ಕೂಡಲ ಸಂಗಮದಲ್ಲಿ ಗೋಮಾಂಸ ಭಕ್ಷಣೆ ವಿರುದ್ಧ ಸೂಕ್ತ ಕ್ರಮವಾಗಲಿ: ಮುತಾಲಿಕ್‌

KannadaprabhaNewsNetwork |  
Published : Oct 08, 2026, 01:15 AM IST
7ಕೆಡಿವಿಜಿ6, 7-ದಾವಣಗೆರೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಪ್ರಸಿದ್ಧ ಪುಣ್ಯಸ್ಥಳ ಕೂಡಲ ಸಂಗಮದ ಶ್ರೀ ಬಸವಣ್ಣನವರ ಐಕ್ಯ ಸ್ಥಳದಲ್ಲಿ 2 ದಿನಗಳ ಹಿಂದೆ ಅನ್ಯಕೋಮಿನ ಜನರು ಬಂದು, ಗೋಮಾಂಸ ಸೇವಿಸಿದ ವೀಡಿಯೋ ವೈರಲ್ ಆಗಿದೆ. ಹೀಗಿದ್ದರೂ ಅಲ್ಲಿನ ಪೊಲೀಸರು ಯಾರೊಬ್ಬರನ್ನೂ ಬಂಧಿಸಿ, ಕಾನೂನು ಕ್ರಮ ಕೈಗೊಂಡಿಲ್ಲ ಏಕೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಸಿದ್ಧ ಪುಣ್ಯಸ್ಥಳ ಕೂಡಲ ಸಂಗಮದ ಶ್ರೀ ಬಸವಣ್ಣನವರ ಐಕ್ಯ ಸ್ಥಳದಲ್ಲಿ 2 ದಿನಗಳ ಹಿಂದೆ ಅನ್ಯಕೋಮಿನ ಜನರು ಬಂದು, ಗೋಮಾಂಸ ಸೇವಿಸಿದ ವೀಡಿಯೋ ವೈರಲ್ ಆಗಿದೆ. ಹೀಗಿದ್ದರೂ ಅಲ್ಲಿನ ಪೊಲೀಸರು ಯಾರೊಬ್ಬರನ್ನೂ ಬಂಧಿಸಿ, ಕಾನೂನು ಕ್ರಮ ಕೈಗೊಂಡಿಲ್ಲ ಏಕೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ 200 ನೌಕರರು, 50 ಸೆಕ್ಯೂರಿಟಿ ಸಿಬ್ಬಂದಿ ಇದ್ದೀರಿ. ಅಲ್ಲಿ ಗೋಮಾಂಸ ಸೇವಿಸಿದ ವೀಡಿಯೋ ವೈರಲ್ ಆಗಿದ್ದರೂ ಪ್ರಾಧಿಕಾರ, ಸರ್ಕಾರದವರು ಯಾಕೆ ಸುಮ್ಮನಿದ್ದೀರಿ? ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು ಈ ಬಗ್ಗೆ ದೂರು ನೀಡಿದ್ದರೂ ಯಾರನ್ನೂ ಬಂಧಿಸಿಲ್ಲ. ಕೂಡಲ ಸಂಗಮದಲ್ಲೇ 3-4 ಮಠಗಳು, ಮಠಾಧಿಪತಿಗಳಿದ್ದು, ಮಠಾಧಿಪತಿಗಳಾದರೂ ಇಂತಹದ್ದಕ್ಕೆಲ್ಲಾ ಅವಕಾಶ ಆಗದಂತೆ ಗಮನಹರಿಸಬೇಕು. ದೇವಸ್ಥಾನ ಆವರಣದಲ್ಲಿ ಗೋಮಾಂಸ ಭಕ್ಷಿಸುವ ಮೂಲಕ ಹಿಂದೂಗಳ ಶ್ರದ್ಧಾಕೇಂದ್ರದ ಪಾವಿತ್ರ್ಯತೆ ಹಾಳು ಮಾಡುವ ಇಸ್ಲಾಂ ಮಾನಸಿಕತೆಗೆ ಇದು ಸಾಕ್ಷಿ ಎಂದು ಆರೋಪಿಸಿದರು.

ಕೂಡಲ ಸಂಗಮ ಭಾಗದ ಶಾಸಕರಾಗಿ ಈಗ ಸಚಿವ ಡಾ.ಕಾಶೆಪ್ಪನವರ್ ಏನು ಮಾಡುತ್ತಿದ್ದಾರೆ? ಬಾಗಲಕೋಟೆಯ ಕಾಂಗ್ರೆಸ್ ಶಾಸಕ ಏನು ಮಾಡುತ್ತಿದ್ದಾರೆ? ಈ ಸಂಬಂಧ ತಕ್ಷಣ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿ. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಕೂಡಲ ಸಂಗಮಕ್ಕೆ ತೆರಳಿ, ಪ್ರಾಧಿಕಾರದ ಅಧ್ಯಕ್ಷರಿಗೆ ತಕರಾರು ಅರ್ಜಿ ಕೊಡುತ್ತೇವೆ ಎಂದು ಹೇಳಿದರು.

ಶ್ರೀರಾಮ ಸೇನೆ ಉತ್ತರ ಕರ್ನಾಟಕ ಗೌರವಾಧ್ಯಕ್ಷರಾದ ಶ್ರೀ ದಾಮೋದರ ಸರಸ್ವತಿ ಸ್ವಾಮೀಜಿ, ಮುಖಂಡರಾದ ಮಣಿ ಸರ್ಕಾರ್, ಶ್ರೀಧರ್, ಪಿ.ಸಾಗರ್, ಶಿವು ಪೂಜಾರಿ, ರಾಜು ದೊಡ್ಡಮನಿ ಇತರರು ಇದ್ದರು.

- - -

(ಬಾಕ್ಸ್‌)

* ಜಿಮ್ ಸರಣಿ ವರದಿ-ಕನ್ನಡಪ್ರಭ ಕಾಳಜಿಗೆ ಶ್ಲಾಘನೆ

ಜಿಮ್‌ ಜಿಹಾದ್, ಲವ್‌ ಜಿಹಾದ್, ಜಿಮ್‌-ಫಿಟ್ನೆಸ್ ಸೆಂಟರ್‌ಗಳಲ್ಲಿ ನಡೆಯುತ್ತಿದ್ದ ಅನೈತಿಕ, ಅಶ್ಲೀಲ ಕೃತ್ಯಗಳ ಬಗ್ಗೆ ಶ್ರೀರಾಮ ಸೇನೆ ಧ್ವನಿ ಎತ್ತಿತ್ತು. ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡಪ್ರಭ ಇಲ್ಲಿ ನಿರಂತರ ಸರಣಿ ಲೇಖನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಇದೆಲ್ಲದರ ಪರಿಣಾಮ ಎಲ್ಲಾ ಜಿಮ್‌-ಫಿಟ್ನೆಸ್ ಸೆಂಟರ್‌ಗಳನ್ನು ತಪಾಸಣೆ ಮಾಡಿ, ಬಿಗಿ ಕ್ರಮ ಕೈಗೊಳ್ಳಲಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರ ಹಿತದೃಷ್ಟಿಯಿಂದ ಕನ್ನಡಪ್ರಭದ ವರದಿ ಸಾಕಷ್ಟು ಪರಿಣಾಮ ಬೀರಿದೆ ಎಂದು ಪ್ರಮೋದ ಮುತಾಲಿಕ್‌ ಹೇಳಿದರು.

- - -

(ಟಾಪ್‌ ಕೋಟ್‌) ನಾಡಹಬ್ಬ ದಸರಾ ವೇಳೆಯೇ ಹಿಂದೂಗಳ ಹಬ್ಬದ ರಜೆ ಕಡಿತಗೊಳಿಸಿ, ಅದನ್ನು ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ಹಬ್ಬಕ್ಕೆ 10 ದಿನಕ್ಕೆ ರಜೆಗೆ ಬಳಸಿಕೊಳ್ಳುತ್ತಿರುವ ಕೆಲವು ಕ್ರೈಸ್ತ ಶಿಕ್ಷಣ ಸಂಸ್ಥೆಗಳು, ಕಾನ್ವೆಂಟ್ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯದ ಎಲ್ಲ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಇನ್ನು 2-3 ದಿನದಲ್ಲೇ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇವೆ. - ಪ್ರಮೋದ ಮುತಾಲಿಕ್, ಮುಖಂಡ.

- - -

-7ಕೆಡಿವಿಜಿ6, 7:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಳುಪಿನಕಟ್ಟೆ ಬಳಿ ಹೈಕೋರ್ಟ್ ಪೀಠ ಸ್ಥಾಪಿಸಲು ಮನವಿ
ಅಚ್ಚುಕಟ್ಟು ಶಾಸಕರು 2 ದಿನ ನಾಲೆ ವೀಕ್ಷಿಸಿ: ತೇಜಸ್ವಿ ಪಟೇಲ್