ಸಿಮೆಂಟ್ ಕಾರ್ಖಾನೆಗಳಲ್ಲಿ ಸ್ಥಳಿಯರಿಗೆ ಉದ್ಯೋಗ ಮೀಸಲಿಗೆ ಮನವಿ

KannadaprabhaNewsNetwork |  
Published : Jun 28, 2024, 12:52 AM IST
ಫೋಟೊ - ಕುಮಾರ ಅಣ್ಣಾಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ  ಬೆಂಗಳೂರಿನ ನಿವಾಸದಲ್ಲಿ  ಕಲಬುರಗಿ  ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಭೇಟಿಯಾಗಿ ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ ಕಾರ್ಖಾನೆ ಗಳದ್ದು ಅದರಲ್ಲಿ ಶೇ 50% ಹುದ್ದೆಗಳನ್ನು ಸ್ಥಳಿಯರಿಗೆ ನೀಡುವುದರ ಮೂಲಕ ಜಿಲ್ಲೆಯ ಜನರಿಗೆ ಗುಳೆ ಹೊಗುವುದನ್ನು ತಪ್ಪಿಸಲು ಕಾರ್ಖಾನೆಗಳಿಗೆ ನಿರ್ದೆಶನ ನೀಡಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ ಕಾರ್ಖಾನೆ ಗಳದ್ದು ಅದರಲ್ಲಿ ಶೇ 50% ಹುದ್ದೆಗಳನ್ನು ಸ್ಥಳಿಯರಿಗೆ ನೀಡುವುದರ ಮೂಲಕ ಜಿಲ್ಲೆಯ ಜನರಿಗೆ ಗುಳೆ ಹೊಗುವುದನ್ನು ತಪ್ಪಿಸಲು ಕಾರ್ಖಾನೆಗಳಿಗೆ ನಿರ್ದೆಶನ ನೀಡಬೇಕೆಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಮನವಿ ಮಾಡಿದ್ದಾರೆ.

ಬೆಂಗಳೂರಿನ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ ಯಾದಗಿರಿ ಜಿಲ್ಲೆಯ ಹಿಂದುಳಿದ ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳು ಬರಲಿ ಎಂಬ ಉದ್ದೇಶದಿಂದ ಸರ್ಕಾರ ಕಡೇಚೂರು, ಬಾಡಿಯಾಳ ಮತ್ತು ಶೆಟ್ಟಿಹಳ್ಳಿ ಗ್ರಾಮಗಳಿಗೆ ಸೇರಿದ್ದ 3,232 ಎಕರೆ ಭೂಮಿಯನ್ನು ಕೆಐಎಡಿಬಿ 2012-13ರಲ್ಲಿ ಸ್ವಾಧೀನ ಪಡಿಸಿಕೊಂಡಿತು. ಈ ಜಾಗ ಸ್ವಾಧೀನಪಡಿಸಿಕೊಂಡು ದಶಕ ಮೇಲಾಯಿತು. ಆದರೆ, ಅಂತಹ ಉದ್ಯಮಗಳು ಸ್ಥಾಪನೆಗೊಳ್ಳಲಿಲ್ಲ ಎಂದು ಮನವಿಯಲ್ಲಿ ವಿಷಾದಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಥರ್ಮಲ್ ಪವರ್. ಜವಳಿ ಪಾರ್ಕ, ಕೋಕಾ ಕೋಲಾ ಕಂಪನಿ ಸೇರಿದಂತೆ ಹಲವು ದೈತ್ಯ ಕಂಪನಿಗಳು ಇಲ್ಲಿಗೆ ಬಂದು ಕೈಗಾರಿಕಾ ಸ್ಥಾಪಿಸಿದರೆ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗ ನಿವಾರಣೆಯಾಗಲಿದೆ. ಅಲ್ಲದೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ದಶಕ ಕಳೆದರೂ ಅಲ್ಲಿ ಒಂದು ಬೃಹತ್ ಕೈಗಾರಿಕೆ ಬರಲಿಲ್ಲ. ಕನಸು ಮತ್ತು ಉತ್ಸಾಹಕ್ಕೆ ತಣ್ಣಿರು ಬಿದ್ದು ಭೂಮಿ ಕೊಟ್ಟ ರೈತರು ಕಂಗಾಲಾಗಿದ್ದು ಜನರು , ಗುಳೆ ಹೋಗುತ್ತಿದ್ದಾರೆಂದು ಬಾಲರಾಜ್‌ ಕಳವಳ ಹೊರಹಾಕಿದ್ದಾರೆ.

ತಾವು ಬೃಹತ್‌ ಕೈಗಾರಿಕೆಗಳನ್ನು ಪ್ರಾರಂಭಿಸಬೇಕು, ಹಾಗೂ ಕಲಬುರಗಿ ಜಿಲ್ಲೆಯ ಶಹಾಬಾದ ಎಸಿಸಿ ಸಿಮೆಂಟ್ ಕಾರ್ಖಾನೆ ಸ್ಥಗಿತ್ತಾವಾಗಿದ್ದು ಕಾರ್ಖಾನೆ ಪುನರ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅರ್ಹವಿದ್ಯಾವಂತರಿಗೆ ಉದ್ಯೋಗ ಸಿಗಲಿವೆ. ಇದರಿಂದಾಗಿ ಗುಳೆ ಹೋಗುವುದು ಕೊಂಚ ತಪ್ಪಲಿದೆ ಎಂದು ಮನವಿಯಲ್ಲಿ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.

ಭೂಮಿ ಕೊಟ್ಟ ರೈತರಿಗೆ ಕುಟುಂಬಗಳಿಗೆ ಬಹುತೇಕ ಕಡೆ ಇನ್ನೂವರೆಗೂ ಉದ್ಯೋಗ ನೀಡುತ್ತಿಲ್ಲಾ ಹಾಗೂ ಸ್ಥಳಿಯ ಪ್ರತಿಭಾವಂತ ನಿರುದ್ಯೊಗಿಗಳಿಗೂ ಉದ್ಯೊಗ ನೀಡುತ್ತಿಲ್ಲಾ ಇದರ ಕುರಿತು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರಿಂದ ಕಲ್ಯಾಣ ನಾಡಿಗೆ ಉತ್ತಮವಾದದ್ನ್ನು ನಿರೀಕ್ಷಿಸೋಣ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್‌ ಆಶಯ ವ್ಯಕ್ತಪಡಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ