ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವೇದಿಕೆ ಜಿಲ್ಲಾ ಸಂಚಾಲಕ ಚಂದನ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ತಕ್ಷಣ ಕನ್ನಡ ಭುವನೇಶ್ವರಿ ವಿರೋಧಿ ಬಾನು ಮುಷ್ತಾಕ್‌ರನ್ನು ಉದ್ಘಾಟನಾ ಕಾರ್ಯಕ್ರಮದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದಸರಾ ಹಬ್ಬ ಸುಮಾರು 415 ವರ್ಷಗಳಿಂದ ಮೈಸೂರು ಮಹಾರಾಜ ಸಂಸ್ಥಾನದಿಂದ, ರಾಜ ಮಹಾರಾಜರು ಮತ್ತು ಅವರ ಕುಟುಂಬ ವರ್ಗದವರು ಹಿಂದೂ ಸಂಪ್ರದಾಯದಂತೆ ವಿಜೃಂಭಣೆಯಿಂದ ಆದಿದೇವತೆ ತಾಯಿ ಶ್ರೀಚಾಮುಂಡೇಶ್ವರಿಯಲ್ಲಿ ನಂಬಿಕೆ ಇಟ್ಟು ಆಚರಿಸುತ್ತಾ ಬಂದಿದ್ದಾರೆ ಎಂದರು.ಬದಲಾದ ವ್ಯವಸ್ಥೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಸಹ ಸಂವಿಧಾನದ ಆಧಾರದ ಮೇರೆಗೆ ಬಹುಸಂಖ್ಯಾತರ, ಶ್ರದ್ಧೆ ಮತ್ತು ನಂಬಿಕೆಗಳ ಪ್ರಕಾರ, ಸಂಪ್ರದಾಯವಾಗಿ ಶ್ರೀಚಾಮುಂಡೇಶ್ವರಿ ಮತ್ತು ಕನ್ನಡ ಭುವನೇಶ್ವರಿ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿಗಳಿಂದ ಮೈಸೂರು ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಈವರೆಗೂ ನೆರವೇರಿಸಿಕೊಂಡು ಬಂದಿದೆ ಎಂದರು.
ಈ ವೇಳೆ ಮಾನವ ಹಕ್ಕು ಆಯೋಗ ರಾಜ್ಯ ಸದಸ್ಯ ಬಾಲ್ ರಾಜ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದಗಾಲು ಶಂಕರ್, ವೇದಿಕೆ ಕಾರ್ಯಕರ್ತರಾದ ಪಿ ರಾಘು, ಶಿವು, ಪ್ರೇಮ್, ನಯನ್, ಗಿರೀಶ್ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.