ಬೆಳ್ತಂಗಡಿ: ಶಿಕ್ಷಣ ಇಲಾಖೆ ವತಿಯಿಂದ ನಡೆಯುತ್ತಿರುವ ಯೋಗಾಸನ ಸ್ಪರ್ಧೆಯ ಆಸನಗಳ ಆಯ್ಕೆ ಹಾಗೂ ತೀರ್ಪುಗಾರಿಕೆಗೆ ಯೋಗ ಶಿಕ್ಷಕರು ಹಾಗೂ ತೀರ್ಪುಗಾರರಿಗೆ ಪ್ರತಿ ವರ್ಷ ಕಾರ್ಯಾಗಾರ ನಡೆಸುವುದು ಅಗತ್ಯ ಎಂದು ರಾಜ್ಯ ಯೋಗ ತೀರ್ಪುಗಾರ ಅಜಿತ್ ಕುಮಾರ್ ಕುಕ್ರಾಡಿ ಅಭಿಪ್ರಾಯಪಟ್ಟಿದ್ದಾರೆ.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ, ಮುಗೇರಡ್ಕ ಮೊಗ್ರು ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಮೊಗ್ರು ಮುಗೇರಡ್ಕ ಸರ್ಕಾರಿ ಕಿ.ಪ್ರಾ. ಶಾಲೆಯಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಜ್ಞಾ, ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮ್, ಮೊಗ್ರು ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗದೀಶ ಅರ್ಬಿ, ಶ್ರೀಕ್ಷೇತ್ರ ಮುಗೇರಡ್ಕದ ಮೊಕ್ತೇಸರ ಚಂದ್ರಹಾಸ ದೇವಸ್ಯ, ಟ್ರಸ್ಟ್ ಕೋಶಾಧಿಕಾರಿ ಪುರಂದರ ಗೌಡ ಮತ್ತಿತರರು ಹಾಜರಿದ್ದರು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಮಾಧವ ಗೌಡ ಸ್ವಾಗತಿಸಿದರು. ಶಿಕ್ಷಕಿ ದಿವ್ಯಾ ವಂದಿಸಿದರು. ಶಿಕ್ಷ ಕೀರ್ತಿ ನಿರೂಪಿಸಿದರು.