ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುವ ಸಾಧ್ಯತೆಯಿದೆ

KannadaprabhaNewsNetwork |  
Published : Jul 10, 2026, 12:15 AM IST
10 | Kannada Prabha

ಸಾರಾಂಶ

ಒಂದು ವೇಳೆ ಅವರ ಅರ್ಜಿ ಸ್ವೀಕೃತವಾದಲ್ಲಿ ಮೇಕೆದಾಟು ಯೋಜನೆಗಳಿಗೆ ಹಲವಾರು ಇಲಾಖೆಗಳು ಅನುಮತಿ ನೀಡದೇ, ವಿಷಯ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಬಹುದಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕಾವೇರಿ ತೀರ್ಪನ್ನು ಪ್ರಶ್ನಿಸಿ ತೀರಾ ತಡವಾಗಿ ಹಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ, ಒಂದು ವೇಳೆ ಸುಪ್ರೀಂಕೋರ್ಟ್ ನಲ್ಲಿ ಅವರ ಅರ್ಜಿ ಸ್ವೀಕೃತವಾದಲ್ಲಿ ವಿಷಯ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಿ ಮೇಕೆದಾಟು ಯೋಜನೆಗೆ ಹಲವಾರು ಅನುಮೋದನೆ ಇಲಾಖೆಗಳು ಅಡ್ಡಗಾಲು ಹಾಕುವ ಸಾಧ್ಯತೆಯಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಹೇಳಿದರು.

ಈ ಹಿಂದೆಯೇ ತೀರ್ಪು ಬಂದಾಗ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದರೂ ಯಾರೊಬ್ಬರೂ ಕಿವಿಗೊಡಲಿಲ್ಲ. ಆದರೆ, ಈಗ ಪ್ರಶ್ನಿಸುತ್ತಿದ್ದಾರೆ. ಕಾಲ ಮೀರಿದ್ದು, ಒಂದು ವೇಳೆ ಅವರ ಅರ್ಜಿ ಸ್ವೀಕೃತವಾದಲ್ಲಿ ಮೇಕೆದಾಟು ಯೋಜನೆಗಳಿಗೆ ಹಲವಾರು ಇಲಾಖೆಗಳು ಅನುಮತಿ ನೀಡದೇ, ವಿಷಯ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಬಹುದಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾವೇರಿ ತೀರ್ಪು ಕುರಿತಂತೆ ಮೇಲ್ಮನವಿ ಸಲ್ಲಿಸುವ ನೆಪದಲ್ಲಿ ಹಲವಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಈ ಕುರಿತು ತನಿಖೆ ನಡೆಯಬೇಕು. ರಾಜ್ಯದವರೇ ಈ ರೀತಿ ಅಡ್ಡಗಾಲು ಹಾಕುವ ವೇಳೆ ತಮಿಳುನಾಡಿನವರು ಸುಮ್ಮನಿರುವುದಿಲ್ಲ. ಅವರು ಸಹ ಏನಾದರೂ ತಕರಾರು ತೆಗೆಯುತ್ತಾರೆ. ಹೀಗಾಗಿ, ವ್ಯಾಪ್ತಿಗೆ ಒಳ ಪಡದ ಮೇಲ್ಮನವಿಗಳನ್ನು ಈಗ ವಾಪಸ್ ಪಡೆಯುವುದೇ ಸೂಕ್ತ ಎಂದರು.

ರಾಜ್ಯ ರಾಜ್ಯಗಳಿಗೆ ಸಂಬಂಧಿಸಿದ ವಿವಾದದಲ್ಲಿ ಯಾವುದೇ ವ್ಯಕ್ತಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂಬ ಕಾರಣ ಇವರು ಮರೆತಿದ್ದಾರೆ. ಮೇಕೆದಾಟುವಿಗೆ ಸಂಬಂಧಿಸಿದ ಅಡೆತಡೆಗಳನ್ನು ತಮಿಳುನಾಡಿನ ಪುನರ್ ಪರಿಶೀಲನೆ ಅರ್ಜಿ ಸಹ ವಜಾಗೊಳಿಸುವ ಮೂಲಕ ಹಾದಿ ಸುಗಮಗೊಳಿಸಿದೆ. ಹೀಗಿರುವಾಗ ರಾಜ್ಯದ ಹಲವರು ಅನಗತ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕ್ಕೆ ಡಿಕ್ಕಿಯಾಗಿ ಪೆಟ್ರೋಲ್‌ - ಹಾಲಿನ ಟ್ಯಾಂಕರ್‌ ಬೆಂಕಿಗಾಹುತಿ
ಹಾಲಿನ ಖರೀದಿ ದರ ₹10 ಹೆಚ್ಚಳಕ್ಕೆ ಆಗ್ರಹಿಸಿ ಬೀದಿಗಿಳಿದ ದೊಡ್ಡಬಳ್ಳಾಪುರ ತಾಲೂಕಿನ ರೈತರು