ರಾಜ್ಯದಲ್ಲಿ ಜ್ಞಾನದೀಪ ಶಿಕ್ಷಣ ಯೋಜನೆಯಡಿ 1000 ಗೌರವ ಶಿಕ್ಷಕರ ನೇಮಕ

KannadaprabhaNewsNetwork |  
Published : Jul 08, 2026, 02:30 AM IST
   ಉಡುಪಿಯಲ್ಲಿ ಜ್ಞಾನದೀಪ ಶಿಕ್ಷಕರ ಸಂದರ್ಶನ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಧರ್ಮದರ್ಶಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜ್ಞಾನ ದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ 2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಾದ್ಯಂತ 1000 ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕಾತಿ ನೀಡಿದ್ದು, ಉಡುಪಿ ಜಿಲ್ಲೆಗೆ ಮಂಜೂರಾತಿ ಆದ 100 ಮಂದಿ ಜ್ಞಾನದೀಪ ಶಿಕ್ಷಕರ ಸಂದರ್ಶನ ಪ್ರಕ್ರಿಯೆ ಇಲ್ಲಿನ ಬ್ರಹ್ಮಗಿರಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಸೌಧ ಕಟ್ಟಡದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಇವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಉಡುಪಿ: ಧರ್ಮದರ್ಶಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜ್ಞಾನ ದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ 2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಾದ್ಯಂತ 1000 ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕಾತಿ ನೀಡಿದ್ದು, ಉಡುಪಿ ಜಿಲ್ಲೆಗೆ ಮಂಜೂರಾತಿ ಆದ 100 ಮಂದಿ ಜ್ಞಾನದೀಪ ಶಿಕ್ಷಕರ ಸಂದರ್ಶನ ಪ್ರಕ್ರಿಯೆ ಇಲ್ಲಿನ ಬ್ರಹ್ಮಗಿರಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಸೌಧ ಕಟ್ಟಡದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಇವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಅವರು ಉದ್ಘಾಟನೆ ಮಾಡಿ ಸಮುದಾಯಾಭಿವೃದ್ಧಿ ಕಾರ್ಯಕ್ರಮದ ಸಂಪೂರ್ಣ ವಿವರದ ಬಗ್ಗೆ ಮಾಹಿತಿ ನೀಡಿದರು.ಕೇಂದ್ರ ಕಚೇರಿಯ ಸಮುದಾಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಶೇಖರ್‌ ಜ್ಞಾನ ದೀಪ ಶಿಕ್ಷಕರ ಕರ್ತವ್ಯದ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ಎಂ.ಐ.ಎಸ್.ಯೋಜನಾಧಿಕಾರಿ ಸ್ವಪ್ನ ಪ್ರಕಾಶ್‌, ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ, ಬಾಲಕೃಷ್ಣ ಹಿರಿಂಜ, ಉಮೇಶ್‌, ಸುಧೀರ್‌, ರಮೇಶ್‌ ಪಿ.ಕೆ. ಮತ್ತು ತರಬೇತೆ ಸಂಸ್ಥೆಯ ಪ್ರಾಂಶುಪಾಲರಾದ ಅನಿತಾ ಶೆಟ್ಟಿ ಉಪಸ್ಥಿತರಿದ್ದು, ಸಂದರ್ಶನ ಪ್ರಕ್ರಿಯೆ ನಡೆಸಿದರು. ಜಿಲ್ಲಾ ಕಚೇರಿ ಪ್ರಬಂಧಕರಾದ ಜ್ಯೋತಿ ಸ್ವಾಗತಿಸಿ, ಚೈತ್ರ ಕಾರ್ಯಕ್ರಮ ನಿರೂಪಣೆ ಮಾಡಿದ್ದು, ನಿತೇಶ್‌ ವಂದಿಸಿದರು. ಅರ್ಪಿತಾ, ಸರೋಜಿನಿ, ಕೀರ್ತೀಕ್, ಯಶೋದಾ ಮತ್ತು ಕಿರಣ್‌ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಕೋರ್ಟಿಗೀಗ ಹೆಚ್ಚುವರಿ ಭದ್ರತೆ
ಉಡುಪಿ ಜಿಲ್ಲೆ ‘ಸಾಸ್‌ನ ಪ್ರಭಾವಿ ಜಿಲ್ಲೆ’