ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
ಯಕ್ಷಗಾನದ ಕೇದಿಗೆ ಮಂದಲೆ ತೊಡಿಸಿ, ಮಣಿಸರದೊಂದಿಗೆ ಹೆಗ್ಡೆಯವರನ್ನು ಶೃಂಗರಿಸಿ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪ್ಪಣ್ಣ ಹೆಗ್ಡೆ, ಯಕ್ಷಗಾನ ಸಮಾಜವನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ, ಧರ್ಮವಂತರನ್ನಾಗಿ ಬಾಳಲು ಸಹಕರಿಸುತ್ತದೆ. ಪುರಾಣ ಮುಂತಾದ ಅನೇಕ ವಿಚಾರಗಳನ್ನು ತಿಳಿಸುತ್ತಾ ಜನರನ್ನು ವಿದ್ಯಾವಂತರನ್ನಾಗಿಸುತ್ತದೆ. ಇಂತಹ ಕಲೆಯನ್ನು ಉಳಿಸಿ ಬೆಳಸುವ ಬಗ್ಗೆ ಪರಿಶ್ರಮಿಸುತ್ತಿರುವ ಯಕ್ಷಗಾನ ಕಲಾ ಕೇಂದ್ರಕ್ಕೆ ಶುಭ ಹಾರೈಸಿದರು.ಕಲಾ ಕೇಂದ್ರದ ಅಧ್ಯಕ್ಷ ಆನಂದ ಕುಂದರ್, ಅಪ್ಪಣ್ಣ ಹೆಗ್ಡೆ ಅವರ ತೊಂಬತ್ತರ ಜನ್ಮದಿನಕ್ಕೆ ಶುಭ ಹಾರೈಸಿದರು.
ಭಾಗವತರಾದ ರಾಘವೇಂದ್ರ ಮಯ್ಯ ಮತ್ತು ಗಣೇಶ ಆಚಾರ್ಯ, ವಿಷ್ಣುಮೂರ್ತಿ ಬೇಳೂರರು ರಚಿಸಿದ ಅಪ್ಪಣ್ಣ ಹೆಗ್ಡೆ ಅವರ ಕುರಿತ ಯಕ್ಷ ಪದ್ಯವನ್ನು ಹಾಡಿದರು.ವಾಸುದೇವ ಕಾರಂತ, ವೈಕುಂಠ ಹೇರ್ಳೆ, ಸೀತಾರಾಮ ಸೋಮಯಾಜಿ, ವಿಶ್ವೇಶ್ವರ ಹೊಳ್ಳ, ಪ್ರಭಾಕರ ಐತಾಳ್, ಅಂಬರೀಷ್ ಭಟ್ಟ, ಮಾಧವ ಮಣೂರು, ಗಣೇಶ ಚೇರ್ಕಾಡಿ, ದಿನೇಶ್ ಪಡಿಯಾರ್, ಮೇಘಶ್ಯಾಮ ಹೆಬ್ಬಾರ್, ರಾಘವೇಂದ್ರ ಹೊಳ್ಳ, ರಾಮನಾಥ ಅಲ್ಸೆ, ಶ್ರೀನಿವಾಸ ಉಪಾಧ್ಯ, ಸತ್ಯನಾರಾಯಣ ಭಟ್ಟ, ಕಲಾಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಾಕೇಂದ್ರ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ವಿಷ್ಣುಮೂರ್ತಿ ಬೇಳೂರು ವಂದಿಸಿದರು.