ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಕಲಚೇತನರಿಂದ ತಹಸೀಲ್ದಾರ್ ಗೆ ಮನವಿ

KannadaprabhaNewsNetwork |  
Published : Feb 27, 2024, 01:36 AM IST
26ಐಎನ್‌ಡಿ7,ವಿವಿಧ ಬೇಡಿಕೆಗಳನ್ನು ಈಡೆರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಇಂಡಿ: ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ವಿಕಲಚೇತನರಿಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಬೇಕು. ಗ್ರಾಮ ಪಂಚಾಯಿತಿ, ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಸುಸಜ್ಜಿತವಾದ ರಾಂಪ್‌ಗಳನ್ನು ನಿರ್ಮಿಸಬೇಕು. ಗ್ರಾಮ ಪಂಚಾಯಿತಿ ಇತರೆ ಸರ್ಕಾರಿ ಇಲಾಖೆಗಳಲ್ಲಿ ಶೇ.5 ರಷ್ಟು ಅನುದಾನ ಕಡ್ಡಾಯವಾಗಿ ವಿಕಲಚೇತನರಿಗೆ ಬಳಕೆಯಾಗಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ವಿಕಲಚೇತನರ ಭವನ ನಿರ್ಮಾಣ ಮಾಡಬೇಕು. ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ವಿಆರ್‌ಡಬ್ಲ್ಯೂಅವರಗೆ ಇ-ಬೆರಳಚ್ಚು ಜೊತೆಗೆ ಟೇಬಲ್‌, ಖುರ್ಚಿ, ತಿಜೋರಿ ಹಾಗೂ ಲ್ಯಾಪ್ ಟಾಪ್, ಪ್ರಿಂಟರ್ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಂಘದ ತಾಲೂಕು ಅಧ್ಯಕ್ಷ ನಿಂಗರಾಜ ಬಿಸನಾಳ, ಉಪಾಧ್ಯಕ್ಷ ಕನ್ನಯ್ಯ ಹಜೇರಿ, ಶಿವರಾಜ ತಡ್ಲಗಿ, ಪರಮೇಶ್ವರ ಕಂಬಾರ, ಬಾಬು ಹೊಸಮನಿ, ಪಾಂಡು ರಾಠೋಡ, ಸಂತೋಷ ಚವ್ಹಾಣ, ಈರಣ್ಣಾ ಡಂಗೆ, ಮುಬಾರಕ ಮುಲ್ಲಾ, ಸರೂಬಾಯಿ ಹಂಜಗಿ, ಸುಮಯಾ ಮೋಮಿನ, ಸುಮೀನಾ ಬೇಪಾರಿ, ಪ್ರಕಾಶ ಚಿಂಚಗೋಳ, ಶಿವಾನಂದ ಮಲಕಗೊಂಡ, ಹುಸೇನಸಾಬ ಸುತಾರ, ಬಸವರಾಜ ಸೊನ್ನ, ಸಿದ್ದಪ್ಪ ಗುಲೆ, ಶಿವಾನಂದ ಬಿರಾದಾರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!