ಅರಳಿಕಟ್ಟೆ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ: ಅನಂತಪ್ಪ

KannadaprabhaNewsNetwork |  
Published : Jan 12, 2025, 01:19 AM IST
ಕರಕುಚ್ಚಿ ಶಾಲಾ ಆವರಣದ ಅರಳಿಕಟ್ಟೆ ಕಟ್ಟಡವನ್ನು ಪೂಜೆ ಸಲ್ಲಿಸುವ ಮುಖಾಂತರ ಲೋಕಾರ್ಪಣೆ | Kannada Prabha

ಸಾರಾಂಶ

ತರೀಕೆರೆ: ಸಾವಿತ್ರಿಬಾಯಿ ಫುಲೆ ರವರ ಜನ್ಮ ದಿನದಂದೆ ಲೋಕಾರ್ಪಣೆ ಗೊಳ್ಳುತ್ತಿರುವ ಅರಳಿಕಟ್ಟೆ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತರೀಕೆರೆ ತಾಲೂಕು ಅಧ್ಯಕ್ಷ ಅನಂತಪ್ಪ ಹೇಳಿದರು.

ಕರಕುಚ್ಚಿ ಶಾಲೆಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೊಡುಗೆ*

ಕನ್ನಡಪ್ರಭ ವಾರ್ತೆ, ತರೀಕೆರೆ ಸಾವಿತ್ರಿಬಾಯಿ ಫುಲೆ ರವರ ಜನ್ಮ ದಿನದಂದೆ ಲೋಕಾರ್ಪಣೆ ಗೊಳ್ಳುತ್ತಿರುವ ಅರಳಿಕಟ್ಟೆ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತರೀಕೆರೆ ತಾಲೂಕು ಅಧ್ಯಕ್ಷ ಅನಂತಪ್ಪ ಹೇಳಿದರು.

ಗ್ರಾಮದ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಅರುಣ್ ಕುಮಾರ್ ಎನ್. ವಿ. ಕರಕುಚ್ಚಿ ಶಾಲಾ ಆವರಣದ ಅರಳಿಕಟ್ಟೆ ಕಟ್ಟಡವನ್ನು ಪೂಜೆ ಸಲ್ಲಿಸುವ ಮುಖಾಂತರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈ ಶಾಲೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಹಾಗೂ ಅರುಣ್ ಕುಮಾರ್ ರವರ ಈ ಕಾರ್ಯ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅರಳಿಕಟ್ಟೆ ನಿರ್ಮಿಸಿದ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್‌ ಅಧ್ಯಕ್ಷ ಅರುಣ್ ಕುಮಾರ್ ಎನ್ . ವಿ ಅವರನ್ನು ಎಸ್ ಡಿ ಎಮ್ ಸಿ ಎಲ್ಲಾ ಸದಸ್ಯರು, ಶಾಲೆ ಶಿಕ್ಷಕರು ಸನ್ಮಾನಿಸಿದರು. ಇದೇ ಸಮಾರಂಭದಲ್ಲಿ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್‌ ನಿಂದ ಪ್ರಕಟವಾದ 2025ರ ಕ್ಯಾಲೆಂಡರ್ ಬಿಡುಗಡೆ ಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಧರಣೀಶ್, ಸದಸ್ಯ ಆನಂದ್ , ನೌಕರರ ಸಂಘದ ನಿರ್ದೇಶಕ ರಾಮಚಂದ್ರಪ್ಪ ಬಿಡುಗಡೆಗೊಳಿಸಿದರು. ಕ್ಯಾಲೆಂಡರ್ ಬಿಡುಗಡೆಗೆ ಸಹಕರಿಸಿದ ದಾನಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿ ಕಳೆದ ಒಂಬತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ನಿವೃತ್ತರಾದ ಶಿವಪ್ಪ ಎಸ್ .ಎಚ್. ರವರಿಗೆ ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡಿ ನಿವೃತ್ತ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಪ್ಪ ಶಾಲೆಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಸಲ್ಲಿಸಿದ ಸೇವೆ ಸಂತೃಪ್ತಿ ತಂದಿದೆ ನಿವೃತ್ತಿಯ ಈ ಸಮಯದಲ್ಲಿ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಎಸ್ .ಡಿ. ಎಮ್ . ಸಿ ಅಧ್ಯಕ್ಷರು, ಸದಸ್ಯರು, ಸಹೋದ್ಯೊಗಿಗಳು ಗೌರವಿಸಿ ಬೀಳ್ಕೊಡುತ್ತಿರುವುದು ಸಂತಸ ತಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷೆ ಪುಷ್ಪವಹಿಸಿದ್ದರು. ಸಹಶಿಕ್ಷಕರಾದ ಎಮ್ . ಗೀತಾ ಮುಖ್ಯಶಿಕ್ಷಕ ದೇವೇಂದ್ರನಾಯ್ಕ, ಅತಿಥಿಶಿಕ್ಷಕ ಶಿವರಾಜ್. ಎಲ್. , ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಅರುಣ್ ಕುಮಾರ್ , ಶಿಕ್ಷಕರ ಸಂಘದ ಪದಾಧಿಕಾರಿಗಳು ,ಪ್ರಮುಖರಾದ ಮೋಹನ್ ಕುಮಾರ್ ಕೆ. ಜೆ. ಅಣ್ಣಪ್ಪ ಕೆ. ಎಚ್. ಸುನೀಲ್ ರಾಮನಾಯ್ಕ, ಠಾಕ್ರನಾಯ್ಕ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ