ವಿದ್ಯುತ್‌ ಕಂಪನಿ ಖಾಸಗೀಕರಣ ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ

KannadaprabhaNewsNetwork |  
Published : Jun 11, 2026, 01:00 AM IST
ಹೆಸ್ಕಾಂ ಗುತ್ತಿಗೆದಾರರು ಖಾಸಗೀಕರಣ ವಿರೋಧಿಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಎಸ್ಕಾಂಗಳನ್ನು ಟಾಟಾ ಪವರ್ ಕಂಪನಿಗೆ ಖಾಸಗೀಕರಣಗೊಳಿಸಿ ನೀಡುತ್ತಿರುವುದನ್ನು ಪ್ರತಿಭಟಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ರಾಜ್ಯದ ಮುಖ್ಯಮಂತ್ರಿಗಳಿಗೆ ತಾಲೂಕು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದೆ.

ಹಾನಗಲ್ಲ:ರಾಜ್ಯದಲ್ಲಿ ಎಸ್ಕಾಂಗಳನ್ನು ಟಾಟಾ ಪವರ್ ಕಂಪನಿಗೆ ಖಾಸಗೀಕರಣಗೊಳಿಸಿ ನೀಡುತ್ತಿರುವುದನ್ನು ಪ್ರತಿಭಟಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ರಾಜ್ಯದ ಮುಖ್ಯಮಂತ್ರಿಗಳಿಗೆ ತಾಲೂಕು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದೆ.ಬುಧವಾರ ತಾಲೂಕು ತಹಸೀಲ್ದಾರ್‌ ಕಚೇರಿಗೆ ತೆರಳಿ ಮನವಿ ಅರ್ಪಿಸಿದ ಸಂಘಟನೆ, ಖಾಸಗೀಕರಣದಿಂದ ರೈತರಿಗೆ ಅಪಾರವಾದ ತೊಂದರೆ ಇದೆ. ಬಡವರಿಗೆ ನೀಡಿದ ಆರ್‌ಜಿಜಿವಾಯ್, ಕುಟಿರ ಜ್ಯೋತಿ, ಭಾಗ್ಯ ಜ್ಯೋತಿ, ಬೆಳಕು ಇಂತಹ ಯೋಜನೆಗಳಿಂದ ವಂಚಿತರಾಗುತ್ತಾರೆ. ಖಾಸಗೀಕರಣದಿಂದಾಗಿ ಮಾನ್ಯತೆ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ಮತ್ತು ಕಾರ್ಮಿಕರ ಕುಟುಂಬಗಳು ಬೀದಿಗೆ ಬರುತ್ತವೆ. ಹೆಸ್ಕಾಂ ಕಂಪನಿಯಡಿಯಲ್ಲಿ ಕೆಲಸ ಮಾಡುವ ಇದೇ ಕಂಪನಿಯನ್ನು ನಂಬಿ ಕೆಲಸ ಮಾಡುತ್ತಿರುವ ೧೭ ಸಾವಿರಕ್ಕೂ ಅಧಿಕ ಗುತ್ತಿಗೆದಾರರ ಕುಟುಂಬಗಳು ಬೀದಿಗೆ ಬರುತ್ತವೆ. ಹಿಂದುಳಿದ ವರ್ಗಗಳಿಗಾಗಿ ಇರುವ ಅಕ್ರಮ ಸಕ್ರಮ ಯೋಜನೆ, ಗಂಗಾ ಕಲ್ಯಾಣ ಯೋಜನೆಗಳು ಸ್ಥಗಿತಗೊಳ್ಳುವ ಸಾಧ್ಯತೆಯೆ ಹೆಚ್ಚು. ಸರ್ಕಾರ ಕೂಡಲೇ ಖಾಸಗೀಕರಣ ಹಿಂಪಡೆದು ಮೊದಲಿಂತೆ ಎಲ್ಲ ಸೇವೆಗಳು ಮುಂದುವರಿಯಬೇಕು. ತಪ್ಪಿದಲ್ಲಿ ಅನಿವಾರ್ಯವಾಗಿ ಉಗ್ರ ಹೋರಾಟದ ಅನಿವಾರ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಿವಯೋಗೆಪ್ಪ ಮಲ್ಲಿಗಾರ, ಮಾಲತೇಶ ಮಣ್ಣಮ್ಮನವರ, ಬಸವರಾಜ ದ್ಯಾವಣ್ಣನವರ, ಪ್ರಭುಕುಮಾರ ಪೂಜಾರ, ವೀರೇಶ ಹಿರೇಮಠ, ರೇಹಾನ ಸಾವಿಕೇರಿ, ಶರಣಪ್ಪ ಈಳಿಗೇರ, ನಾಗರಾಜ ಸಾಲಿ, ನಾಗರಾಜ ಹುಡೇದವರ, ಗಂಗಪ್ಪ ನೆಲವಿಗಿ, ಗೀತಾ ತಳಗಿನಕೇರಿ, ಗುರುಶಾಂತಪ್ಪ ಉಳ್ಳಾಗಡ್ಡಿ, ಸಂತೋಷ ನಾಯರ್, ನಿಂಗಪ್ಪ ಸುಣಗಾರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೊಬ್ಬರಕ್ಕಾಗಿ ದಾಖಲೆಗಳೇ ಸರತಿ ಸಾಲು; ರೈತರ ಪರದಾಟ
ಸರಣಿ ಅಪಘಾತ: ಓರ್ವ ಸಾವು, 7 ಮಂದಿ ಗಾಯ