ಧಾರವಾಡ:
ಗಣಿತ, ಸಮಾಜ ವಿಜ್ಞಾನ ಹಾಗೂ ಹಿಂದಿ ವಿಷಯಗಳಿಗೆ 100ಕ್ಕೆ 100 ಅಂಕ, ಕನ್ನಡಕ್ಕೆ 125 ಅಂಕ ಹಾಗೂ ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳಿಗೆ 99 ಸೇರಿ ಒಟ್ಟು 623 ಅಂಕ ಪಡೆದಿದ್ದಾಳೆ ಅಪೇಕ್ಷಾ.
ಜಿಲ್ಲೆಯ ವಿವಿಧ ಶಾಲೆಗಳ ಐದು ವಿದ್ಯಾರ್ಥಿಗಳು 625ಕ್ಕೆ 622 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಧಾರವಾಡದ ಮಲ್ಲಸಜ್ಜನ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರತೀಕ ಸರದಾರ ಗಣಿತ, ಇಂಗ್ಲಿಷ್, ಸಮಾಜ ವಿಜ್ಞಾನಕ್ಕೆ 100ಕ್ಕೆ 100, ಕನ್ನಡಕ್ಕೆ 125, ಹಿಂದಿ ಹಾಗೂ ವಿಜ್ಞಾನಕ್ಕೆ 98 ಸೇರಿ ಒಟ್ಟು 622 ಅಂಕ ಪಡೆದಿದ್ದಾನೆ.ನವಲಗುಂದ ತಾಲೂಕಿನ ತಿರ್ಲಾಪುರ ಸರ್ಕಾರಿ ಪ್ರೌಢಶಾಲೆಯ ಐಶ್ವರ್ಯಾ ಮಂಜುನಾಥ ರಾಯ್ಕರ್, ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯದ ಸಾಕ್ಷಿ ಕುಲಕರ್ಣಿ, ಹುಬ್ಬಳ್ಳಿಯ ಮದರ್ಸ ಮಾರ್ಸ್ ಶಾಲೆಯ ಪಲ್ಲವಿ ಮಂಜುನಾಥ ಮಾನೆ, ಆರ್‌ವಿಎಸ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯ ಪ್ರೇಮಾಬಾಯಿ ದೇಸಾಯಿ ತಲಾ 622 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ನಿತ್ಯ ಶಾಲಾ ಶಿಕ್ಷಕರ ಪಾಠದೊಂದಿಗೆ ನಾಲ್ಕೈದು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಶಿಕ್ಷಕರ ಮಾರ್ಗದರ್ಶನದೊಂದಿಗೆ ವೈಯಕ್ತಿಕವಾಗಿ ನನ್ನ ಅಧ್ಯಯನವೂ ಇತ್ತು. ತಂದೆ ಸಹ ಶಿಕ್ಷಕರು. ಹೀಗಾಗಿ ಹೆಚ್ಚಿನ ಓದಿಗೆ ಅವಕಾಶ ಸಿಕ್ಕಿತು. ಪಿಯುಸಿಯಲ್ಲಿ ವಿಜ್ಞಾನ ಕಲಿತು ನೀಟ್ ಬರೆದು ವೈದ್ಯಳಾಗುವ ಕನಸಿದೆ.
ಶಾಲಾ ಶಿಕ್ಷಕರ ಮಾರ್ಗದರ್ಶನದೊಂದಿಗೆ ವೈಯಕ್ತಿಕ ಓದಿನೊಂದಿಗೆ ನಾನು ಹೊಂದಿದ್ದ ಗುರಿ ತಲುಪಿದ್ದೇನೆ. ಕಠಿಣ ಪರಿಶ್ರಮ ಇದ್ದರೆ ಏನಾದರೂ ಸಾಧಿಸಬಹುದು ಎಂಬುದು ಗೊತ್ತಾಗಿದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಓದಿ ಎಂಜಿನಿಯರ್ ಆಗುವ ಕನಸಿದೆ.
ಐಶ್ವರ್ಯಾಗೆ 622 ಅಂಕನವಲಗುಂದ ತಾಲೂಕಿನ ತಿರ್ಲಾಪುರದ ನಾಗಮ್ಮ ಚಿನ್ನರೆಡ್ಡಿ ವೀರರೆಡ್ಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಐಶ್ವರ್ಯಾ ಮಂಜುನಾಥ್ ರಾಯ್ಕರ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ತಂದೆ ಬಂಗಾರ ವ್ಯಾಪಾರಸ್ಥರು. ತಾಯಿ ಗೃಹಿಣಿ. ರಾಜ್ಯಕ್ಕೆ ಮೊದಲು ಬರುವ ಇಚ್ಛೆ ಹೊಂದಿದ್ದು, ಮೂರು ಅಂಕಗಳಿಂದ ಪ್ರಥಮ ಸ್ಥಾನ ವಂಚಿತವಾಗಿದ್ದಾಳೆ. ಗ್ರಾಮದಲ್ಕಿಯೇ 1ರಿಂದ 10ನೇ ತರಗತಿ ವರೆಗೂ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿ, ಯಾವುದೇ ಟ್ಯೂಷನ್ ಹೋಗದೆ ಶಾಲೆ ಶೇ. 99.52ರಷ್ಟು ಫಲಿತಾಂಶ ಪಡೆದಿದ್ದಾಳೆ ಐಶ್ವರ್ಯಾ.