ಕೃಷಿ ಬಿಟ್ಟರೆ ನಮ್ಮ ಸಂಸ್ಕೃತಿಯೇ ಅಲ್ಲ

KannadaprabhaNewsNetwork |  
Published : Nov 26, 2024, 12:48 AM IST
ಪ್ರಶಸ್ತಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ: ಕೃಷಿಗಿಂತ ಬೇರೆ ಸಂಸ್ಕೃತಿ ಇಲ್ಲ ಅದನ್ನು ನಾವೆಲ್ಲರೂ ಬಿಟ್ಟರೆ ಅದು ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ ಎಂದು ಖ್ಯಾತ ಕೃಷಿ ವಿಜ್ಞಾನಿ ಪದ್ಮಶ್ರೀ ಡಾ.ಎಸ್ ಅಯ್ಯಪ್ಪನ್ ಹೇಳಿದರು. ಪಟ್ಟಣದ ಸಾರಂಗಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನದಿಂದ ನೀಡಲಾಗುವ ಖಗೋಳ ವಿಜ್ಞಾನಿ ಭಾಸ್ಕರಾಚಾರ್ಯರ-2 ಹೆಸರಿನ ಮೇಲೆ ನೀಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ರೈತರನ್ನು ನಾವು ಯಾವತ್ತೂ ರೈತರೆಂದು ಕರೆಯಬಾರದು ಅವರು ಕೃಷಿ ಋಷಿಗಳಾಗಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಸಿಂದಗಿ:

ಕೃಷಿಗಿಂತ ಬೇರೆ ಸಂಸ್ಕೃತಿ ಇಲ್ಲ ಅದನ್ನು ನಾವೆಲ್ಲರೂ ಬಿಟ್ಟರೆ ಅದು ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ ಎಂದು ಖ್ಯಾತ ಕೃಷಿ ವಿಜ್ಞಾನಿ ಪದ್ಮಶ್ರೀ ಡಾ.ಎಸ್ ಅಯ್ಯಪ್ಪನ್ ಹೇಳಿದರು. ಪಟ್ಟಣದ ಸಾರಂಗಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನದಿಂದ ನೀಡಲಾಗುವ ಖಗೋಳ ವಿಜ್ಞಾನಿ ಭಾಸ್ಕರಾಚಾರ್ಯರ-2 ಹೆಸರಿನ ಮೇಲೆ ನೀಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ರೈತರನ್ನು ನಾವು ಯಾವತ್ತೂ ರೈತರೆಂದು ಕರೆಯಬಾರದು ಅವರು ಕೃಷಿ ಋಷಿಗಳಾಗಿದ್ದಾರೆ ಎಂದರು.

ಕೃಷಿ ಇಲ್ಲದೆ ಬದುಕಿಲ್ಲ, ಅನ್ನದಾತನಿಲ್ಲದೆ ಜೀವವಿಲ್ಲ. ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು ಅನ್ನದಾತನಿಗೆ ಗೌರವ ನೀಡಬೇಕು. ಈ ದೇಶದ ಪ್ರಗತಿ ಕೃಷಿ ಮೇಲೆ ಮತ್ತು ಅನ್ನದಾತನ ಮೇಲೆ ಅವಲಂಬಿತವಾಗಿದೆ. ಎಲ್ಲ ಕ್ಷೇತ್ರಗಳಿಗಿಂತ ಕೃಷಿ ಕ್ಷೇತ್ರ ಅತ್ಯಂತ ಪವಿತ್ರವಾಗಿದೆ. ಮಣ್ಣಿನ ವಾಸನೆ ಮಣ್ಣಿನ ಸಂಬಂಧ ಮಣ್ಣಿನ ಸಂಪರ್ಕ ನಮಗೆ ಹೆಚ್ಚಾದಷ್ಟು ಬದುಕಿನಲ್ಲಿ ಹೆಚ್ಚು ಅನುಭವ ಮೂಡುತ್ತದೆ. ಮಾಧ್ಯಮ ಮತ್ತು ಸಮೂಹ ಸಂವಹನಗಳು ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದರಿಂದ ಇಂದು ರೈತ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಬದಲಾವಣೆಯಾಗುತ್ತಿರುವ ವಾತಾವರಣದ ಮಧ್ಯದಲ್ಲಿ ಅನ್ನದಾತ ಅತ್ಯಂತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಬರುವ ದಿನಗಳಲ್ಲಿ ನಮಗೆಲ್ಲ ಚಿನ್ನ ಸಿಗುತ್ತದೆ. ಆದರೆ ಅನ್ನ ಸಿಗುವುದಿಲ್ಲ. ಈ ದೇಶದಲ್ಲಿ ಕೃಷಿ ಕ್ರಾಂತಿಯಾದಾಗ ಮಾತ್ರ ಭಾರತ ದೇಶ ಅತ್ಯಂತ ಬಲಿಷ್ಠ ರಾಷ್ಟ್ರವಾಗುತ್ತದೆ. ಈ ದೇಶದ ಪ್ರತಿ ಕೃಷಿ ವಿಶ್ವವಿದ್ಯಾಲಯಗಳು ಅನ್ನ ದೇಗುಲವಾಗಿ ಕಾರ್ಯನಿರ್ವಹಿಸುತ್ತಿವೆ. ನಿಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಕೃಷಿಜ್ಞಾನ ಮತ್ತು ಆ ಕ್ಷೇತ್ರದ ಕಡೆಗೆ ಕ್ಷೇತ್ರದ ಕಡೆಗೆ ಗಮನಹರಿಸುವಂತೆ ಮಾಡಬೇಕಾಗಿದ್ದು ಅತ್ಯಂತ ಮುಖ್ಯವಾಗಿದೆ ಎಂದು ಎಚ್ಚರಿಸಿದರು.ಈ ವೇಳೆ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಆಲೂರ ಮಾತನಾಡಿ, ಕೃಷಿ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್ ಅವರು ಕೃಷಿ ಕ್ಷೇತ್ರದ ಸದ್ಗುರುವಾಗಿ ಅನೇಕ ರೈತರ ಬಾಳನ್ನು ಬೆಳಗಿ ಮಾರ್ಗದರ್ಶನ ನೀಡಿದವರು. ಈ ಕ್ಷೇತ್ರದಲ್ಲಿ ಅವರು ಪುರುಷ ಲೋಹವಾಗಿ ಕಾರ್ಯನಿರ್ವಹಿಸಿದ್ದಾರೆ. ಸಿಂದಗಿ ಸಾರಂಗಮಠ ಅವರನ್ನು ಗುರುತಿಸಿ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಕೃಷಿ ಕ್ಷೇತ್ರದ ದೊಡ್ಡ ಶಕ್ತಿಗೆ ನೀಡಿದ ಪ್ರಶಸ್ತಿಯಾಗಿದೆ ಎಂದು ಶ್ಲಾಘಿಸಿದರು.ಈ ಸಂದರ್ಭದಲ್ಲಿ ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಡಾ.ಭೀಮಪ್ಪ, ಕೃಷಿ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್ ಅವರ ಧರ್ಮಪತ್ನಿ ಉಮಾ ಅಯ್ಯಪ್ಪನ್ ಮಾತನಾಡಿದರು. ಸಾನಿಧ್ಯವನ್ನು ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು.ಕೊಣ್ಣೂರು ಹೊರಗಿನ ಕಲ್ಯಾಣ ಮಠದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ್ ಶಹಾಪುರ, ಡಾ.ರವೀಂದ್ರ ಬೆಳ್ಳಿ, ಡಾ.ಬಿ.ಎನ್.ಮೋಟಗಿ, ಡಾ.ಅಶೋಕ್ ಸಜ್ಜನ್, ವಿವೇಕಾನಂದ ಸಾಲಿಮಠ, ಸಂಸ್ಥೆಯ ನಿರ್ದೇಶಕರಾದ ಅಶೋಕ್ ವಾರದ್, ಅಶೋಕ್ ಮಸಳಿ, ಗಂಗಾಧರ್ ಜೋಗುರ, ಹ.ಮ.ಪೂಜಾರಿ, ಡಾ.ಬಿ.ಜಿ.ಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ರವಿ ಗೋಲಾ ಮತ್ತು ಪೂಜಾ ಹಿರೇಮಠ ನಿರೂಪಿಸಿದರು, ಡಾ.ಶರಣಬಸವ ಜೋಗುರ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!
ತನಗೆ ಮದುವೆ ಮಾಡಿದ್ದ ಪುರೋಹಿತಗೂ ರಾಜೀವ್‌ ಲಾಂಗ್‌ ತೋರಿಸಿ ಧಮ್ಕಿ