ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಬಾಕಿ ಪರಿಹಾರ ನೀಡಲು ಮನವಿ

KannadaprabhaNewsNetwork |  
Published : Jul 17, 2024, 12:49 AM IST
ಫೋಟೋ : ೧೫ಎಚ್‌ಎನ್‌ಎಲ್೩ | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಬಸಾಪುರ ಏತ ನೀರಾವರಿ ಯೋಜನೆ ಸಂದರ್ಭದಲ್ಲಿ ಭೂಸ್ವಾಧಿನವಾದ ಭೂಮಿಯ ೪೫ ರೈತರಿಗೆ ದೊರೆಯಬೇಕಾದ ೨ ಕೋಟಿಯಷ್ಟು ಹಣ ಇನ್ನೂ ದೊರೆಯದ ಕಾರಣ ಕೂಡಲೇ ಹಣ ಬಿಡುಗಡೆ ಮಾಡುವಂತೆ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಬಿ. ಪಾಟೀಲ ನೇತೃತ್ವದಲ್ಲಿ ಸವಣೂರು ಉಪವಿಭಾಗಾಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು.

ಹಾನಗಲ್ಲ: ಹಾನಗಲ್ಲ ತಾಲೂಕಿನ ಬಸಾಪುರ ಏತ ನೀರಾವರಿ ಯೋಜನೆ ಸಂದರ್ಭದಲ್ಲಿ ಭೂಸ್ವಾಧಿನವಾದ ಭೂಮಿಯ ೪೫ ರೈತರಿಗೆ ದೊರೆಯಬೇಕಾದ ೨ ಕೋಟಿಯಷ್ಟು ಹಣ ಇನ್ನೂ ದೊರೆಯದ ಕಾರಣ ಕೂಡಲೇ ಹಣ ಬಿಡುಗಡೆ ಮಾಡುವಂತೆ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಬಿ. ಪಾಟೀಲ ನೇತೃತ್ವದಲ್ಲಿ ಸವಣೂರು ಉಪವಿಭಾಗಾಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಬಿ. ಪಾಟೀಲ ಸವಣೂರು ಉಪವಿಭಾಗಾಧಿಕಾರಿ ಮಹಮ್ಮದ್‌ಖಿಜರ ಅವರಿಗೆ ಮನವಿ ಸಲ್ಲಿಸಿ, ಹಾನಗಲ್ಲ ತಾಲೂಕಿನಲ್ಲಿ ಬಸಾಪೂರ ಏತ ನೀರಾವರಿ ಯೋಜನೆ ಕಾಮಗಾರಿ ಸಂದರ್ಭದಲ್ಲಿ ರೈತರ ಕೃಷಿ ಭೂಮಿ ಭೂಸ್ವಾಧಿನವಾಗಿದೆ. ೮ ವರ್ಷಗಳಾದರೂ ಇನ್ನೂ ರೈತರಿಗೆ ಸಲ್ಲಬೇಕಾದ ಸರಕಾರದ ಪರಿಹಾರದ ಹಣ ತಲುಪಿಲ್ಲ. ಈ ಬಗ್ಗೆ ಹಲವು ಬಾರಿ ಸರಕಾರದ ಮೊರೆ ಹೋದರೂ ಹಣ ಬಂದಿಲ್ಲ. ರೈತರು ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೂ ರೈತರಿಗೆ ಇಂತಹ ಬಾಕಿ ಇದ್ದರೆ ರೈತರ ಗೋಳು ಹೇಳತೀರದು. ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಧಿಕಾರಿಗಳು ಈ ನ್ಯಾಯಯುತ ಬೇಡಿಕೆ ಈಡೇರಿಸಲು ಕ್ರಮ ಜರುಗಿಬೇಕು ಎಂದು ಮನವಿ ಮಾಡಿದ್ದಾರೆ.ಜೆಡಿಎಸ್ ಮುಖಂಡರು ಹಾಗೂ ರೈತರ ಮನವಿ ಸ್ವೀಕರಿಸಿದ ಸವಣೂರು ಉಪವಿಭಾಗಾಧಿಕಾರಿಗಳು ಎರಡು ಮೂರು ದಿನಗಳಲ್ಲಿ ಬಸಾಪುರ ಏತ ನೀರಾವರಿ ಯೋಜನೆಯ ಭೂಸ್ವಾಧೀನವಾದ ಸ್ಥಳ ಪರಿಶೀಲಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಭೂಸ್ವಾಧಿನಕ್ಕೆ ಒಳಪಟ್ಟ ಭೂಮಿಯ ಮಾಲೀಕರಿಗೆ ಕೂಡಲೇ ಹಣ ಬಿಡುಗಡೆಗೆ ಕ್ರಮ ಜರುಗಿಸುವ ಭರವಸೆ ನೀಡಿದ್ದಾಗಿ ಆರ್.ಬಿ. ಪಾಟೀಲ ತಿಳಿಸಿದ್ದಾರೆ.ರುದ್ರಪ್ಪ ಹಿರಳ್ಳಿ, ಬಸವರಾಜ ಮಡ್ಲೂರ, ಬಸವರಾಜಪ್ಪ ಬಣಕಾರ, ಚಂದ್ರಶೇಖರ ಗಿಡ್ಡಳ್ಳಿ, ಬಸವರಾಜ ಹರಿಜನ, ಶಿವಪ್ಪ ಕೆಲೂರ, ಚನ್ನಬಸಪ್ಪ ಮಡ್ಲೂರ ಮೊದಲಾದವರು ಈ ಸಂದರ್ಭದಲ್ಲಿದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ