ಕ್ರೀಡಾಂಗಣ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

KannadaprabhaNewsNetwork | Published : Nov 23, 2024 12:30 AM

ಸಾರಾಂಶ

ಉಮಾ ವಿದ್ಯಾಲಯ ಮೈದಾನವು ತಾಲೂಕು ಕ್ರೀಡಾಂಗಣವಾಗಬೇಕು ಎಂಬುದು ತಾಲೂಕಿನ ಕ್ರೀಡಾಪಟುಗಳ ಹಾಗೂ ಕ್ರೀಡಾ ಅಭಿಮಾನಿಗಳ ಆಶಯ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಯಾವುದೇ ಕ್ರೀಡಾಂಗಣ ಇಲ್ಲದೆ ಇರುವುದರಿಂದ ಕ್ರೀಡಾಪಟುಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕ್ರೀಡಾಳುಗಳಿಗೆ ಅವಶ್ಯವಾಗಿರುವ ಕ್ರೀಡಾಂಗಣ ನಿರ್ಮಿಸಲು ಒತ್ತಾಯಿಸಿ ಕ್ರೀಡಾ ಪ್ರೇಮಿಗಳು ತಹಸೀಲ್ದಾರ ಮೂಲಕ ಕ್ರೀಡಾ ಸಚಿವರಿಗೆ ಗುರುವಾರ ಮನವಿ ಸಲ್ಲಿಸಿದರು.

ಪಟ್ಟಣದ ಪುರಸಭೆಯ ಉಮಾ ವಿದ್ಯಾಲಯ ಮೈದಾನದಲ್ಲಿ ಸದ್ಯ ಕ್ರೀಡಾಪಟುಗಳಿಗೆ ತಮ್ಮ ಕ್ರೀಡಾ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ ಈ ಕ್ರೀಡಾಂಗಣವು ರಾತ್ರಿಯಾದರೆ ಅನೈತಿಕ ಚಟುವಟಿಕೆಗಳ (ಮದ್ಯ ಪ್ರೀಯರ) ತಾಣವಾಗುತ್ತಿದೆ.ಸಂಜೆಯಾಗುತ್ತಲೆ ಮೈದಾನದಲ್ಲಿ ಅಕ್ರಮವಾಗಿ ಕುಡಿದ ಖಾಲಿ ಬಾಟಲಿಗಳನ್ನು ಮೈದಾನದಲ್ಲಿ ಒಡೆದು ಹೋಗುತ್ತಿದ್ದಾರೆ.ಇದರಿಂದ ಬೆಳಗ್ಗೆ ಮೈದಾನಕ್ಕೆ ಕ್ರೀಡಾಪಟುಗಳು ಆಟೋಟಕ್ಕೆ ಬರುವ ಹಾಗೂ ವಾಯು ವಿಹಾರಕ್ಕೆಂದು ಬರುವ ಸಾರ್ವಜನಿಕರಿಗೆ ಒಡೆದ ಗಾಜುಗಳು ಚೂರುಗಳು ಕಾಲಿಗೆ ಚುಚ್ಚಿದ ಉದಾಹರಣೆಗಳು ಇವೆ. ಮೈದಾನದ ಪಕ್ಕದಲ್ಲಿ ವಾಸವಾಗಿರುವ ಗುಡಿಸಲು ನಿವಾಸಿಗಳು ಮೈದಾನದ ಅಕ್ಕಪಕ್ಕದಲ್ಲಿ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.ಇದರಿಂದ ಮೈದಾನಕ್ಕೆ ಬರುವ ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಮುಜುಗುರವಾಗುತ್ತಿದ್ದು ಆದ ಕಾರಣ ಸಂಬಂಧಪಟ್ಟ ಇಲಾಖೆ ಹಾಗೂ ಆಡಳಿತ ಮಂಡಳಿ ಕೂಡಲೆ ಕ್ರೀಡಾಗಂಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಉಮಾ ವಿದ್ಯಾಲಯ ಮೈದಾನವು ತಾಲೂಕು ಕ್ರೀಡಾಂಗಣವಾಗಬೇಕು ಎಂಬುದು ತಾಲೂಕಿನ ಕ್ರೀಡಾಪಟುಗಳ ಹಾಗೂ ಕ್ರೀಡಾ ಅಭಿಮಾನಿಗಳ ಆಶಯವಾಗಿದ್ದು, ಒಂದು ತಿಂಗಳ ಒಳಗಾಗಿ ಕ್ರೀಡಾಂಗಣವಾಗುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಲಕ್ಷೇಶ್ವರ ತಾಲೂಕಿನ ಎಲ್ಲ ಕ್ರೀಡಾಪಟುಗಳು ಸೇರಿ ಪ್ರತಿಭಟನೆಯ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಮೋಹನ ನಂದೆಣ್ಣವರ, ಸದಾನಂದ ನಂದೆಣ್ಣವರ, ಮಹಾಂತೇಶ ಗುಡಿಸಲಮನಿ, ರಬ್ಬಾನಿ ಶಿರಹಟ್ಟಿ, ಮುಜಮಮಿಲ್ಲ ಮಕಾಂದಾರ, ಮಲ್ಲಿಕಾರ್ಜುನ ಸಾಲ್ಮನಿ, ಸಂತೋಷ ಹಾದಿಮನಿ, ಸಂತೋಷ ನಂದೆಣ್ಣವರ, ನಿಂಗಪ್ಪ ಬಾಲಣ್ಣವರ, ಹನಮಂತಪ್ಪ ನಡುವಲಕೇರಿ, ವಿಷ್ಣು ಕೆ. ಆದಿತ್ಯ ಗಡದವರ, ಚೇತನ ಗೋಡಕೆ, ಆನಂದ ನರೇಗಲ್ಲ, ಬಸವರಾಜ ಗಡದವರ ಇದ್ದರು.

Share this article