ಅಮ್ಮನ ಕಾಳಜಿ ಇದ್ದರೇ ಎಂಥ ಸೋಲನ್ನು ಸೋಲಿಸಬಹುದು

KannadaprabhaNewsNetwork |  
Published : May 30, 2024, 12:57 AM IST
ಅಅಅ | Kannada Prabha

ಸಾರಾಂಶ

ಅಮ್ಮನ ಕಾಳಜಿ ಇದ್ದರೇ ಎಂಥ ಸೋಲನ್ನು ಸೋಲಿಸಬಹುದು ಎಂದು ವಿಶ್ವ ಅಮ್ಮಂದಿರ ದಿನಾಚರಣೆಯಲ್ಲಿ ನಿವೃತ್ತ ಸೈನಿಕ ಜಗದೀಶ್ ಪೂಜಾರಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಾತ್ಸಲ್ಯ, ಮಮತೆ ಇವುಗಳ ರೂಪಕವೇ ಆಗಿರುವ ಅಮ್ಮನ ಕಾಳಜಿಯೊಂದು ಇದ್ದರೇ ಎಂಥ ಸೋಲನ್ನು ಸೋಲಿಸಬಹುದು. ಕುಟುಂಬಕ್ಕಾಗಿ ದಣಿವರಿಯದೇ ದುಡಿಯುವ ಅಮ್ಮಂದಿರಿಗೂ ಆರೈಕೆಯ ಅಗತ್ಯವಿದೆ ಎಂದು ನಿವೃತ್ತ ಸೈನಿಕ ಜಗದೀಶ್ ಪೂಜಾರಿ ಹೇಳಿದರು.

ನಗರದ ಶಾಂತಾಯಿ ವೃದ್ಧಾಶ್ರಮದಲ್ಲಿ, ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಸಂಸ್ಥೆಗಳ ವತಿಯಿಂದ ಆಯೋಜಿಸಲಾದ ವಿಶ್ವ ಅಮ್ಮಂದಿರ ದಿನಾಚರಣೆಯನ್ನು ಆಚರಿಸಿ, ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಲ ಬದಲಾಂದತೆ ಸಂಸ್ಕೃತಿ, ಸಂಸ್ಕಾರ ತೀವ್ರ ಬದಲಾಗಿದೆ. ಮಕ್ಕಳ ಏಳಿಗೆಗೆ ಹಗಲಿರುಳು ಶ್ರಮಿಸಿದ ಪೋಷಕರನ್ನು ಮಕ್ಕಳು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ಬಹಳ ದುಃಖಕರ. ಕೊನೆ ಗಳಿಗೆಯಲ್ಲಿ ತಂದೆ, ತಾಯಿಯರು ಮಕ್ಕಳಿಂದ ಆರೈಕೆಯ ಬಯಸುತ್ತಾರೆ. ಇಳಿವಯಸ್ಸಿನಲ್ಲಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದಂತಾಗುತ್ತಿದೆ ಎಂದು ವಿಷಾದಿಸಿದರು. ಮಕ್ಕಳಂತೆ ವೃದ್ಧರು ಪಾಲನೆ, ಪೋಷಣೆ ಮಾಡುತ್ತಿರುವ ಶಾಂತಾಯಿ ವೃದ್ಧಾಶ್ರಮದ ಸೇವೆ ಅನನ್ಯ, ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಸಂಸ್ಥೆಗಳು ಸಾಮಾಜಿಕ ಸಮಸ್ಯೆಗೆ ಸಹಾಯ, ಸಹಕಾರ ನೀಡುತ್ತಿರುವುದು ಸಂತಸ ತಂದಿದೆ.

ಶಾಂತಾಯಿ ವೃದ್ಧಾಶ್ರಮ ಸಂಸ್ಥಾಪಕ ವಿಜಯ ಮೋರೆ ಹಾಗೂ ಮಾರಿಯಾ ಮೋರಿಯವರು ಮಾತನಾಡಿ, ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನದವರು ಪ್ರತಿ ವರ್ಷವೂ ಆಶ್ರಮಕ್ಕೆ ಆಗಮಿಸಿ ಇಲ್ಲಿನ ತಂದೆ,ತಾಯಿಗಳಿಗೆ ಅವಶ್ಯಕತೆವಿರುವ ವಸ್ತುಗಳನ್ನು ನೀಡಿ ಅವರೊಂದಿಗೆ ಸಂತೋಷವನ್ನು ಹಂಚಿಕೊಂಡು ಹೋಗುತ್ತಾರೆ. ಅವರ ಸಾಮಾಜಿಕ ಕಳಕಳಿ ತುಂಬಾ ಶ್ರೇಷ್ಠವಾದು ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರೇಮಾ ಉಪಾಧ್ಯೆ ಅಶ್ವಿನಿ, ನವಲೆ ನೃತ್ಯ ಮಾಡಿದರು. ಕಾರ್ಯದರ್ಶಿ ರೇಣುಕಾ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ರೀಶೀಲಾ ಪ್ಪಾಯಪ್ಪನವರ ಅತಿಥಿ ಪರಿಚಯಿಸಿದರು. ಅಶ್ವಿನಿ ನವಲೆ ನಿರೂಪಿಸಿದರು. ಶಕುಂತಲಾ ಖಿನ್ನವರ ವಂದಿಸಿದರು. ಅಧ್ಯಕ್ಷೆ ಮಂಗಲ ಮಠದ ಸ್ವಾಗತಿಸಿದರು. ಪಾರ್ವತಿ ಡಂಗ ಹಾಗೂ ಮಂದಾಕಿ ನೆರ್ಲೇಕರ್ ಪ್ರಾರ್ಥಿಸಿದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌