ವಿರೋಧಿಗಳಿಗೆ ಅವರ ಭಾಷೆಯಲ್ಲಿಯೇ ಉತ್ತರಿಸಿ

KannadaprabhaNewsNetwork |  
Published : Mar 16, 2026, 12:15 AM IST
ಫೋಟೋ 15ಪಿವಿಡಿ1ಪಾವಗಡ,ಶಾಸಕರ ಅಭಿವೃದ್ಧಿ ಕೆಲಸಗಳ ಪ್ರಚಾರ ಹಾಗೂ ಅಪಪ್ರಚಾರಕ್ಕೆ  ಟಾಂಗ್ ನೀಡಲು ಸಾಮಾಜಿಕ ಜಾಲತಾಣ ಕಾರ್ಯಗಾರದಲ್ಲಿ ತಾಲೂಕು ಕಾಂಗ್ರೆಸ್‌ ಯುವ ಕಾರ್ಯಪಡೆ ಪದಾಧಿಕಾರಿಗಳು ಭಾಗವಹಿಸಿದ್ದರು. | Kannada Prabha

ಸಾರಾಂಶ

ಕ್ಷೇತ್ರದ ಶಾಸಕರಾದ ಎಚ್.ವಿ.ವೆಂಕಟೇಶ್ ಅವರು ಕೈಗೊಂಡಿರುವ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಅಪಪ್ರಚಾರ ಮಾಡುವವರಿಗೆ ಸಾಮಾಜಿಕ ಜಾಲ ತಾಣ ಮೂಲಕವೇ ತಕ್ಕ ಉತ್ತರ ನೀಡಲು ತಾಲೂಕಿನ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಜ್ಜಾಗಬೇಕೆಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸುಜಿತ್ ರಾಜ್ ರವರು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಕ್ಷೇತ್ರದ ಶಾಸಕರಾದ ಎಚ್.ವಿ.ವೆಂಕಟೇಶ್ ಅವರು ಕೈಗೊಂಡಿರುವ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಅಪಪ್ರಚಾರ ಮಾಡುವವರಿಗೆ ಸಾಮಾಜಿಕ ಜಾಲ ತಾಣ ಮೂಲಕವೇ ತಕ್ಕ ಉತ್ತರ ನೀಡಲು ತಾಲೂಕಿನ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಜ್ಜಾಗಬೇಕೆಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸುಜಿತ್ ರಾಜ್ ರವರು ಕರೆ ನೀಡಿದರು.

ತಾಲೂಕು ಯುವ ಕಾಂಗ್ರೆಸ್‌ದಿಂದ ಭಾನುವಾರ ಪಟ್ಟಣದ ತಾಲೂಕು ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣದ ಕಾರ್ಯಾಗಾರದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಾಸಕ ಎಚ್‌.ವಿ.ವೆಂಕಟೇಶ್‌ ಅಭಿವೃದ್ಧಿ ಕೆಲಸಗಳ ಪ್ರಚಾರಕ್ಕೆ ಯುವ ಘಟಕ ಸನ್ನದ್ಧರಾಗಬೇಕು. ಅಭಿವೃದ್ಧಿ ಕುರಿತು ವಿನಾ ಕಾರಣ ಅಪಪ್ರಚಾರ ಮಾಡುವವರಿಗೆ ದಾಖಲೆ ಸಮೇತ ಸೂಕ್ತ ಟಾಂಗ್ ನೀಡಲು ಕಾರ್ಯತಂತ್ರ ರೂಪಿಸುವ ಅನಿರ್ವಾತೆ ಇದೆ. ತಾಲೂಕಿನಲ್ಲಿ ಶಾಸಕರು ಜಾರಿಗೆ ತಂದಿರುವ ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ ಹಾಗೂ ಬಡವರಿಗಾಗಿ ಜಾರಿಗೆ ತಂದಿರುವ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರತಿ ಗ್ರಾಮದಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಹಾಗೂ ಪಕ್ಷದ ವಿರುದ್ಧ ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ಅಪಪ್ರಚಾರಗಳನ್ನು ಸಾಕ್ಷ್ಯಾಧಾರಗಳ ಸಮೇತ ಎದುರಿಸಬೇಕು ಎಂದು ಕರೆ ನೀಡಿದರು.

ಯುವಶಕ್ತಿಯೇ ಕಾಂಗ್ರೆಸ್‌ ಪಕ್ಷದ ಅಡಿಪಾಯ.ತಾಂತ್ರಿಕ ಯುಗದಲ್ಲಿ ನಾವು ಕೇವಲ ಮತದಾರರಲ್ಲ. ಬದಲಾವಣೆಯ ರೂವಾರಿಗಳಾಗಬೇಕು. ಸಾಮಾಜಿಕ ಜಾಲತಾಣಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸೋಣ ಹಾಗೂ ಪಕ್ಷಪರ ಚಟವಟಿಕೆಗಳು ಹೆಚ್ಚು ಶುರುಗೊಳಿಸುವ ಮೂಲಕ ಸಂಘಟನೆಗೆ ಹೆಚ್ಚು ಒತ್ತು ನೀಡುವಂತೆ ತಾಲೂಕು ಕಾಂಗ್ರೆಸ್‌ ಐಟಿ ಘಟಕದ ಪದಾಧಿಕಾರಿಗಳಿಗೆ ಸಲಹೆ ನೀಡಿರುವುದಾಗಿ ಹೇಳಿದರು.ತಾಲೂಕು ಯುವ ಕಾಂಗ್ರೆಸ್‌ ಮುಖಂಡರಾದ ಓಂಕಾರ ನಾಯಕ ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವೇ ನಡೆಯುತ್ತಿದೆ.ಆದರೆ ಕೆಲವರು ಇದನ್ನು ಸಹಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹರಡುತ್ತಿದ್ದಾರೆ. ಅಂತಹವರಿಗೆ ನಮ್ಮ ಯುವ ಕಾಂಗ್ರೆಸ್ ಸೈನ್ಯವು ಡಿಜಿಟಲ್ ವೇದಿಕೆ ಮೂಲಕವೇ ಮಣಿಸಬೇಕು. ನಮ್ಮ ಕ್ಷೇತ್ರದ ಶಾಸಕರು ಮಾಡಿರುವ ಅಭಿವೃದ್ಧಿ ಕೆಲಸಗಳು ಕೇವಲ ಅಂಕಿ-ಅಂಶಗಳಲ್ಲ. ಅವು ಜನರ ಬದುಕಿನ ಬದಲಾವಣೆಗಳು. ಈ ಪ್ರತಿಯೊಂದು ಸಾಧನೆಯನ್ನು ತಾಲೂಕಿನ ಕಟ್ಟಕಡೆಯ ಮನೆಗೂ ತಲುಪಿಸುವುದು ನಮ್ಮ ಯುವ ಕಾಂಗ್ರೆಸ್ ಪಡೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಈ ವೇಳೆ ತಾಲೂಕು ಯುವ ಕಾಂಗ್ರೆಸ್‌ ಮುಖಂಡರಾದ ಹನುಮೇಶ್, ನವೀನ್,ಮದನ್ ರೆಡ್ಡಿ, ವಿ.ಎಚ್‌.ಪಾಳ್ಯ ಪಾಪಣ್ಣ,ಮಣಿ.ಪಿ.ಎಲ್.ಸುಮನ್, ಲಿಂಗುಪಾಳೇಗಾರ್, ಹರೀಶ್, ಚಿರಂಜೀವಿ,ಗೋವಿಂದ ಸೇರಿದಂತೆ ಇತರೆ ಆನೇಕ ಮಂದಿ ಕಾಂಗ್ರೆಸ್‌ ಪರ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ನೇರ ಬಳಕೆಗಲ್ಲ
ಲಾರಿಗೆ ಕಾರು ಡಿಕ್ಕಿ: ಮೂವರು ಆರ್‌ಎಸ್‌ಐಗಳ ಸಾವು