ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ದಶಕಗಳಿಂದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಹೊಸ ಜಾಹೀರಾತು ನೀತಿಯಲ್ಲಿ ಈ ಪತ್ರಿಕೆಗಳ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಜಾಹೀರಾತು ನೀತಿಯನ್ನು ರೂಪಿಸುವ ವೇಳೆ ಯಾವುದೇ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತಯಾರಿಸಿರುವುದು ವಿಷಾದನೀಯವಾಗಿದೆ. ಪ್ರಸಾರ ಸಂಖ್ಯೆಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಅಳವಡಿಸಿರುವುದು, ಪ್ರಾದೇಶಿಕ ಪತ್ರಿಕೆಗಳನ್ನು ಅವೈಜ್ಞಾನಿಕವಾಗಿ ಪಂಗಡ ಎ ಮತ್ತು ಬಿ ಎಂದು ವರ್ಗೀಕರಿಸಿರುವುದು, ಜಾಹೀರಾತು ದರ ಪರಿಷ್ಕರಣೆಯನ್ನು ಸಮರ್ಪಕವಾಗಿ 6 ವರ್ಷಗಳಿಂದ ಮಾಡದೇ ಇರುವುದನ್ನು ಸಂಘಟನೆಗಳು ಗುರುತಿಸಿವೆ. ಈಗಾಗಲೇ ಸಣ್ಣ ಪತ್ರಿಕೆಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ನಿಯಮಗಳು ಹೆಚ್ಚುವರಿ ಒತ್ತಡ ಉಂಟುಮಾಡಲಿವೆ.ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಹಾಗೂ ಗಡಿ ಭಾಗದ ಜಾಹೀರಾತುಗಳನ್ನು ಎರಡು ಮುಂದುವರೆಸಬೇಕು ಹಾಗೂ ಒಂದು ಕುಟುಂಬಕ್ಕೆ ಮತ್ತು ಆವೃತ್ತಿಗಳಿಗೂ ಒಂದೇ ಸೌಲಭ್ಯ ಎಂದು ಹೇಳುವಾಗ, ಎಲ್ಲ ಖರ್ಚು ಮಾಡಿ ಪತ್ರಿಕೆಗಳು ಸಮಾಜದ ಮುಖವಾಣಿಯಾಗಿರುವಾಗ ಈ ನೀತಿ ಏಕೆ? ಈಗಿನ ಸೌಲಭ್ಯಗಳು ನಿರಂತರವಾಗಿ ಪತ್ರಿಕೆಗಳಿಗೆ ಮುಂದುವರೆಯಬೇಕು ಎಂದು ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಕರ್ನಾಟಕ ಜಾಹೀರಾತು ನೀತಿ-2026 ಅನ್ನು ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿವೆ.
ಈ ವೇಳೆ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಸಂಪಾದಕರಾದ ಇರ್ಪಾನ್ ಶೇಖ, ಮೋಹನ ಕುಲಕರ್ಣಿ, ರಶ್ಮಿ ಪಾಟೀಲ, ಪಾಂಡುರಂಗ ಮಮದಾಪುರ, ಮಹೇಶ ಶೆಟಗಾರ, ಮಾಧವರಾವ ಕುಲಕರ್ಣಿ, ಸುಶೀಲೇಂದ್ರ ನಾಯಕ, ಸೀತಾರಾಮ ಕುಲಕರ್ಣಿ, ಇಂದುಶೇಖರ ಮಣೂರ, ಸಂಜೀವ ಕುಲಕರ್ಣಿ, ಶರದ ಅರ್ಜುಣಗಿ, ಸಿದ್ದಣ್ಣ ವಿಜಾಪುರ, ಅವಿನಾಶ ಬಿದರಿ, ಚಿದಂಬರ ಕುಲಕರ್ಣಿ, ಶರಣು ಮಸಳಿ, ಕೆ.ಕೆ.ಕುಲಕರ್ಣಿ, ಗುರು ಗದ್ದನಕೇರಿ, ಫಯಾಜ್ ಕಲಾದಗಿ, ಸಿದ್ದು ವಿಜಾಪುರ, ಕೌಶಲ್ಯ ಪನಾಳಕರ, ರಾಜು ಢವಳಗಿ, ಸಂಜಯ ಕೊಂಡಗೂಳಿ, ಪುಂಡಲಿಕ ಮುರಾಳ ಉಪಸ್ಥಿತರಿದ್ದರು.