ಖಾಲಿ ಹುದ್ದೆಗಳ ಭರ್ತಿಯಲ್ಲಿ ಒಳಮೀಸಲಾತಿ ಜಾರಿಗೆ ಸಿಎಂಗೆ ಮನವಿ

KannadaprabhaNewsNetwork |  
Published : Mar 06, 2026, 02:00 AM IST
ಖಾಲಿ ಹುದ್ದೆಗಳ ಭರ್ತಿಯಲ್ಲಿ ಒಳಮೀಸಲಾತಿ ಅಳವಡಿಸುವಂತೆ ಸಿಎಂಗೆ ಮನವಿ | Kannada Prabha

ಸಾರಾಂಶ

ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಅಳವಡಿಸಿರುವ ಶೇ.15ರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಿಕೊಡಬೇಕೆಂದು ಕಳೆದ ಮೂವತ್ತೈದು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸಚಿವ ಸಂಪುಟದ ತೀರ್ಮಾನದಂತೆ 56,342 ಖಾಲಿ ಹುದ್ದೆ ತುಂಬುವಾಗ ಒಳಮೀಸಲಾತಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು

ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಅಳವಡಿಸಿರುವ ಶೇ.15ರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಿಕೊಡಬೇಕೆಂದು ಕಳೆದ ಮೂವತ್ತೈದು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಸರ್ವೋಚ್ಚ ನ್ಯಾಯಾಲಯದ 2024 ಆಗಸ್ಟ್ 1ರ ತೀರ್ಪಿನಂತೆ ರಾಜ್ಯ ಸರ್ಕಾರವು ನಿವೃತ್ತ ನ್ಯಾಯ ಮೂರ್ತಿ ಎಚ್.ಎನ್ .ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚಿಸಿತ್ತು. ಆಯೋಗದ ಶಿಫಾರಸ್ಸಿನ ಮೇರೆಗೆ ಪರಿಶಿಷ್ಟ ಮಾದಿಗ ಜನಾಂಗಕ್ಕೆ ಶೇ.6, ಹೊಲೆಯ ಸಂಬಂಧಿಸಿದ ಶೇ.6 ಮತ್ತು ಕೊಲಂಬೋ ಜಾತಿಗಳಿಗೆ ಶೇ.5ರ ಮೀಸಲು ಹಂಚಿಕೆ ಮಾಡಲಾಗಿದೆ.

ಆದರೆ ರಾಜ್ಯ ಸರ್ಕಾರ ಫೆಬ್ರವರಿ 26ರ ಸಚಿವ ಸಂಪುಟ ಸಭೆಯಲ್ಲಿ 56,342 ಹುದ್ದೆಗಳನ್ನು ಒಳಮೀಸಲಾತಿ ರಹಿತವಾಗಿ ತುಂಬಲು ತೀರ್ಮಾನಿಸಿರುವುದು ಮಾದಿಗ ಜನಾಂಗಕ್ಕೆ ತೀರ ಆಘಾತವಾಗಿದೆ. ಒಳ ಮೀಸಲಾತಿ ಅಳವಡಿಸಿಕೊಂಡು ಈ ಹುದ್ದೆ ತುಂಬಲು ಕ್ರಮವಹಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಖಾಂತರ ‌ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಡಾ. ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ ಬಸವನಪುರ ರಾಜಶೇಖರ್, ಜಿಲ್ಲಾಧ್ಯಕ್ಷ ಎಚ್.ಎಚ್. ನಾಗರಾಜು, ಜಿಲ್ಲಾ ಗೌರವ ಸಲಹೆಗಾರ ಜವರಯ್ಯ, ಜಿಲ್ಲಾ ಉಪಾಧ್ಯಕ್ಷ ಬ್ಯಾಂಕ್ ಬಸವರಾಜು, ವಕೀಲ ಬೂದಿತಿಟ್ಟು ರಾಜೇಂದ್ರ ಎಚ್ಚರಿಸಿದ್ದಾರೆ.

ಒಕ್ಕೂಟದ ಹಸಗೂಲಿ ಸಿದ್ದಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾ‌ರ್, ಸಹ ಕಾರ್ಯದರ್ಶಿ ರಾಮಸಮುದ್ರ ಶಿವಕುಮಾರ್, ವಕೀಲರಾದ ಬೂದಿತಿಟ್ಟು ರಾಜೇಂದ್ರ, ಸಿದ್ದಯ್ಯ, ಸಿದ್ದೇಶ್, ಖಜಾಂಚಿ ದ್ವಾರ್ಕಿ ಬಸವರಾಜು, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಗೋಪಿ, ಗೌರವ ಅಧ್ಯಕ್ಷ ಶಿವವಲ್ಲು, ಪ್ರಧಾನ ಕಾರ್ಯದರ್ಶಿ ಮಧು, ಯಳಂದೂರು ತಾಲೂಕು ಅಧ್ಯಕ್ಷ ಕೆಸ್ತೂರುಮರಪ್ಪ, ಎಲ್‌ಐಸಿ ಸಿದ್ದರಾಜು, ಸಿ.ಎಚ್. ರಂಗಸ್ವಾಮಿ, ಹನೂರು ಗುರುಸ್ವಾಮಿ, ಕಾಮಗೆರೆ ಮಹದೇವು, ಗಣೇಶ್, ಗುಂಡ್ಲುಪೇಟೆ ಶಂಕರ್, ನಾಗಮಲ್ಲು, ಬೆಳ್ಳಿಯಪ್ಪ, ವೆಲ್ಡಿಂಗ್ ಲಿಂಗರಾಜು, ಸುಂದರ್, ಮೂಡಹಳ್ಳಿ ಮೂರ್ತಿ, ಚನ್ನಬಸವಯ್ಯ, ರೇವಣ್ಣ, ಮುಳ್ಳೂರು ಮಾದೇಶ್, ಸುನೀಲ್‌, ಸುಂದರ್, ನಾಗಮಲ್ಲು, ಗುರುಲಿಂಗಯ್ಯ, ಅರಕಲವಾಡಿ ಮಹದೇವಯ್ಯ, ವೈ.ಎಸ್. ನಾಗರಾಜು, ಪಾಪಣ್ಣ, ರಾಜು, ಶಿವಕುಮಾರ್ ಇತರರು ಹಾಜರಿದ್ದರು.

----------------

5ಸಿಎಚ್ಎನ್‌13

ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟ ದವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನಿಯೋಗದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
ಜ್ಞಾನ ದೇಗುಲಕ್ಕೆ ಮಾಡುವ ದಾನವೂ ಸರ್ವಶ್ರೇಷ್ಠ: ಶಾಸಕ ಎಚ್.ಟಿ.ಮಂಜು