ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು: ಪೂರ್ಣಿಮಾ

KannadaprabhaNewsNetwork |  
Published : Feb 11, 2025, 12:46 AM IST
ಕೊಟ್ಟೂರಿನಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕೆಜಿ ಪೂರ್ಣಿಮ , ದೇವರಮನೆ ಕರಿಯಪ್ಪ ಉದ್ಗಾಟಿಸಿದರು | Kannada Prabha

ಸಾರಾಂಶ

ಜಗತ್ತಿಗೆ ಮೊದಲ ಸಂಸತ್ತನ್ನು ಅನುಭವ ಮಂಟಪದ ಮೂಲಕ ಪರಿಚಯಿಸಿದವರು 12ನೇ ಶತಮಾನದ ಶರಣರು

ಕೊಟ್ಟೂರು: ಜಗತ್ತಿಗೆ ಮೊದಲ ಸಂಸತ್ತನ್ನು ಅನುಭವ ಮಂಟಪದ ಮೂಲಕ ಪರಿಚಯಿಸಿದವರು 12ನೇ ಶತಮಾನದ ಶರಣರು ಎಂದು ಉಪನ್ಯಾಸಕೆ ಕೆ.ಜೆ. ಪೂರ್ಣಿಮಾ ಹೇಳಿದರು.

ಪಟ್ಟಣದ ನ್ಯೂ ಭಾರತಿ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ ಕಾಮಶೆಟ್ಟಿ ತೀಪ್ಪೆಸ್ವಾಮಿ ದತ್ತಿ ಉಪನ್ಯಾಸಕ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ಮಾಡಿದರು.

ಶರಣರ ವಚನಗಳಲ್ಲಿ ವೈಚಾರಿಕತೆಯನ್ನು ಇರುವುದನ್ನು ಸಮಾಜದ ಜನತೆ ಒಪ್ಪಿಕೊಂಡು ಶರಣರ ವಿಚಾರಧಾರೆಗೆ ಒಗ್ಗಿಕೊಂಡು ಬದುಕು ರೂಪಿಸಿಕೊಳ್ಳಲು ಮುಂದಾದರು ಎಂದರು.

ಶರಣರ ಸಾಹಿತ್ಯ ಪರಿಷತ್ ತಾಲೂಕು ಉಪಾಧ್ಯಕ್ಷೆ ಎಸ್.ಎಂ. ನಳಿನ ಮಾತನಾಡಿ, ಲಿಂ.ಜ.ಡಾ. ಶಿವರಾತ್ರಿ ಮಹಾಸ್ವಾಮಿ ದೂರದೃಷ್ಟಿಯ ನೋಟ ಶರಣ ಸಾಹಿತ್ಯ ಪರಿಷತ್ ಉದಯಕ್ಕೆ ಕಾರಣವಾಯಿತು ಎಂದರು. ಕಾರ್ಯದರ್ಶಿ ಹೊಂಬಾಳೆ ಮಂಜುನಾಥ, ಖಜಾಂಚಿ ಅಂಗಡಿ ಚಂದ್ರಣ್ಣ, ಟಿ.ಕೆ. ಸಿದ್ದರಾಮೇಶ್ ಮಾತನಾಡಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವರಮನೆ ಕರಿಯಪ್ಪ ಅಧ್ಯಕ್ಷತೆ ವಹಿಸಿದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಸುಜಾತ, ಜಂಬೂರು ಕುಮಾರಸ್ವಾಮಿ, ಮಂಗಳ ದೇವರಮನೆ, ತುಪ್ಪದ ವೀರಣ್ಣ, ದೇವರಮನೆ ಕೊಟ್ರೇಶ್, ಬಿ.ಎಂ. ಗಿರೀಶ್ ಮಲ್ಲಿಕಾರ್ಜುನ್, ಜಂಬೂರು ಕೊಟ್ರೇಶ್ ಇದ್ದರು. ಮತ್ತಿಹಳ್ಳಿ ನಾಗರಾಜ ಸ್ವಾಗತಿಸಿದರು. ಜಿ.ಸಿದ್ದಣ್ಣ ವಂದಿಸಿದರು. ವಿ.ಅನುರಾಧ ವಚನ ಸಂಗೀತ ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ