ಸೇವೆಗೆ ಮತ್ತೊಂದು ಹೆಸರೇ ರೋಟರಿ

KannadaprabhaNewsNetwork |  
Published : Jul 11, 2024, 01:36 AM IST
ಪೋಟೊ೯ಸಿಪಿಟಿ೧: ರೋಟರಿ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚನ್ನಪಟ್ಟಣ: ಸೇವೆಗೆ ಮತ್ತೊಂದು ಹೆಸರೇ ರೋಟರಿ ಸಂಸ್ಥೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎ.ಟಿ.ಶಿವರಾಮ್ ಹೇಳಿದರು.

ಚನ್ನಪಟ್ಟಣ: ಸೇವೆಗೆ ಮತ್ತೊಂದು ಹೆಸರೇ ರೋಟರಿ ಸಂಸ್ಥೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎ.ಟಿ.ಶಿವರಾಮ್ ಹೇಳಿದರು.

ನಗರದ ರೋಟರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾ ಕ್ಷೇತ್ರದಲ್ಲಿ ರೋಟರಿ ಸಂಸ್ಥೆ ಸಾಕಷ್ಟು ಕೆಲಸ ಮಾಡಿದ್ದು, ನಾನೊಬ್ಬ ರೋಟರಿಯನ್ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಸಂಸ್ಥೆ ೫೧ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದು, ಈ ಅವಧಿಯಲ್ಲಿ ಸಂಸ್ಥೆ ಸಾಕಷ್ಟು ಸೇವಾ ಚಟುವಟಿಕೆಗಳನ್ನು ಕೈಗೊಂಡಿದೆ. ಆರೋಗ್ಯ, ಶಿಕ್ಷಣ, ಪರಿಸರ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದೆ. ಸಂಸ್ಥೆ ಸಮಾಜಮುಖಿ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿದ್ದು, ಅದನ್ನು ಅವರು ಯಶಸ್ವಿಯಾಗಿ ನಿಭಾಯಿಸಲಿ ಎಂದು ಶುಭಹಾರೈಸಿದರು.

ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟ ಜಿಲ್ಲಾ ಗೌರ್ವನರ್ ಬಿ.ಆರ್.ಶ್ರೀಧರ್ ಮಾತನಾಡಿ, ತಾಳ್ಮೆ ಪರಿಶ್ರಮ, ಛಲ, ನಾಯಕತ್ವದ ಗುಣಗಳನ್ನು ಕಲಿಸುವ ರೋಟರಿ ಸಂಸ್ಥೆಯು ಪ್ರತಿ ಸದಸ್ಯನಿಗೂ ಒಂದು ಪಾಠಶಾಲೆಯಾಗಿದೆ ಎಂದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನೇಶ್.ಬಿ ಮಾತನಾಡಿ, ಆರೋಗ್ಯ, ಶಿಕ್ಷಣ, ಸ್ವಚ್ಛತೆ ಸೇರಿದಂತೆ ಇನ್ನಿತರೆ ವಲಯಗಳಲ್ಲಿ ಸೇವೆ ಮಾಡುವ ಉತ್ಸಾಹ ಹೊಂದಿದ್ದೇನೆ. ಸದಸ್ಯರ ಸಹಕಾರದೊಂದಿಗೆ ಉತ್ತಮ ಕೆಲಸಗಳನ್ನು ಮಾಡುತ್ತೇನೆ ಎಂದರು.

ಪದಗ್ರಹಣದ ಬಳಿಕ ಎಸ್ಸೆಸ್ಸೆಲ್ಸಿ, ಪಿಯುಸಿ, ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜೋನ್ ಗೌರ್ವನರ್ ಎನ್.ರವಿಕುಮಾರ್, ಅಸಿಸ್ಟೆಂಟ್ ಗೌರ್ವನರ್ ಆರ್.ಮಲ್ಲೇಶ್, ಹಿಂದಿನ ರೋಟರಿ ಅಧ್ಯಕ್ಷ ಜಿ.ಕೆ.ವೆಂಕಟೇಶ್, ಕಾರ್ಯದರ್ಶಿ ರಾಮ್ ಪ್ರಸಾದ್, ಎಚ್.ಎಸ್.ಶ್ರೇಯಸ್, ಸಿ.ವಿ.ರಾಮು, ಪ್ರಸನ್ನ, ಗಣೇಶ್, ರಮೇಶ್, ನರ್ಸರಿ ಲೋಕೇಶ್, ರಘುನಾಥ್, ವಿನಯ್, ದಿಲೀಪ್, ಪುನೀತ್, ಹೇಮಂತ್, ಎಚ್.ಟಿ.ಭವ್ಯ ಇತರರಿದ್ದರು.

ಪೋಟೊ೯ಸಿಪಿಟಿ೧:

ಚನ್ನಪಟ್ಟಣ ರೋಟರಿ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ