ನವಿಲು ತೀರ್ಥ ಜಲಾಶಯದಿಂದ ನೀರು ಬಿಡಲು ಮನವಿ

KannadaprabhaNewsNetwork |  
Published : Mar 20, 2025, 01:18 AM IST
ತಹಶೀಲದಾರರಿಗೆ ಮನವಿ ಸಲ್ಲಿಕೆ | Kannada Prabha

ಸಾರಾಂಶ

ಮಲಪ್ರಭಾ ನದಿ ಪೂರ್ತಿಯಾಗಿ ಬತ್ತಿ ನದಿ ಪಾತ್ರ ಪೂರ್ತಿಯಾಗಿ ಒಣಗಿಹೋಗಿದೆ. ನದಿ ಪಾತ್ರದ ಹಳ್ಳಿಗಳ ಜನರು ಮತ್ತು ದನ-ಕರುಗಳ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನವಿಲು ತೀರ್ಥ ಜಲಾಶಯದಿಂದ ಒಂದು ಟಿಎಂಸಿ ನೀರು ಬಿಡಬೇಕು ಎಂದು ಆಗ್ರಹಿಸಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ತಹಸೀಲ್ದಾರ್‌ ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಮಲಪ್ರಭಾ ನದಿ ಪೂರ್ತಿಯಾಗಿ ಬತ್ತಿ ನದಿ ಪಾತ್ರ ಪೂರ್ತಿಯಾಗಿ ಒಣಗಿಹೋಗಿದೆ. ನದಿ ಪಾತ್ರದ ಹಳ್ಳಿಗಳ ಜನರು ಮತ್ತು ದನ-ಕರುಗಳ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನವಿಲು ತೀರ್ಥ ಜಲಾಶಯದಿಂದ ಒಂದು ಟಿಎಂಸಿ ನೀರು ಬಿಡಬೇಕು ಎಂದು ಆಗ್ರಹಿಸಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ತಹಸೀಲ್ದಾರ್‌ ಗೆ ಮನವಿ ಸಲ್ಲಿಸಿದರು.

ಮುಖಂಡ ಎಂ.ಎನ್.ರೋಣದ ಮಾತನಾಡಿ, 2 ತಿಂಗಳಿಂದ ನದಿ ಒಣಗಿದೆ. ತಾಲೂಕಿನ ದಂಡೆಯ 45 ಹಳ್ಳಿಗಳ ಜನರ ಬದುಕು ದುಸ್ತರವಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಬಾದಾಮಿ ತಾಲೂಕಿನ ನದಿ ದಂಡೆಯ ಜನರಿಗೆ ಮಲಪ್ರಭಾ ನದಿ ಆಸರೆಯಾಗಿದೆ. ಹಾಗಾಗಿ ತುರ್ತಾಗಿ ನದಿಗೆ 1 ಟಿ.ಎಂ.ಸಿ ನೀರು ಬಿಡುವ ವ್ಯವಸ್ಥೆಯಾಗಬೇಕು. ನದಿ ದಂಡೆಯಲ್ಲಿರುವ ಪುಣ್ಯಕ್ಷೇತ್ರ ಶೀವಯೋಗಮಂದಿರದಲ್ಲಿ 200-300 ಗೋವುಗಳಿಗೂ ಕುಡಿಯುವ ನೀರಿಗೆ ತೊಂದರೆಯಾಗಿದೆ. ಪುಣ್ಯಕ್ಷೇತ್ರ ಬನಶಂಕರಿ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆ ಭಕ್ತರು ಮಲಪ್ರಭಾ ನದಿಯು ಪುಣ್ಯ ಸ್ನಾನ ಮಾಡಿ ದೇವಿಯ ದರ್ಶನಕ್ಕೆ ಹೋಗುವ ಸಂಪ್ರದಾಯ ಇದೆ. ಹೀಗಾಗಿ ನದಿಗೆ ತುರ್ತಾಗಿ 1 ಟಿಎಂಸಿ ನೀರನ್ನು ನವೀಲು ತೀರ್ಥ ಜಲಾಶಯದಿಂದ ಬಿಡುವ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೈನ್ಯ ಬಾದಾಮಿ ತಾಲೂಕು ಘಟಕದ ವತಿಯಿಂದ ಮನವಿ ಮಾಡಿದರು.

ಎರಡು ಸಂಘಟನೆಯ ಮುಖಂಡರಾದ ಅಶೋಕ ಸಾತನ್ನವರ, ಎನ್.ಸಿ. ಕೋಟಿ, ಬಿ.ಆರ್. ಗೌಡರ, ಎಲ್.ಎಚ್. ಕೊಚಲ, ಎಸ್.ಎ. ಪಾಟೀಲ, ಹನಮಪ್ಪ ಹೂಗಾರ, ಬಿ.ಬಿ. ಗೋವಣಕಿ, ಎಂ.ಪಿ. ಕುಚಲ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ