ಮಾದಕ ವ್ಯಸನ, ಅಕ್ರಮ ಸಾಗಾಣಿಕೆ ವಿರೋಧಿ‌ ಅಭಿಯಾನ

KannadaprabhaNewsNetwork |  
Published : Jun 27, 2026, 01:30 AM IST
ಮಾದಕವಸ್ತು  | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ‌ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ‌ ದಿನಾಚರಣೆ ಕುರಿತು ಬೃಹತ್ ಜಾಗೃತಿ ಜಾಥಾ ಸುಳ್ಯದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸುಳ್ಯ

ದಕ್ಷಿಣ ಕನ್ನಡ‌ ಜಿಲ್ಲಾ ಪೊಲೀಸ್, ಸುಳ್ಯ ಪೊಲೀಸ್ ಠಾಣೆ, ಪ್ರೆಸ್ ಕ್ಲಬ್ ಸುಳ್ಯ, ಸ.ಪ.ಪೂ. ಕಾಲೇಜು, ಸಂಕೇಶ ಫೌಂಡೇಶನ್ ಸಹಿತ ಹಲವು ಸಂಘಟನೆಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ‌ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ‌ ದಿನಾಚರಣೆ ಕುರಿತು ಬೃಹತ್ ಜಾಗೃತಿ ಜಾಥಾ ಸುಳ್ಯದಲ್ಲಿ ನಡೆಯಿತು.ಸುಳ್ಯ ಜ್ಯೋತಿ ಸರ್ಕಲ್ ಬಳಿಯಲ್ಲಿ ಸುಳ್ಯ ಪೊಲೀಸ್ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಜಾಥಾಕ್ಕೆ ಚಾಲನೆ ನೀಡಿದರು. ಸುಳ್ಯ ಸಬ್ ಇನ್ ಸ್ಪೆಕ್ಟರ್ ಸಂತೋಷ್ ಬಿ.ಪಿ., ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ಪಿ.ಬಿ. ಸುಧಾಕರ ರೈ, ಎಂ.ಬಿ. ಸದಾಶಿವ, ಸಂಕೇಶ ಫೌಂಡೇಶನ್ ಸಂಚಾಲಕ ಅಬ್ದುಲ್ ರಹಿಮಾನ್ ಸಂಕೇಶ, ಸೀಫುಡ್ ಮಾಲೀಕ ಇಬ್ರಾಹಿಂ, ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಮಾಜಿ ಅಧ್ಯಕ್ಷ ಭಾಸ್ಕರ್ ರಾವ್, ಪದಾಧಿಕಾರಿಗಳಾದ ದೇವಿ ಪ್ರಸಾದ್ ಆಳ್ವ, ಹರೀಶ್ ಬೂಡುಪನ್ನೆ, ಚಂದ್ರಶೇಖರ ಉದ್ದಂತಡ್ಕ, ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಮ್ ಮೋಹನ್, ನಿಯೋಜಿತ ಅಧ್ಯಕ್ಷೆ ಲತಾ ಮಧುಸೂದನ್, ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಈಶ್ವರ ವಾರಣಾಶಿ, ತಾಲೂಕು ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಹೇಮಂತ್, ಸುಳ್ಯ ಪಯಸ್ವಿನಿ ಜೇಸಿ ಅಧ್ಯಕ್ಷೆ ‌ಲತಾಶ್ರೀ ಸುಪ್ರೀತ್ ಮೋಂಟಡ್ಕ, ಜೇಸಿ ಸಿ.ಟಿ. ಅಧ್ಯಕ್ಷೆ ನಾಗವೇಣಿ, ಎಸ್.ವೈ.ಎಸ್. ಪದಾಧಿಕಾರಿಗಳು, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಸುಳ್ಯ ಸೈಂಟ್ ಜೋಸೆಫ್ ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸ್ ಇಲಾಖೆ, ಪ್ರೆಸ್ ಕ್ಲಬ್ ಪದಾಧಿಕಾರಿಗಳು, ಸಂಘ ಸಂಸ್ಥೆಗಳ‌ ಪದಾಧಿಕಾರಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಜ್ಞೆ ಬೋಧಿಸಲಾಯಿತು. ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿ ಸಂಕೋಲೆಯಿಂದ ಸಮಾಜ ಬಿಡುಗಡೆಯಾಗಲಿ
ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ