ದಸರಾ ಸಂಭ್ರಮಕ್ಕೆ ಮತ್ಸ್ಯಲೋಕದ ಮೆರುಗು

KannadaprabhaNewsNetwork |  
Published : Oct 15, 2026, 01:45 AM IST
ಕ್ಯಾಪ್ಷನ14ಕೆಡಿವಿಜಿ42, 43 ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಆರಂಭಿಸಿರುವ ಮೀನು ಖಾದ್ಯಗಳ ಮಳಿಗೆಗೆ ಮೀನುಗಾರಿಕೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

Aquatic World Adds Glamour to Dasara Celebrations

ಮತ್ಸ್ಯಲೋಕ ಅನಾವರಣ

--

-ಮೈಸೂರಿನಲ್ಲಿ ಮೀನುಗಳ ವರ್ಣಲೋಕ । ಮತ್ಸ್ಯಲೋಕ ಪ್ರದರ್ಶನಕ್ಕೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ

--

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿರುವ ‘ಮತ್ಸ್ಯಲೋಕ’ ಪ್ರದರ್ಶನ ಮೀನುಪ್ರಿಯರು, ಪ್ರವಾಸಿಗರು ಹಾಗೂ ಸಾರ್ವಜನಿಕರ ಗಮನ ಸೆಳೆಯಲು ಸಜ್ಜಾಗಿದೆ. ಬಣ್ಣಬಣ್ಣದ ಮೀನುಗಳ ಲೋಕ, ಜಲಚರಗಳ ವೈವಿಧ್ಯ ಹಾಗೂ ಜಲಜೀವಿಗಳ ಕುರಿತ ಕುತೂಹಲಕಾರಿ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಮತ್ಸ್ಯಲೋಕ ಪ್ರದರ್ಶನದ ಸಿದ್ಧತೆ ಹಾಗೂ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆಯಲು ಮೀನುಗಾರಿಕೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಪ್ರದರ್ಶನದ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ವಿವರ ಪಡೆದರು. ದಸರಾ ವೀಕ್ಷಣೆಗೆ ಆಗಮಿಸುವ ಜನರಿಗೆ ಮೀನುಗಳ ವೈವಿಧ್ಯಮಯ ಜಗತ್ತನ್ನು ಪರಿಚಯಿಸುವಲ್ಲಿ ಆಯೋಜಿಸಿರುವ ಈ ಪ್ರದರ್ಶನದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಅ.16ರಿಂದ ಪ್ರದರ್ಶನ ಆರಂಭ:

ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಇದು ಮತ್ತೊಂದು ಆಕರ್ಷಣೆ. ವಿವಿಧ ಬಗೆಯ ಮೀನುಗಳನ್ನು ವೀಕ್ಷಿಸುವುದರೊಂದಿಗೆ ಜಲಚರಗಳ ಬಗ್ಗೆ ತಿಳಿದುಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಈ ಪ್ರದರ್ಶನ ಹೊಂದಿದೆ. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.

ಮತ್ಸ್ಯಲೋಕ ಕಣ್ತುಂಬಿಕೊಳ್ಳಿ:

ದಸರಾ ಮಹೋತ್ಸವವೆಂದರೆ ಅರಮನೆಯ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಹಾಗೂ ಪ್ರವಾಸಿ ತಾಣಗಳ ವೀಕ್ಷಣೆ ಮಾತ್ರವಲ್ಲ; ಹೊಸ ಅನುಭವ ಪಡೆವ ಅವಕಾಶವೂ ಹೌದು. ಈ ಹಿನ್ನೆಲೆಯಲ್ಲಿ ಮತ್ಸ್ಯಲೋಕ ಪ್ರದರ್ಶನವು ದಸರಾ ಸಂಭ್ರಮಕ್ಕೆ ವಿಭಿನ್ನ ಆಯಾಮ ನೀಡಲಿದೆ.

ಮೈಸೂರಿನ ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರು, ಕುಟುಂಬ ಸಮೇತ ಭೇಟಿ ನೀಡುವವರು ಹಾಗೂ ಮಕ್ಕಳು ಮತ್ಸ್ಯಲೋಕ ಪ್ರದರ್ಶನಕ್ಕೆ ಭೇಟಿ ನೀಡಿ, ಮೀನುಗಳ ಆಕರ್ಷಕ ಲೋಕವನ್ನು ಕಣ್ತುಂಬಿಕೊಳ್ಳಬೇಕು ಎಂದು ಸಚಿವ ಕೆ.ಎಸ್.ಬಸವಂತಪ್ಪ ಮನವಿ ಮಾಡಿದರು.

ಆಹಾರ ಮೇಳಕ್ಕೆ ಸಚಿವ ಬಸವಂತಪ್ಪ ಭೇಟಿ:

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಆರಂಭಿಸಿರುವ ಮೀನು ಖಾದ್ಯಗಳ ಮಳಿಗೆಗೆ ಮೀನುಗಾರಿಕೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಮಳಿಗೆಯಲ್ಲಿ ಗ್ರಾಹಕರಿಗೆ ಒದಗಿಸಲಾಗುತ್ತಿರುವ ಮೀನು ಖಾದ್ಯಗಳ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ತಯಾರಿಕೆಯ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದ ಸಚಿವರು, ತಾಜಾ ಮೀನುಗಳಿಂದ ತಯಾರಿಸಿದ ರುಚಿಕರ ಖಾದ್ಯಗಳನ್ನು ಉತ್ತಮ ಗುಣಮಟ್ಟದಲ್ಲಿ ಗ್ರಾಹಕರಿಗೆ ಒದಗಿಸುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಲಹೆ-ಸೂಚನೆ ನೀಡಿದರು.

ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಹಕರಿಗೆ ರುಚಿಕರವಾದ ಖಾದ್ಯಗಳ ಜತೆಗೆ ಉತ್ತಮ ಸೇವೆಯನ್ನೂ ಒದಗಿಸಬೇಕು. ಮೇಳಕ್ಕೆ ಆಗಮಿಸುವವರು ತೃಪ್ತಿಕರವಾದ ಆಹಾರ ಅನುಭವವನ್ನು ಪಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮೀನುಗಾರಿಕಾ ಕ್ಷೇತ್ರಕ್ಕೆ ಉತ್ತೇಜನ

ಮೇಳಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕರೂ ಉತ್ತಮ ಗುಣಮಟ್ಟದ ಆಹಾರ ಮತ್ತು ಆಹ್ಲಾದಕರ ಅನುಭವದೊಂದಿಗೆ ಮರಳಬೇಕು ಎಂಬುದು ಇಲಾಖೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಸಚಿವರು ತಿಳಿಸಿದರು.

.........

ಪೋಟೊ: 14ಕೆಡಿವಿಜಿ42, 43

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಆರಂಭಿಸಿರುವ ಮೀನು ಖಾದ್ಯಗಳ ಮಳಿಗೆಗೆ ಮೀನುಗಾರಿಕೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ
ಪೌರ ಕಾರ್ಮಿಕರಿಂದ ಮಹಿಳಾ ಬೈಕ್ ರ‍್ಯಾಲಿಗೆ ಚಾಲನೆ