ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಸೋಮವಾರ ಪಟ್ಟಣದ ತಹಸೀಲ್ದಾರಗೆ ಮನವಿ ಸಲ್ಲಿಸಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ದೊಡ್ಡೂರ ರಸ್ತೆಯ ಪಕ್ಕದಲ್ಲಿನ ಸರ್ಕಾರಿ ಜಾಗೆಯಲ್ಲಿ ಜೋಪಡಿ ಹಾಕಿಕೊಂಡು ವಾಸಿಸುತ್ತಿದ್ದೇವೆ. ಈಗ ಈ ಜಾಗೆಯಲ್ಲಿ ಪ್ರಜಾಸೌಧ ಕಟ್ಟುತ್ತೇವೆ ಎಂದು ಬೇರೆಡೆಗೆ ಸ್ಥಳಾಂತರಗೊಳಿಸಲು ಹೊರಟಿರುವುದು ಖಂಡನೀಯ. ನಿರ್ಗತಿಕರು ವಿವಿಧ ಜಾತಿ, ಜನಾಂಗದ ಜನರು ಸುಮಾರು 30 ವರ್ಷಗಳಿಂದ ಕೂಲಿ ನಾಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಈ ಬಡ ಕುಟುಂಬಗಳಿಗೆ ಯಾವುದಾದರೂ ಜಾಗೆ ಕೊಡಲು ಪುರಸಭೆಯ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಸಹಿತ ಇದುವರೆಗೂ ಯಾರು ಕಣ್ಣು ತೆರೆದು ನೋಡಿಲ್ಲ. ನಾವು ಇಲ್ಲಿನ ಖಾಯಂ ರಹವಾಸಿಗಳಾಗಿದ್ದು, ಆಧಾರ್ ಕಾರ್ಡ್, ವೋಟಿಂಗ್ ಕಾರ್ಡ್, ಎಸ್ಐಆರ್ ಕೂಡ ಮಾಡಿಸಿದ್ದೇವೆ. ಶಾಸಕರು, ಪುರಸಭೆ ಸದಸ್ಯರು ಮತ ಕೇಳಲಿಕ್ಕೆ ಅಷ್ಟೇ ಬರುತ್ತಾರೆ. ಆಮೇಲೆ ಇತ್ತ ಕಡೆ ಗಮನ ಹರಿಸುವುದಿಲ್ಲ, ಜಾಗ ನೀಡುವರೆಗೂ ಧರಣಿ ಸತ್ಯಾಗ್ರಹ ಕುಳಿತುಕೊಳ್ಳುತ್ತೇವೆ ಎಂದು ಹೇಳಿದರು.ಗದಗ ಜಿಲ್ಲಾ ಅಲೆಮಾರಿ ಸಮಾಜದ ನಾಮ ನಿರ್ದೇಶನ ಸದಸ್ಯ ರಾಘವೇಂದ್ರ ಪೂಜಾರ ಮಾತನಾಡಿ, ಜಾಗಬಿಟ್ಟು ಕದಲುವುದಿಲ್ಲ. ನಮ್ಮ ಮೇಲೆ ದೌರ್ಜನ್ಯ ಮಾಡಿ ನಮ್ಮನ್ನು ತೆರವುಗೊಳಿಸುವುದಾದರೆ ಮೇಲಾಧಿಕಾರಿಗಳಲ್ಲಿ ಮೊರೆ ಹೋಗುತ್ತೇವೆ. ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದರು.