ರಟ್ಟೀಹಳ್ಳಿ: ತಾಲೂಕಿನ ಹಳ್ಳೂರ ಗ್ರಾಮದ ಸರ್ವೆ ನಂಬರ್ 98/ಬ.ನಲ್ಲಿ ಕಳೆದು 40 ವರ್ಷಗಳಿಂದ ವಾಸಿಸುತ್ತಿರುವ ಮನೆಗಳಿಗೆ ಪಟ್ಟಾ ನೀಡಬೇಕೆಂದು ನಿವಾಸಿಗಳು ತಹಸೀಲ್ದಾರ್ ಶ್ವೇತಾ ಅಮರಾವತಿ ಅವರಿಗೆ ಮನವಿ ಸಲ್ಲಿಸಿದರು.ಹಳ್ಳೂರ ಗ್ರಾಮದ ಸರ್ವೆ ನಂ.98/ಬ ದಲ್ಲಿ ಕಳೆದ 40 ವರ್ಷಗಳಿಂದ ಸುಮಾರು 30 ಕುಟುಂಬಗಳು ವಾಸವಾಗಿದ್ದು, ಇಲ್ಲಿಯವರೆಗೂ ಮನೆಗಳಿಗೆ ಪಟ್ಟಾ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲಿನ ನಿವಾಸಿಗಳು ಅತ್ಯಂತ ಕಡುಬಡವರಾಗಿದ್ದು, ನಿತ್ಯ ಕೂಲಿ ಮಾಡಿ ಜೀವನ ಮಾಡುತ್ತಿದ್ದು, ತಕ್ಷಣ ಪಟ್ಟಾ ನೀಡಲು ಸರ್ಕಾರಕ್ಕೆ ಮನವಿ ಮಾಡಬೇಕು.
ಶಿಗ್ಗಾಂವಿ: ಮನೆ ಮನಸ್ಸುಗಳನ್ನು ಒಗ್ಗೂಡಿಸುವ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ ತಿಳಿಸಿದರು.ಪಟ್ಟಣದ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಎಂತಹ ವೈರಿಯನ್ನು ಸಂತೈಸುವ ಗುಣ ಶರಣ ಸಾಹಿತ್ಯದಲ್ಲಿದೆ. ಲಿಂಗಪೂಜೆ ಕೇವಲ ಮಾತನಾಡುವುದಾಗುತ್ತಿದೆ. ಆಚರಣೆ ಆಗುತ್ತಿಲ್ಲ ಎಂದು ವಿಷಾದಿಸಿದರು.
ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನಪರಿವರ್ತನೆಯ ಜತೆಗೆ ಸತ್ಯತತ್ವ ಬಿತ್ತಬೇಕು. ಆ ಶಕ್ತಿ ಶರಣ ಸಾಹಿತ್ಯಕ್ಕೆ ಇದೆ ಎಂದರು.ಮುಖ್ಯ ಶಿಕ್ಷಕ ಎಂ.ಬಿ. ಹಳೆಮನಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್‌ನ ಹಾವೇರಿ ತಾಲೂಕು ಕಾರ್ಯದರ್ಶಿ ಸತೀಶ ಬಾಗನ್ನವರ, ಸದಸ್ಯರಾದ ಜಿ.ಎನ್. ಯಲಿಗಾರ, ಕೆ.ಟಿ. ಪಾಟೀಲ, ಶಶಿಕಾಂತ ರಾಠೋಡ, ಉಷಾ ಪಾಟೀಲ, ಸಿ.ಡಿ. ಯತ್ನಳ್ಳಿ, ನಾಗಪ್ಪ ಬೆಂತೂರ, ರಮೇಶ ಹರಿಜನ, ಮಾಲತೇಶ ನಾಯ್ಕೊಡಿ ಶಂಬು ಕೇರಿ ಇತರರು ಇದ್ದರು.
ನೂತನ ಅಧ್ಯಕ್ಷರ ನೇಮಕ: ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಸಿ.ಡಿ. ಯತ್ನಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.