ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಮನವಿ

KannadaprabhaNewsNetwork |  
Published : Aug 30, 2026, 02:00 AM IST
ಸವಣೂರು ಪಟ್ಟಣದ ಪುರಸಭೆ ಕಾರ್ಯಾಲಯದ ಎದುರಿಗೆ ಬಾಕಿ ಬಿಲ್‌ಗಳನ್ನು ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಾರ ಗುತ್ತಿಗೆದಾರರ ಮಹಾಸಭಾ, ಕರ್ನಾಟಕ ರಾಜ್ಯ ಎಸ್‌ಸಿ., ಎಸ್‌ಟಿ ಗುತ್ತಿಗೆದಾರರ ಸಂಘ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಆರಂಭಿಸಿರುವ ಅನಿರ್ಧಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಶುಕ್ರವಾರ ಉಪ ವಿಭಾಗಾಧಿಕಾರಿ ವಿಜಯಕುಮಾರ ಎಚ್.ಬಿ.,, ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದರು | Kannada Prabha

ಸಾರಾಂಶ

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಾರ ಗುತ್ತಿಗೆದಾರರ ಮಹಾಸಭಾ, ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಆರಂಭಿಸಿರುವ ಅನಿರ್ದಿಷ್ಟಾ ವಧಿ ಮುಷ್ಕರ ಶುಕ್ರವಾರ ಐದನೇಯ ದಿನಕ್ಕೆ ತಲುಪಿತು.

ಸವಣೂರ: ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಾರ ಗುತ್ತಿಗೆದಾರರ ಮಹಾಸಭಾ, ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಆರಂಭಿಸಿರುವ ಅನಿರ್ದಿಷ್ಟಾ ವಧಿ ಮುಷ್ಕರ ಶುಕ್ರವಾರ ಐದನೇಯ ದಿನಕ್ಕೆ ತಲುಪಿತು.

ಐದನೇಯ ದಿನವಾದ ಶುಕ್ರವಾರ ಪುರಸಭೆ ಕಾರ್ಯಾಲಯದ ಎದುರಿಗೆ ಹಾಕಿದ್ದ ಪೆಂಡಾಲ್‌ನಲ್ಲಿ ಹಲಗೆ ಬಾರಿಸುವ ಜೊತೆಗೆ ಗುತ್ತಿಗೆದಾರರು ಅರೆಬೆತ್ತಲೆ ಪ್ರತಿಭಟನೆಗೆ ಮುಂದಾದರು.

ಸುದ್ದಿ ತಿಳಿದು ಉಪ ವಿಭಾಗಾಧಿಕಾರಿ ವಿಜಯಕುಮಾರ ಎಚ್.ಬಿ. ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಈ ಕುರಿತು ಇಲಾಖೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ನಿಮ್ಮ ಬೇಡಿಕೆ ಈಡೇರಿಸಲಾಗುವದು. ಅನುದಾನ ಬಿಡುಗಡೆಗಾಗಿ ಪತ್ರ ಬರೆಯುವ ಮೂಲಕ ನಿಮಗೆ ಸ್ಪಂದಿಸಲಾಗುವದು. ಪ್ರತಿಭಟನೆಯನ್ನು ಕೈಬಿಡುವಂತೆ ಮನವೊಲಿಸಲು ಮುಂದಾದರು. ತಕ್ಷಣ ಆಕ್ರೋಶಗೊಂಡ ಪ್ರತಿಭಟನಾಕಾರರು, ನಿಮ್ಮನ್ನು ಒಳಗೊಂಡು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನ ಕಂಡು ಬರುತ್ತಿಲ್ಲ.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಡಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಇದುವರೆಗೂ ಪಾವತಿಸದಿರುವುದು ವಿಷಾದನೀಯ. ಪ್ರತಿಭಟನೆ ಹಿಂದೆ ಪಡೆಯುವದಿಲ್ಲ, ತಾವು ಮತ್ತೇ ಹಾರಿಕೆ ಉತ್ತರಕ್ಕೆ ಮುಂದಾಗುವುದು ಅವಶ್ಯವಾಗಿರುವುದಿಲ್ಲ. ಕೂಡಲೇ ಬಾಕಿ ಇರುವ ಬಿಲ್ ಪಾವತಿಸಲು ಮುಂದಾಗಬೇಕು. ತಪ್ಪಿದಲ್ಲಿ ಕೈಗೊಳ್ಳುತ್ತಿರುವ ಪ್ರತಿಭಟನೆಯನ್ನು ಮತ್ತಷ್ಟೂ ತೀವ್ರಗೊಳಿಸಲಾಗುವುದು ಎಂದರು.

ಮುಷ್ಕರದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಶಿವಾನಂದ ಹುಲ್ಲಮ್ಮನವರ, ಗುತ್ತಿಗೆದಾರರಾದ ಲಕ್ಷ್ಮಣ ಕನವಳ್ಳಿ, ವಿನಾಯಕ ಭೋವಿ, ಪ್ರವೀಣ ಬಾಲೆಹೊಸೂರ, ಗೌಸ್ ಪೀರಜಾದೆ, ಸಿದ್ದಪ್ಪ ಗುಳ್ನಾಯಕರ, ಗುಡ್ಡಪ್ಪ ಅತ್ತಿಗೇರಿ, ವಿನಾಯಕ ಈಳಗೇರ, ನೌಶಾದ ಲೋಹಾರ, ರಾಘುವೇಂದ್ರ ಬಾಲೆಹೊಸೂರ, ರಾಘವೇಂದ್ರ ದೊಡ್ಡಮನಿ, ರಾಜೇಶ ವಡ್ಡರ, ಖಾಜಾಮುದ್ದೀನ್ ಕನವಳ್ಳಿ, ಶಾಹೀದಖಾನ್ ಧಾರವಾಡ, ಶಂಕ್ರಪ್ಪ ಮರಗಪ್ಪನವರ, ಶಫಿ ಬಾಡ, ಶಫಿ ರಮಣೇದ ಹಾಗೂ ಇತರರು ಇದ್ದರು. ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಎಇ ನಾಗರಾಜಮಿರ್ಜಿ ಅಧಿಕಾರಿಗಳ ತಂಡ ಜೊತೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ
ಕನಿಷ್ಠ ಕಾನೂನು ಅರಿವು ಇಲ್ಲದವರು ಅಯೋಗ್ಯರು: ಶಾಸಕ ಕೃಷ್ಣನಾಯ್ಕ ಸವಾಲು