ಶ್ರೀ ಬಾಣೇಶ್ವರಸ್ವಾಮಿ ದೇಗುಲದಲ್ಲಿ ಗರುಡಗಂಬ ಸ್ಥಾಪನೆ

KannadaprabhaNewsNetwork |  
Published : Sep 11, 2026, 03:15 AM IST
61 | Kannada Prabha

ಸಾರಾಂಶ

7 ಲಕ್ಷ ರೂ. ಅಂದಾಜಿನ 30 ಅಡಿ ಎತ್ತರದ ಗರುಡಗಂಬವನ್ನು ಪ್ರತಿಷ್ಠಾಪಿ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆತಾಲೂಕಿನ ಮಗ್ಗೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಾಣೇಶ್ವರ ದೇವಾಲಯದ ಮುಂಭಾಗ ಗರುಡಗಂಬ ಸ್ಥಾಪನ ಕಾರ್ಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.ದೇವಾಲಯದ ಮುಂಭಾಗ ಅರ್ಚಕರು ಹಾಗೂ ಆಗಮಿಕರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ 11.04 ರಿಂದ 12.04 ಗಂಟೆಯೊಳಗಿನ ವೃಶ್ಚಿಕ ಶುಭ ಲಗ್ನದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಸುಮಾರು 7 ಲಕ್ಷ ರೂ. ಅಂದಾಜಿನ 30 ಅಡಿ ಎತ್ತರದ ಗರುಡಗಂಬವನ್ನು ಪ್ರತಿಷ್ಠಾಪಿಸಲಾಯಿತು. ಮಗ್ಗೆ, ಕೆ.ಆರ್. ಪುರ, ಅಂತರಸಂತೆ, ನಿಸನ ಬೆಳತೂರು, ಮಳಲಿ, ಕೃಷ್ಣಾಪುರ, ಪೆಂಜಳ್ಳಿ, ನೂರಲಕುಪ್ಪೆ, ಸತ್ತಿಗೆಹುಂಡಿ ಸೇರಿದಂತೆ ಹತ್ತಾರು ಗ್ರಾಮಗಳಿಂದ ಒಂಜು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ, ಗರುಡಗಂಬ ಸ್ಥಾಪನಾ ಕಾರ್ಯಕ್ಕೆ ಸಾಕ್ಷಿಯಾದರು. ಈ ವೇಳೆ ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಧಾರ್ಮಿಕ ಪ್ರವಾಸೋದ್ಯಮಕ್ಕೆ ಮನವಿದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಎನ್. ನಟರಾಜ್ ಮಾತನಾಡಿ, ಕಬಿನಿ ಹಿನ್ನೀರಿನಲ್ಲಿರುವ ಮಗ್ಗೆ ಗ್ರಾಮದ ಶ್ರೀ ಬಾಣೇಶ್ವರಸ್ವಾಮಿ ದೇವಸ್ಥಾನ, ಭೀಮನಕೊಲ್ಲಿಯ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಕಿತ್ತೂರು ಗ್ರಾಮದ ಶ್ರೀ ರವಿರಾಮೇಶ್ವರ ದೇವಸ್ಥಾನಗಳು ಇತಿಹಾಸ ಪ್ರಸಿದ್ಧವಾಗಿದ್ದು, ಅವುಗಳನ್ನು ದರ್ಶನ ಮಾಡುವ ನಿಟ್ಟಿನಲ್ಲಿ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ಘೋಷಣೆ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗಿದೆ ಎಂದರು. ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಭಕ್ತರು ಬೋಟ್ ಮುಖಾಂತರ ಮೂರು ದೇವಸ್ಥಾನಗಳನ್ನು ಕಬಿನಿ ಹಿನ್ನೀರಿನ ಮೂಲಕ ಒಂದರ ನಂತರ ಮತ್ತೊಂದನ್ನು ವೀಕ್ಷಿಸಲು ಅನುಕೂಲವಾಗುವಂತೆ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ಘೋಷಣೆ ಮಾಡುವಂತೆ ಕೋರಲಾಗಿದೆ ಎಂದು ತಿಳಿಸಿದರು.ದೇಗುಲ ಸಮಿತಿ ಮಾಜಿ ಅಧ್ಯಕ್ಷ ಡಿ. ಸುಂದರದಾಸ್, ದೇವಾಲಯ ಸಮಿತಿ ಕಾರ್ಯಾಧ್ಯಕ್ಷ ವೈ.ಪಿ.ನಾಗರಾಜ್, ಉಪಾಧ್ಯಕ್ಷರಾದ ವಿನೋದ್ ಕುಮಾರ್ ರಾಗಲಕುಪ್ಪೆ, ಎ.ಎನ್. ಸುಬ್ರಹ್ಮಣ್ಯ, ಎಂ.ವಿ. ನಂದಕುಮಾರ್, ಕಾರ್ಯದರ್ಶಿ ಸುಬ್ರಹ್ಮಣ್ಯ, ಶ್ಯಾಮ್ ಸುಂದರ್, ರತ್ನಯ್ಯ, ಎಂ.ಆರ್. ನಂದೀಶ್, ಹಿರಿಯರಾದ ಬಿ.ಸಿ. ಬಸಪ್ಪ, ಚಿಕ್ಕತಮ್ಮೇ ಗೌಡ, ಎ.ವಿ. ರಾಜಪ್ಪ, ಎಂ.ಎನ್. ಜಗದೀಶ್, ಕೆ.ಎನ್. ಮಲ್ಲಿಕಾರ್ಜುನ್, ಎ.ಪಿ.ಕೃಷ್ಣ, ಸರಗೂರು ಬಸವಣ್ಣ, ಕೆ.ಸುಬ್ಬೇಗೌಡ, ರಾಮರಾಜ್ ನಂಜನಗೂಡು, ಕೆ. ಮಹೇಶ್, ಹೆಗ್ಗುಡಿಲು ಮಹದೇವ್, ಎಂ.ಬಿ.ಎನ್. ಮೂರ್ತಿ, ನೀಲಕಂಠ, ಡಿ. ನಾಗೇಶ್, ಆರ್.ಆರ್. ಕುಮಾರ್, ಎಚ್.ಟಿ. ರಾಮು, ಸುರೇಶ್, ಎಚ್.ಪಿ. ನಂಜಪ್ಪ, ನಾಗೇಂದ್ರ, ದಿನೇಶ್, ಗೋಪಯ್ಯ, ನಾಗರಾಜನಾಯ್ಕ, ಸೋಮೇಶ್, ಚಲುವರಾಜು, ದೇವರಾಜು, ಗೋವಿಂದ ನಾಯ್ಕ, ಸಾಮ್ರಾಟ್ ಅಶೋಕ್, ಎಂ.ಜಯಣ್ಣ, ಸುರೇಂದ್ರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈ ಮುಗಿಯುತ್ತೇನೆ ದಸರಾದಲ್ಲಿ ಚಲನಚಿತ್ರೋತ್ಸವ ಕೈಬಿಡದಿರಿ
ಎಚ್.ಡಿ. ಕೋಟೆ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಸೋಮೇಶ್ ಆಯ್ಕೆ