)
ಕನ್ನಡಪ್ರಭವಾರ್ತೆ ಬೆಂಗಳೂರು
ಇದಕ್ಕಾಗಿ ಜಿಬಿಎ ಡಿಕ್ಲಟರ್ (DClutter) ತಂತ್ರಾಂಶ ಬಿಡುಗಡೆ ಮಾಡಿದ್ದು, ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಿಕೊಂಡು ಕೋರಿಕೆ ಸಲ್ಲಿಸಬಹುದು ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಣಾಧಿಕಾರಿ ಕರೀಗೌಡ ತಿಳಿಸಿದರು.
ಆ್ಯಪ್‌ಗೆ ಚಾಲನೆ ನೀಡಿದ ಕರಿಗೌಡ ಅವರು, ಬಿಎಡಬ್ಲ್ಯುಎಂಎಲ್ ವತಿಯಿಂದ ಹಳೆಯ ಪೀಠೋಪಕರಣಗಳು, ಸೋಫಾಗಳು, ಹಾಸಿಗೆ, ಹಳೆಯ ಬಟ್ಟೆಗಳು, ಒಡೆದ ಸ್ಯಾನಿಟರಿ ಸಿಂಕ್ ಸಾಮಗ್ರಿ, ಹಳೆಯ ಕಮೋಡ್‌ಗಳು, ಚಪ್ಪಲಿ ಹಾಗೂ ಇತರೆ ದೊಡ್ಡ ಗಾತ್ರದ ಗೃಹ ಬಳಕೆಯ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿರಲಿಲ್ಲ. ಇದೀಗ “ಡಿಕ್ಲಟರ್” (DClutter) ಮೊಬೈಲ್ ತಂತ್ರಾಂಶ ಪರಿಚಯಿಸಿದೆ. ನಾಗರಿಕರು ತಮ್ಮ ಮನೆಗಳಲ್ಲಿರುವ ಬೃಹತ್ ತ್ಯಾಜ್ಯ ವಿಲೇವಾರಿಗೆ ಮಾಹಿತಿಯನ್ನು ಆ್ಯಪ್ ಮೂಲಕ ಸಲ್ಲಿಸಬೇಕು. ಆ್ಯಪ್‌ನಲ್ಲಿ ಬರುವ ಕೋರಿಕೆ ಹಾಗೂ ತ್ಯಾಜ್ಯದ ಪ್ರಮಾಣ ಹಾಗೂ ಸ್ವರೂಪವನ್ನು ಅವಲಂಬಿಸಿ ವಾರಕ್ಕೆ ಒಮ್ಮೆ ತ್ಯಾಜ್ಯ ಸಂಗ್ರಹಣೆ ನಡೆಸಲಾಗುತ್ತದೆ. ತ್ಯಾಜ್ಯದಲ್ಲಿ ಮರುಬಳಕೆ ಸಾಧ್ಯವಿರುವ ವಸ್ತುಗಳನ್ನು ಅಧಿಕೃತ ಮರುಬಳಕೆ ಘಟಕಗಳಿಗೆ ಕಳುಹಿಸಲಾಗುವುದು. ಮರುಬಳಸಲಾಗದ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಲು ವೆಸ್ಟ್-ಟು-ಎನರ್ಜಿ ಘಟಕಗಳಿಗೆ ರವಾನಿಸಲಾಗುತ್ತದೆ ಎಂದರು.ಡಿಕ್ಲಟರ್ ಕಾರ್ಯನಿರ್ವಹಿಸುವ ವಿಧಾನ: