ಕನ್ನಡಪ್ರಭ ವಾರ್ತೆ ಭಟ್ಕಳ
ಮುರಿನಕಟ್ಟೆ ಪ್ರದೇಶದಲ್ಲಿ ಹೆದ್ದಾರಿ ಮಧ್ಯೆ ನಿರ್ಮಿಸಲಾದ ಮುರಿನಕಟ್ಟೆ ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ಇರುವ ರೀತಿಯಲ್ಲಿ ಇಲ್ಲದ ಕಾರಣ ಕಟ್ಟೆಯನ್ನು ಕೆಲ ಬದಲಾವಣೆ ಮಾಡಬೇಕು. ಪ್ರಸ್ತುತ ಮುರಿನಕಟ್ಟೆಯ ತಳಪಾಲ ಡಿವೈಡರಿನಿಂದ ಕೇವಲ 8 ಇಂಚು ಇದ್ದು ಇದನ್ನು 2 ಅಡಿಯ ಎತ್ತರ ಮಾಡುವುದು. ಮುರಿನಕಟ್ಟೆಯನ್ನು ಹೊರತುಪಡಿಸಿ ಮುರಿನಕಟ್ಟೆಯ ಮುಂಭಾಗ ಮತ್ತು ಹಿಂಭಾಗದುದ್ದಕ್ಕೂ ಸುಮಾರು 50 ಮೀಟರ್ ಉದ್ದ ಡಿವೈಡರಿನಲ್ಲಿ ಅಳವಡಿಸಿರುವ ಸ್ವೀಲ್ ಗ್ರೀಲ್ ಎತ್ತ ಮುರಿನಕಟ್ಟೆಯ ಗ್ರೀಲ್ ನ ಎತ್ತರಕ್ಕೆ ಸರಿಸಮಾನವಾಗಿದ್ದು, ಇದರಿಂದ ಮುರಿನಕಟ್ಟೆಯು ಗೋಚರವಾಗದ ಕಾರಣಕ್ಕೆ ಡಿವೈಡರಿನಲ್ಲಿ ಹಾಕಿದ ಸ್ಟೀಲ್ ಗ್ರೀಲ್ ಅಳತೆಯನ್ನು ಒಂದೂವರೆ ಅಡಿ ಕಡಿಮೆ ಮಾಡುವುದು. ಪ್ರಸ್ತುತ ನಿರ್ಮಾಣ ಮಾಡಲಾದ ಮುರಿನಕಟ್ಟೆಗೆ ನಾಮಫಲಕ ಅಳವಡಿಸಿ ಸ್ಥಳೀಯ ಹಿಂದೂಗಳ ಧಾರ್ಮಿಕ ಶ್ರದ್ಧೆಯಂತೆ ಪೂಜಾ ಕಾರ್ಯ ನಡೆಸಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಡಬೇಕು. ಮಾರಿ ಹೊರೆ ತೆಗೆಯಲು ಮತ್ತು ಪೂಜಾ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರೂ ಇನ್ನೂ ತನಕ ಕ್ರಮ ಕೈಗೊಂಡಿಲ್ಲ. ಹಿಂದೂಗಳ ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಗುವ ಪೂರ್ವದಲ್ಲಿ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ಮಾಜಿ ಸಚಿವ ಶಿವಾನಂದ ನಾಯ್ಕ, ಪಶ್ಚಿಮ ಘಟ್ಟಗಳ ಕಾರ್ಯಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಈಶ್ವರ ನಾಯ್ಕ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಯಂತ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ಕುಮಾರ ನಾಯ್ಕ ಮುಂತಾದವರಿದ್ದರು.