ಪದವೀಧರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲು ಮನವಿ

KannadaprabhaNewsNetwork | Updated : Jun 02 2024, 07:47 AM IST

ಸಾರಾಂಶ

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಚುನಾವಣೆಯ ಸಮಯದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ.

 ಚಿತ್ತಾಪುರ :  ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಚುನಾವಣೆಯ ಸಮಯದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಚಂದ್ರಶೇಖರ ಪಾಟೀಲ್ ಅವರು ತಮ್ಮ ಕಳೆದ ಅವಧಿಯಲ್ಲಿ ಪದವೀದರರು ಮತ್ತು ಶಿಕ್ಷಕರಿಗೆ ಅನೇಕ ಅನುಕೂಲಗಳನ್ನು ಮಾಡಿಕೊಟ್ಟಿದ್ದು ಇನ್ನೊಂದು ಅವಧಿಗೆ ಅವರನ್ನು ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೊಳ ಹಾಗೂ ನಾಗರೆಡ್ಡಿ ಪಾಟೀಲ್ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಚಂದ್ರಶೇಖರ ಪಾಟೀಲ್ ಅವರು ಪದವೀಧರರು ಹಾಗೂ ಶಿಕ್ಷಕರ ಪರವಾದ ಕಾಳಜಿ ಉಳ್ಳ ನಾಯಕರಾಗಿದ್ದು ಅವರು ಮತೊಂದು ಅವಧಿಗೆ ಆಯ್ಕೆ ಮಾಡಿದಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಸರ್ಕಾರಿ ನೌಕರರರಿಗೆ ಏಳನೇ ವೇತನ ಆಯೊಗ ಜಾರಿಗೊಳಿಸುವದು, ಹೊಸ ಪಿಂಚಣಿ ಯೊಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೊಜನೆ ಜಾರಿಗೊಳಿಸುವದು, ಅತಿಥಿ ಶಿಕ್ಷಕರಿಗೆ ಕಾಯಂ ಸೇವಾ ಭದ್ರತೆ ನೀಡುವದು. 

ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸುವದು. ಭೊದಕ ವರ್ಗದವರ ಮುಂಬಡ್ತಿಗೆ ಕ್ರಮ ತೆಗೆದುಕೊಳುವದು. ಕರ್ನಾಟಕ ವಸತಿ ಶಿಕ್ಷಣ ನಿರ್ದೆಶನಾಲಯ ಜಾರಿ ಮಾಡುವುದಲ್ಲದೇ ಮುರಾರ್ಜಿ, ಕಿತ್ತೂರ ರಾಣಿ ಚೆನ್ನಮ್ಮ, ಡಾ, ಬಿ.ಆರ್. ಅಂಬೇಡ್ಕರ್, ಏಕಲವ್ಯ ನಂತರ ವಸತಿ ಶಾಲೆಗಳ ಸುಧಾರಣಿಗೆ ಕ್ರಮ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೊದ್ಯಮ ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ನಿರುದ್ಯೊಗಿ ಪದವೀಧರರಿಗೆ ಉದ್ಯೊಗ ಕಲ್ಪಿಸುವದು, ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೊಗಿ ಪದವೀಧರರ ಸಮಸ್ಯೆಗಳನ್ನು ನಿವಾರಿಸುವಂತಹ ಗುರಿಯೊಂದಿಗೆ ಸ್ಪರ್ಧೆ ಮಾಡಿದ್ದು ಅವರಿಗೆ ಹೆಚ್ಚಿನ ಬಹುಮತದಿಂದ ಪದವಿದರ ಮತದಾರರು ಬೆಂಬಲಿಸಿ ಮತ ನೀಡಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ ಪಟೇಲ್, ಶಿವರುದ್ರ ಭೀಣಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಸಂಜಯ ಬುಳಕರ್, ಮೆಹಮೂದ ಸಾಹೇಬ, ನಾಗರೆಡ್ಡಿ ಗೊಬಶೇನ್, ಜಗದೀಶ ಚವ್ವಾಣ, ಶಿಲಾ ಕಾಶಿ, ಚಂದ್ರಶೇಖರ ಕಾಶಿ, ಪಾಶಾಮಿಯ್ ಖುರೇಶಿ, ಓಂಕಾರ ರೇಶ್ಮಿ, ಬಸವರಾಜ ಚಿಣಮಳ್ಳಿ ಇತರರು ಇದ್ದರು.

Share this article