ಕೆ.ಎಂ.ದೊಡ್ಡಿ ಪಟ್ಟಣದ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಏ.17 ಮತ್ತು 18ರಂದು 4ನೇ ವರ್ಷದ ವಾರ್ಷಿಕ ಮಹೋತ್ಸವ ಮತ್ತು ಹರಿಸೇವೆಯನ್ನು ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆಗಳು ಆರಂಭಗೊಂಡಿದೆ.
ಕೆ.ಎಂ.ದೊಡ್ಡಿ:
ಪಟ್ಟಣದ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಏ.17 ಮತ್ತು 18ರಂದು 4ನೇ ವರ್ಷದ ವಾರ್ಷಿಕ ಮಹೋತ್ಸವ ಮತ್ತು ಹರಿಸೇವೆಯನ್ನು ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆಗಳು ಆರಂಭಗೊಂಡಿದೆ.
ಗ್ರಾಮದ ಶ್ರೀವೆಂಕಟೇಶ್ವರಸ್ವಾಮಿ ಹಾಗೂ ಹೊಸಕೆರೆ ಶ್ರೀಮಾಸ್ತಮ್ಮ ದೇವರ ಒಕ್ಕಲಿಗ ಕುಲಬಾಂಧವರು ದೇವಾಲಯ ನಿರ್ಮಿಸಿ ನಾಲ್ಕು ವರ್ಷವಾಗಿದ್ದು, ಇದರ ಅಂಗವಾಗಿ ವಾರ್ಷಿಕೋತ್ಸವವನ್ನು ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಏ.17ರಂದು ಮೇಲುಕೋಟೆಯ ಸ್ಥಾನಾಚಾರ್ಯ ಡಾ.ಶೆಲ್ವೆ ಪಿಳ್ಳೆ ಅಯ್ಯಂಗರ್ ನೇತೃತ್ವದಲ್ಲಿ ಜನರ ಒಳಿತಿಗಾಗಿ ಮಹಾಸುದರ್ಶನ ಹೋಮ ಜರುಗಲಿದ್ದು ಪುರೋಹಿತರಾದ ಯು.ವಿ.ಗಿರೀಶ್, ಅರ್ಚಕರಾದ ನರಸಿಂಹ ಭಟ್, ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಲಿದ್ದಾರೆ.
ಹರಿಸೇವೆ ಅಂಗವಾಗಿ ಭಾರತೀನಗರದ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದೀಪಾಲಂಕಗಳಿಂದ ಜಗಮಗಿಸಲಾಗುತ್ತಿದೆ. ಭಕ್ತರು ಸಂಜೆಯಿಂದಲೇ ದೇವಾಲಯ ಪ್ರಾಂಗಣ ತಲುಪುತ್ತಿದ್ದಾರೆ.
ಪ್ರತಿ ವರ್ಷದಂತೆ ಹರಿಸೇವೆ, ಏ.17ರಂದು ಶ್ರೀವೆಂಕಟೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷೇ ಪೂಜೆ, ಸಂಜೆ ಹೋಮ-ಹವನಗಳ ಕಾರ್ಯಕ್ರಮ ನಡೆಯಲಿದೆ. ಏ.18 ರಂದು ಬೆಳಗ್ಗೆ 10 ಗಂಟೆಗೆ ಪ್ರಶಾಂತ್ ಶಾಲೆಯ ಹತ್ತಿರದಿಂದ ಜನಪದ ಕಲಾತಂಡಗಳೊಂದಿಗೆ ಹಾಗೂ ಹೂ-ಹೊಂಬಾಳೆ ಮೂಲಕ ರಥದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ಭವ್ಯ ಮೆರವಣಿಗೆ ಮತ್ತು ಮುತ್ತತ್ತಿಯ ಕರಿಯಣ್ಣ - ಕೆಂಚಣ್ಣ ಸ್ವಾಮಿಗಳ ಪರಿಗೆ ಉತ್ಸವ ಮತ್ತು ಮತ್ತು ಮಣೆಸೇವೆ ಮೂಲಕ ವಿಶೇಷೇ ಪೂಜಾ ಕಾರ್ಯಕ್ರಮ ನಡೆಯಲಿದೆ.
ಶಿವಾರ ಉಮೇಶ್ ತಂಡದವರಿಂದ ಭಕ್ತಿ ಗೀತಗಾಯನ, ನಂತರ ಮಧ್ಯಾಹ್ನ 12.30ಕ್ಕೆ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನಸಂತರ್ಪಣೆನಡೆಯಲಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.27ರಂದು ಶ್ರೀಲಕ್ಷ್ಮೀಜನಾರ್ದನ ಸ್ವಾಮಿ ಬ್ರಹ್ಮರಥೋತ್ಸವ
ಮಂಡ್ಯ: ಧಾರ್ಮಿಕ ದತ್ತಿ ಇಲಾಖೆಯಿಂದ ಏ.27ರಂದು ನಗರದ ಶ್ರೀಲಕ್ಷ್ಮೀಜನಾರ್ಧನ ಸ್ವಾಮಿರವರ ಬ್ರಹ್ಮರಥೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 1 ಗಂಟೆಯಿಂದ 1.45 ಗಂಟೆಯೊಳಗೆ ಯಥಾವಿಧಿಯಾಗಿ ರಥೋತ್ಸವ ನಡೆಯುವುದರಿಂದ ಭಕ್ತ ಮಹನೀಯರು ಶ್ರೀಲಕ್ಷ್ಮೀಜನಾರ್ದನ ಸ್ವಾಮಿ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕು ಎಂದು ಜಿಲ್ಲಾ ಲಕ್ಷ್ಮೀಜನಾರ್ದನ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.