ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಫೆ.3ರಿಂದ 6ರವರೆಗೆ ಗ್ರಾಪಂಗಳ ಅವಧಿ ಮುಕ್ತಾಯವಾಗುವ ಹಿನ್ನೆಲೆ ಇಲ್ಲಿಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಮುಂದಿನ ಆದೇಶದವರೆಗೆ ಗ್ರಾಪಂನ ಎಲ್ಲ ಅಧಿಕಾರ ಮತ್ತು ಕರ್ತವ್ಯಗಳನ್ನು ಆಡಳಿತ ಅಧಿಕಾರಿಯೇ ನಿರ್ವಹಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಶೀಘ್ರ ಚುನಾವಣೆ ನಡೆಸುವಂತೆ ಒತ್ತಾಯ:ಗ್ರಾಪಂ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಂಡ ನಂತರದಲ್ಲಿ ಗ್ರಾಮಗಳಲ್ಲಿ ಹೊಸ ಯೋಜನೆ ಅನುಷ್ಠಾನಕ್ಕೆ ಸಹಜವಾಗಿ ತೊಂದರೆಯಾಗಲಿದೆ. ಇದರಿಂದ ಗ್ರಾಮದ ಜನರಿಗೆ ಕೇವಲ ಮೂಲ ಸೌಕರ್ಯ ಕಲ್ಪಿಸಲಷ್ಟೇ ಗ್ರಾಪಂ ಸೀಮಿತವಾಗಬಾರದು, ಆದಷ್ಟು ಬೇಗ ಗ್ರಾಪಂ, ತಾಪಂ ಹಾಗೂ ಜಿಪಂಗಳಿಗೆ ಚುನಾವಣೆ ನಡೆಸಬೇಕು ಎಂದು ಮುಖಂಡರಾದ ಮುನೀರಅಹ್ಮದ್ ಮಳಖೇಡ, ರಮೇಶ ಮಸಿಬಿನಾಳ, ಕಾಶಿನಾಥ ಕೊರಿ, ಶಿವರಾಜ ತಳವಾರ, ವಿಠ್ಠಲ ಯಂಕಂಚಿ ಸೇರಿ ಹಲವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ತಾಲೂಕಿನ 14 ಗ್ರಾಪಂ ಅಧಿಕಾರಿಗಳು
1) ಹಿಟ್ನಳ್ಳಿ ಗ್ರಾಪಂಗೆ ಸಿಂದಗಿ ಕೃಷಿ ಇಲಾಖೆ ಶರಣಗೌಡ ಬಿರಾದಾರ2) ಚಿಕ್ಕರೂಗಿ ಗ್ರಾಪಂಗೆ ಸಿಂದಗಿ ತೋಟಗಾರಿಕೆ ಇಲಾಖೆ ಸಚೀನ ಉಟಗಿ
3) ಮುಳಸಾವಳಗಿ ಗ್ರಾಪಂಗೆ ಕೆಬಿಜೆಎನ್ಎಲ್ ಅಧಿಕಾರಿ ವಿಶ್ವನಾಥ ಚವ್ಹಾಣ4) ಕೋರವಾರ ಗ್ರಾಪಂಗೆ ಕೆಬಿಜೆಎನ್ಎಲ್ ಅಧಿಕಾರಿ ರಿಯಾಜಅಹ್ಮದ ಬಾಗಲಕೋಟ
5) ಜಾಲವಾದ ಗ್ರಾಪಂಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ6) ಕೆರೂಟಗಿ ಗ್ರಾಪಂಗೆ ಸಿಂದಗಿ ಎಪಿಎಂಸಿ ಅಧಿಕಾರಿ ಬಿ.ಎಲ್.ಜುಮನಾಳ
7) ಕೊಂಡಗೂಳಿ ಗ್ರಾಪಂಗೆ ತಾಪಂ ಇಒ ಭಾರತಿ ಚೆಲುವಯ್ಯ8) ಯಾಳವಾರ ಗ್ರಾಪಂಗೆ ಪಿಡಬ್ಲ್ಯೂಡಿ ಎಇಇ ಅರುಣಕುಮಾರ ವಡಿಗೇರಿ
9) ಮಾರ್ಕಬ್ಬಿನಹಳ್ಳಿ ಗ್ರಾಪಂಗೆ ಹೆಸ್ಕಾಂ ಎಇಇ ಸುರೇಶ ಸುಲಾಖೆ10) ಸಾತಿಹಾಳ ಗ್ರಾಪಂಗೆ ಆಹಾರ ದಾಸೋಹ ಇಲಾಖೆ ಎ.ಎಸ್.ಡೋಣೂರ
11) ಹುಣಶ್ಯಾಳ ಗ್ರಾಪಂಗೆ ಕೆಬಿಜೆಎನ್ಎಲ್ ಇಇ ಸಂಗಮೇಶ್ ಮುಂಡಾಸ12) ಹರನಾಳ ಗ್ರಾಪಂಗೆ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ
13/14) ಮಣೂರ ಹಾಗೂ ಯಲಗೋಡ ಗ್ರಾಪಂಗೆ ಪಶು ಸಂಗೋಪನಾ ಇಲಾಖೆ ರಾಮು ರಾಠೋಡಜಿಪಂ, ತಾಪಂ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದು ಹಲವು ವರ್ಷ ಕಳೆದಿವೆ. ನಮ್ಮ ಅವಧಿ ಮುಕ್ತಾಯದ ನಂತರವೂ ಚುನಾವಣೆ ಮುಂದೂಡಿಕೆ ಮಾಡುತ್ತಾ ಹೋದರೆ, ಗ್ರಾಮದ ಅಭಿವೃದ್ಧಿಗೆ ಪೆಟ್ಟು ಬೀಳಲಿದೆ. ಆದ್ದರಿಂದ ನಿಯಮಿತ ಅವಧಿಯಲ್ಲಿ ಚುನಾವಣೆಯಾದರೆ ಒಳ್ಳೆಯದು ಎನ್ನುತ್ತಾರೆ ಚಿಕ್ಕರೂಗಿ ಗ್ರಾಪಂ ಅಧ್ಯಕ್ಷ ಸಿದ್ದಗೊಂಡಪ್ಪಗೌಡ ಪಾಟೀಲ.