ಶ್ರೀ, ನವಲಗುಂದ ಬಸವಲಿಂಗ ಶ್ರೀ, ನರಗುಂದ ಸಿದ್ದಲಿಂಗ ಶ್ರೀ, ಶಿವಕುಮಾರ ಶ್ರೀ, ಉಗರಗೋಳ ಮಹಾಂತ ಶ್ರೀ, ಢವಳೇಶ್ವರ ಹರ್ಲಾಪೂರ, ರೇಣುಕ ಶಿವಯೋಗಿ ಶ್ರೀ, ಕೊಣ್ಣೂರ ಚನ್ನವೀರ ಶ್ರೀ, ಗುಳೇದಗುಡ್ಡ ಒಪ್ಪತ್ತೇಶ್ವರ ಶ್ರೀ, ಕಿತ್ತಲಿ ಸಿದ್ದರಾಮ ಶ್ರೀ, ಬಾದಾಮಿ ಹಜರತ್ ಸೈಯದ್ ಮುಬಾರಕ್ ಬಾದಷಾ, ಕರೀಕಟ್ಟಿ ಗುರುನಾಥ ಶಾಸ್ತ್ರಿ, ಗದಗ ರುದ್ರೇಶ ಶ್ರೀ, ಹುಬ್ಬಳ್ಳಿ ಮೈಲಾರ ಅಜ್ಜನವರು, ಬನಹಟ್ಟಿ ಬಸಯ್ಯ ಸ್ವಾಮಿಗಳು ಸಮ್ಮುಖ ವಹಿಸಲಿದ್ದಾರೆ.

ಅತಿಥಿಗಳಾಗಿ ವಿಧಾನಸಭಾ ಅಧ್ಯಕ್ಷ ಜಿ.ಎಸ್. ಪಾಟೀಲ, ಶಾಸಕರಅದ ಸಿ.ಸಿ. ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ದೊಡ್ಡನಗೌಡ ಪಾಟೀಲ, ಎನ್.ಎಚ್. ಕೋನರಡ್ಡಿ, ವಿಶ್ವಾಸ ವೈದ್ಯ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ಶಂಕರ ಪಾಟೀಲ ಮುನೆನಕೊಪ್ಪ ಸೇರಿ ಇತರರು ಭಾಗವಹಿಸಲಿದ್ದಾರೆ.

ಪ್ರಭಾಕರ ಉಳ್ಳಾಗಡ್ಡಿ, ಶಿಕ್ಷಕ ಹೊಳೆಬಸಪ್ಪ ಬ್ಯಾಡಗಿ ಅವರಿಗೆ ಬಿಲ್ವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭ ಅಲಗಿಲವಾಡ ಮತ್ತು ಮಣಿಸಾಗರ ಸದ್ಭಕ್ತರಿಂದ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ನಡೆಯಲಿದೆ. ಹಾಸ್ಯ ಕಲಾವಿದ ಡಾ. ಜೀವನಸಾಬ ಬಿನ್ನಾಳ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಸದ್ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚ್ಚಿಲ: ಇಂದು ಶ್ರೀಮಾಧವ ಮಂಗಲರ ಪುತ್ಥಳಿ ಅನಾವರಣ
ನವದೆಹಲಿ: ಪೇಜಾವರ ಶ್ರೀ-ಹೊಸಬಾಳೆ ಭೇಟಿ