ರಾಮನಗರ: ತಾಲೂಕು ವ್ಯಾಪ್ತಿಯ ಸೊಸೈಟಿಗಳಿಗೆ ಟಿಎಪಿಸಿಎಂಎಸ್ ಮೂಲಕ ಪಡಿತರ ಆಹಾರ ಮತ್ತು ರಸಗೊಬ್ಬರ ವಿತರಣೆ ಮಾಡಲು ಕ್ರಮ ವಹಿಸುವಂತೆ ಸಂಬಂಧಿಸಿದ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ತಿಳಿಸಿದರು.
ಟಿಎಪಿಸಿಎಂಎಸ್ ಸಂಘಕ್ಕೆ ಆರ್ಥಿಕವಾಗಿ ಶಕ್ತಿ ತುಂಬಲು ತಾಲೂಕಿನ ಎಲ್ಲ ಸೊಸೈಟಿಗಳಿಗೆ ನಮ್ಮ ಸಂಘದ ಮೂಲಕ ಪಡಿತರ ಆಹಾರ ಮತ್ತು ರಸಗೊಬ್ಬರ ವಿತರಣೆ ಮಾಡಲು ಅನುಮತಿ ನೀಡಬೇಕೆಂದು ಆಹಾರ ಮತ್ತು ಸರಬರಾಜು ಇಲಾಖೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಪ್ರಯತ್ನ ಫಲಿಸಿದರೆ ಸಂಘದ ಕಾರ್ಯ ಚಟುವಟಿಕೆಗಳು ಕ್ರಿಯಾಶೀಲವಾಗಿ ನಡೆಯುವ ಜೊತೆಗೆ ಲಾಭ ಸಹ ಪಡೆಯಬಹುದು ಎಂದು ಸುರೇಶ್ ತಿಳಿಸಿದರು.
1.5ಕೋಟಿ ವೆಚ್ಚದಲ್ಲಿ ಫುಡ್ ಬಜಾರ್ :ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್.ಮಂಜು ಮಾತನಾಡಿ, ಬಾಲಗೇರಿಯಲ್ಲಿ ರದ್ದಾಗಿದ್ದ ನ್ಯಾಯಬೆಲೆ ಅಂಗಡಿಗೆ ಎಲ್ಲ ನಿರ್ದೇಶಕರ ಸಹಕಾರದಲ್ಲಿ ಸುಮಾರು 350 ಪಡಿತರ ಕಾರ್ಡ್ ಗಳನ್ನು ಹೊಂದಿರುವ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪುನರ್ ಆರಂಭ ಮಾಡಿದ್ದೇವೆ. ತಾಲ್ಲೂಕಿನಲ್ಲಿ ಇರುವ 21 ಸೊಸೈಟಿಗಳಿಗೆ ಟಿಎಪಿಸಿಎಂಎಸ್ ಮೂಲಕ ಪಡಿತರ, ರಸಗೊಬ್ಬರ ವಿತರಣೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ರಾಜು, ನಿರ್ದೇಶಕರಾದ ನಾಗರಾಜು, ಮಹದೇವಯ್ಯ, ಪಿ.ಸುಧಾರಾಣಿ, ಶಂಕರ್, ಶ್ರೀನಿವಾಸ್, ಅಂಜನಾಪುರ ವಾಸು , ಸಿಇಒ ಜನಾರ್ದನ್ ಹಾಜರಿದ್ದರು.
ರಾಮನಗರ ನಗರಸಭೆ ವ್ಯಾಪ್ತಿಯ ಬಾಲಗೇರಿಯಲ್ಲಿ ಮಂಗಳವಾರ ಆಹಾರ ಪಡಿತರ ವಿತರಣಾ ಕೇಂದ್ರಕ್ಕೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್.ಮಂಜು ಹಾಗೂ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಚಾಲನೆ ನೀಡಿದರು.