ಅಪ್ಪಾ ಪಬ್ಲಿಕ್ ಶಾಲೆ: ಇಂಟ್ರಾ ಸ್ಕೂಲ್‌ ಸ್ಪೆಲ್ಲಿಂಗ್ ಬೀ ಸ್ಪರ್ಧೆ

KannadaprabhaNewsNetwork |  
Published : Sep 25, 2026, 01:15 AM IST
ಫೋಟೋ- ಸ್ಪೇಲಿಂಗ್‌ ಬೀ | Kannada Prabha

ಸಾರಾಂಶ

ಕಲಬುರಗಿಯ ಪ್ರತಿಷ್ಟಿತ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ವಿಭಾಗದ 9 ಮತ್ತು 12 ನೇ ತರಗತಿಯ ಮಕ್ಕಳಿಗೆ ಇಂಟ್ರಾ ಸ್ಕೂಲ್ ಸ್ಪೆಲ್ಲಿಂಗ್ ಬೀ ಅಧ್ಯಾಯ 6 ರ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. 9 ನೇ ಮತ್ತು 12 ನೇ ತರಗತಿಯಿಂದ ಒಟ್ಟು 51 ಮಕ್ಕಳು 3 ನೇ ಹಂತಕ್ಕೆ ಆಯ್ಕೆಗೊಂಡಿದ್ದರು. 3 ಸುತ್ತಿನಲ್ಲಿ ತರಗತಿಯ ಎಲ್ಲಾ ಮಕ್ಕಳಿಗೂ ಬರವಣಿಗೆ ರೂಪದಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಗರಿಷ್ಠ ಅಂಕಗಳನ್ನು ಪಡೆದ 51 ವಿದ್ಯಾರ್ಥಿಗಳು 2 ನೇ ಹಂತಕ್ಕೆ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕಲಬುರಗಿ ಕಲಬುರಗಿಯ ಪ್ರತಿಷ್ಟಿತ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ವಿಭಾಗದ 9 ಮತ್ತು 12 ನೇ ತರಗತಿಯ ಮಕ್ಕಳಿಗೆ ಇಂಟ್ರಾ ಸ್ಕೂಲ್ ಸ್ಪೆಲ್ಲಿಂಗ್ ಬೀ ಅಧ್ಯಾಯ 6 ರ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. 9 ನೇ ಮತ್ತು 12 ನೇ ತರಗತಿಯಿಂದ ಒಟ್ಟು 51 ಮಕ್ಕಳು 3 ನೇ ಹಂತಕ್ಕೆ ಆಯ್ಕೆಗೊಂಡಿದ್ದರು. 3 ಸುತ್ತಿನಲ್ಲಿ ತರಗತಿಯ ಎಲ್ಲಾ ಮಕ್ಕಳಿಗೂ ಬರವಣಿಗೆ ರೂಪದಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಗರಿಷ್ಠ ಅಂಕಗಳನ್ನು ಪಡೆದ 51 ವಿದ್ಯಾರ್ಥಿಗಳು 2 ನೇ ಹಂತಕ್ಕೆ ಆಯ್ಕೆಯಾದರು.ವಿದ್ಯಾರ್ಥಿಗಳ ಭಾಷಾ ಕೌಶಲ್ಯ ಮತ್ತು ಶಬ್ದ ಭಂಡಾರ ಹೆಚ್ಚಿಸುವ ಉದ್ದೇಶದಿಂದ ಎಲ್ಲ ವಿಷಯಗಳ ಪಠ್ಯಪುಸ್ತಕದಿಂದ 1540 ಶಬ್ದಗಳನ್ನು ಆಯ್ದುಕೊಂಡು 2ನೇ ಹಂತದ ಸ್ಪರ್ಧೆ ಏರ್ಪಡಿಸಲಾಗಿತ್ತು.

2 ಕ್ಷಿಪ್ರ ಪ್ರತಿಕ್ರಿಯೆಯುಳ್ಳ (ರಾಪಿಡ್ ಫೈರ್) ಸುಮಾರು 17 ಸುತ್ತುಗಳ ಸ್ಪರ್ಧೆಯ ನಂತರ ವಿಜೇತರು ಹೊರಹೊಮ್ಮಿದರು. (ರಾಪಿಡ್ ಫೈರ್) ದ 2 ನೇ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಾದ ಅಪೂರ್ವ ಕಟ್ಟಿ (ಪ್ರಥಮ ಸ್ಥಾನ), ಸ್ನೇಹಾ ವಿಜಯಕುಮಾರ ನವದಿ (ದ್ವಿತೀಯ ಸ್ಥಾನ), ಆಶ್ರಿತಾ ಮಲ್ಲಿಕಾರ್ಜುನ ವಾಲಿ (ತೃತೀಯ ಸ್ಥಾನ ) ಪಡೆದು ಆಯ್ಕೆಯಾಗಿದ್ದಾರೆ. 1ನೇ ತರಗತಿಯಿಂದ ಪ್ರಾರಂಭವಾಗುವ ಈ ಸ್ಪೆಲ್ಲಿಂಗ್ ಬೀ ಸ್ಪರ್ಧೆ 12 ನೇ ತರಗತಿಯ ಮಕ್ಕಳವರೆಗೂ ಮುಂದುವರಿದಿತ್ತು. ಅಪ್ಪಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶಂಕರಗೌಡ ಹೊಸಮನಿ, ಉಪ ಪ್ರಾಂಶುಪಾಲ ವಿಜು ಕಲ್ಲಾರ್ ಜೋಸ್, ಸಂಯೋಜಕರಾದ ಸುನೀತಾ ಜೂಪಳ್ಳಿ , ಮಂಜುನಾಥ. ವೈ. ಪಾಟೀಲ, ವಿಭಾಗದ ಸಂಯೋಜಕ ಜೋಸೆಫ್ ವರ್ಗೀಸ್ , ಪ್ರತಿಮಾ ಪಾಟೀಲ, ಸಂಗಮೇಶ ಬೋರೋಟಿ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಈ ಪ್ರಯತ್ನ ಶ್ಲಾಘಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು ಭಾಷಾ ಕಲಿಕೆಯನ್ನು ಹೆಚ್ಚಿಸುವ ಇಂತಹ ಸ್ಪರ್ಧೆಗಳು ಮುಂದುವರೆಯಲಿ ಎಂದರು. ಮಕ್ಕಳ ಉನ್ನತ ಕಲಿಕೆಯ ಮಟ್ಟದಿಂದ ರಾಷ್ಟ್ರದ ಪ್ರಗತಿಯು ದಿಟವೆಂದು ಹೇಳುತ್ತ ಆಶೀರ್ವದಿಸಿ ಸಂತಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸರವಳ್ಳಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ
ಚಿಂಚೋಳಿ ಪಟ್ಟಣದಲ್ಲಿ ರಸ್ತೆ ದುರಸ್ತಿ ಮರೀಚಿಕೆ