ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಲಕ್ಷ್ಮೀ ನಗರದಲ್ಲಿ ಬಣಜಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಟಿಎಂಸಿ ನಂ.1837 ಖಾಲಿ ಪ್ಲಾಟ್‌ನ್ನು ಬಣಜಿಗ ಸಮಾಜದ ವಿವಿಧ ಕಾರ್ಯಕ್ರಮ ನಡೆಸಲು ಮತ್ತು ಸಾಂಸ್ಕೃತಿಕ ಭವನ ನಿರ್ಮಿಸಿಕೊಳ್ಳಲು ನಿವೇಶನ ನೀಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಶಿವಪ್ಪ ಬುಜನ್ನವರ, ಸಂಗಪ್ಪ ಅಂಗಡಿ, ವಿ.ಸಿ.ಗಾಡವಿ, ಗಂಗಪ್ಪ ಪುಠಾಣಿ, ವಿ.ಎಸ್.ಸಬರದ, ಅನ್ವರ ನದಾಫ, ಹುಸೇನ ಶೆಖ್ಖ, ರಮೇಶ ಸಣ್ಣಕ್ಕಿ, ಎಲ್.ಸಿ.ಗಾಡವಿ ಮತ್ತಿತರರು ಉಪಸ್ಥಿತರಿದ್ದರು.