ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘದ ವಾರ್ಷಿಕ ಮಹಾಸಭೆ

KannadaprabhaNewsNetwork |  
Published : Nov 14, 2024, 12:47 AM IST
332 | Kannada Prabha

ಸಾರಾಂಶ

ಕಲಾವಿದರ ನಡುವೆ ಸಾಮರಸ್ಯವನ್ನು ಬೆಳೆಸಬೇಕೆಂಬ ಉತ್ತಮ ಉದ್ದೇಶವನ್ನಿಟ್ಟುಕೊಂಡು 12 ವರ್ಷಗಳ ಹಿಂದೆ, ಕೇಶವ ಶೆಟ್ಟಿಗಾರ್, ಕೇಶವ ಪೂಜಾರಿ ಇವರೆಲ್ಲರ ನೇತೃತ್ವದಲ್ಲಿ ಪ್ರಾರಂಭವಾದ ಸಂಘಟನೆ ಮೂಡುಬಿದಿರೆಯಲ್ಲಿ ಬಹಳ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘ ಮೂಡುಬಿದಿರೆ 12ನೇ ವರ್ಷದ ವಾರ್ಷಿಕ ಮಹಾಸಭೆ ಸಮಾರಂಭ ಕಾರ್ಯಕ್ರಮವು ಸಮಾಜಮಂದಿರದ ಮಿನಿ ಸಭಾಭವನದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲೆ ಶ್ವೇತಾ ಜೈನ್ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೂಡುಬಿದಿರೆ ಪರಿಸರದ ಕಲಾವಿದರೆಲ್ಲ ಸೇರಿಕೊಂಡು ಕಲಾವಿದರ ಸಂಘಟನೆಯಾಗಬೇಕು. ಇದರಿಂದ ಸಮಾಜದಲ್ಲೊಂದು ಪರಿವರ್ತನೆಯನ್ನು ತರಬೇಕು, ಕಲಾವಿದರ ನಡುವೆ ಸಾಮರಸ್ಯವನ್ನು ಬೆಳೆಸಬೇಕೆಂಬ ಉತ್ತಮ ಉದ್ದೇಶವನ್ನಿಟ್ಟುಕೊಂಡು 12 ವರ್ಷಗಳ ಹಿಂದೆ, ಕೇಶವ ಶೆಟ್ಟಿಗಾರ್, ಕೇಶವ ಪೂಜಾರಿ ಇವರೆಲ್ಲರ ನೇತೃತ್ವದಲ್ಲಿ ಪ್ರಾರಂಭವಾದ ಸಂಘಟನೆ ಮೂಡುಬಿದಿರೆಯಲ್ಲಿ ಬಹಳ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಮೂಡುಬಿದಿರೆ ಪರಿಸರದ ನೂರಾರು ಕಲಾವಿದರು ಸೇರಿಕೊಂಡು ವಾದ್ಯ ಅಥವಾ ಸಂಗೀತದ ಕ್ಷೇತ್ರದಲ್ಲಿರಬಹುದು ಇದರಲ್ಲೊಂದು ಹೊಸತನವನ್ನು ಕಟ್ಟಿ, ಸಂಘಟನೆಯ ಮೂಲಕ ಅಶಕ್ತ ಕಲಾವಿದರಿಗೆ ಸಹಕಾರವನ್ನು ನೀಡುವಂತಹ ಕೆಲಸವಾಗಬೇಕು. ಆ ಕಲಾವಿದರಿಗೆ ಸಮಾಜದಲ್ಲಿ ಉತ್ತಮ ಪ್ರೋತ್ಸಾಹ ಸಿಗಬೇಕು ಎಂದು ಅವರು ತಿಳಿಸಿದರು.

ಗೌರವಾಧ್ಯಕ್ಷ ಕೇಶವ ಶೆಟ್ಟಿಗಾರ್ , ಸಂಘದ ಅಧ್ಯಕ್ಷ ಸುರೇಶ್ ದೇವಾಡಿಗ, ಪುತ್ತೂರು ರಾಜರತ್ನಂ ದೇವಾಡಿಗ ಮತ್ತಿತರ ಈ ಸಂದರ್ಭದಲ್ಲಿದ್ದರು.ಸಂಘದ ಕೋಶಾಧಿಕಾರಿ ಲಕ್ಷ್ಮೀನಾರಾಯಣ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಹನಿ ಪ್ರಾರ್ಥನೆಗೈದು, ಉಪನ್ಯಾಸಕಿ ವಿನುತಾ ರೈ ಸ್ವಾಗತಿಸಿ, ಧನ್ಯವಾದಗೈದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ