ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮನವಿ

KannadaprabhaNewsNetwork |  
Published : Dec 18, 2024, 12:45 AM IST
ಮುಂಡರಗಿಯಲ್ಲಿ 6ನೇ ವಾರ್ಡಿನ ರಸ್ತೆ ಅಭಿವೃದ್ದಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳುವಂತೆ ಅಲ್ಲಿನ ನಾಗರಿಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. | Kannada Prabha

ಸಾರಾಂಶ

ಕೆಲವು ರಸ್ತೆಗಳು ಬಿಟ್ಟರೆ ಉಳಿದೆಲ್ಲ ರಸ್ತೆಗಳಲ್ಲಿಯೂ ಸಹ ಜನತೆ ಓಡಾಡಲು ತೊಂದರೆಯಾಗುವಂತೆಯೇ ಇದೆ

ಮುಂಡರಗಿ: ಪಟ್ಟಣದ 6ನೇ ವಾರ್ಡ್‌ನ ಸರ್ಕಾರಿ ಹಿರಿಯ ಕೋಟೆ ಶಾಲೆಯ ಎದುರಿನ ರಸ್ತೆ ಕಳೆದ ಅನೇಕ ವರ್ಷಗಳಿಂದ ದುರಸ್ಥಿಗೊಂಡಿದ್ದು, ಅಭಿವೃದ್ಧಿಪಡಿಸುವಂತೆ ಅನೇಕ ಬಾರಿ ಪುರಸಭೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈಗಲೂ ಮಾಡದಿದ್ದರೆ ಪುರಸಭೆ ಕಾರ್ಯಾಲಯದ ಎದುರಿನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ವಾರ್ಡ್‌ನ ಜನತೆ ಹಾಗೂ ಕನ್ನಡಪರ ಸಂಘಟನೆಯವರು ಎಚ್ಚರಿಸಿದ್ದಾರೆ.

ಈ ಕುರಿತು ಮಂಗಳವಾರ ಪುರಸಭೆ ಮುಖ್ಯಾಧಿಕಾರಿಗೆ 6ನೇ ವಾರ್ಡ್‌ನ ನಾಗರಿಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

6ನೇ ವಾರ್ಡ್‌ನ ಕೋಟೆ ಶಾಲೆಯ ರಸ್ತೆ ಪ್ರಾರಂಭದಿಂದ ಕೊನೆಯವರೆಗೂ ಕಳೆದ 25 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ. ಅಲ್ಲಿನ ಚರಂಡಿ ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಚರಂಡಿ ನೀರು ಸಂಪೂರ್ಣವಾಗಿ ರಸ್ತೆ ಮೇಲೆ ಹರಿದು ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಕೇಂದ್ರವಾಗಿ ಮಾರ್ಪಟ್ಟಿದ್ದು, ಅಲ್ಲಿನ ನಿವಾಸಿಗಳು ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಶೀಘ್ರ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಆಗಮಿಸಿ ಪರಿಶೀಲಿಸಬೇಕು.

ಈ ವಾರ್ಡಿನಲ್ಲಿ ಕೆಲವು ರಸ್ತೆಗಳು ಬಿಟ್ಟರೆ ಉಳಿದೆಲ್ಲ ರಸ್ತೆಗಳಲ್ಲಿಯೂ ಸಹ ಜನತೆ ಓಡಾಡಲು ತೊಂದರೆಯಾಗುವಂತೆಯೇ ಇದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಈ ಸಮಸ್ಯೆಗಳ ಕುರಿತು ಆಡಳಿತ ಮಂಡಳಿಯವರ ಗಮನಕ್ಕೆ ತಂದು ತಮ್ಮ ಸಿಬ್ಬಂದಿ ಕಳಿಸಿ ಪರಿಶೀಲಿಸಿ ಕಾಮಗಾರಿ ಪ್ರಾರಂಭಿಸಬೇಕೆಂದು ಮುಖ್ಯಾಧಿಕಾರಿಗೆ ನೀಡಿರುವ ಮನವಿಯಲ್ಲಿ ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಕನಕಪ್ಪ ಬಳ್ಳಾರಿ, ಶ್ರೀಕಾಂತ ಡೊಣ್ಣಿ, ಶ್ರೀಕಾಂತ ಕೊಂಡಾ, ಮಂಜಪ್ಪ ಮೋರನಾಳ, ದಾನೇಶ್ವರಿ ಭಜಂತ್ರಿ, ಉಮೇಶ ಜೋಳದ, ಸುನೀಲ್ ಉಳ್ಳಾಗಡ್ಡಿ, ಉಮೇಶ ಕಲಾಲ, ಡಿ.ಆರ್.ರಾಮೇನಹಳ್ಳಿ, ಎಂ.ಎಚ್.ಸಂಶಿ, ಚಂದ್ರಶೇಖ ಪೂಜಾರ, ಸುಲೇಮಾನ್, ರವಿ ಅರಿಸಿನದ, ಶೇಖರ ನೆರೇಗಲ್, ರಹೆಮಾನ್ ಒಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...