ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ಸಮಿತಿಯ ಪೋಷಕರಾದ ಮಾಜಿ ಉಪ ಮೇಯರ್ ವಿ. ಶೈಲೇಂದ್ರ ಮಾತನಾಡಿ, ಉದ್ಯಾನವನದ ಸ್ಥಳವನ್ನು ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಸ್ಥಳದಲ್ಲಿ ತಾಲೂಕು ಕಚೇರಿ ತೆರೆಯುವ ಚಿಂತನೆ ನಡೆಸಿ, ನಂತರ ಅರಣ್ಯ ಪ್ರದೇಶವೆಂದು ಘೋಷಿಸಿದರು. ಇಲಾಖೆಗೂ ಹಸ್ತಾಂತರಿಸಲಾಯಿತು. ಸುಮಾರು 33 ಎಕರೆ ಸ್ಥಳವನ್ನು ಅರಣ್ಯ ಇಲಾಖೆಯೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ನಿರ್ಮಿಸಿದರು ಎಂದರು.
ಉದ್ಯಾನವನ ನಿರ್ಮಾಣಗೊಂಡ ನಂತರ ಸಾರ್ವಜನಿಕರು ಇಲಾಖೆಯೊಂದಿಗೆ ಜೊತೆಗೂಡಿ ವೃಕ್ಷೋದ್ಯಾನವನ್ನು ಅಭಿವೃದ್ಧಿ ಪಡಿಸಲು ಸಹಕಾರ ನೀಡಿದ್ದು, ಉದ್ಯಾನವನದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. 1800 ಮರಗಳನ್ನು ಪೋಷಿಸಲಾಗಿದೆ. ವಾಕಿಂಗ್ ಪಾತ್, ಮಕ್ಕಳಿಗೆ ಆಟೋಟ ಉಪಕರಣ ಹಾಗೂ ಜಿಮ್ ಅಳವಡಿಸಲಾಗಿದ್ದು, ಹೀಗೆ ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ವೃಕ್ಷೋದ್ಯಾನದ ನಿರ್ವಹಣೆಯಲ್ಲಿ ತೊಡಗಿದ್ದೇವೆ ಎಂದು ಅವರು ತಿಳಿಸಿದರು.ಹೀಗಿರುವಾಗ ಶನಿವಾರ ವೃಕ್ಷೋದ್ಯಾನದ ತಡೆಗೋಡೆಯನ್ನು ಒಡೆದು ಹಾಕಿ ಅಕ್ರಮವಾಗಿ ಜೆಸಿಬಿ ನುಗಿಸಿ, ಪ್ರವೇಶ ಪಡೆದ ಭೂಮಾಫಿಯಾದ ಕಳ್ಳರು ಜಲ್ಲಿ ಕಲ್ಲು, ಎಂ ಸ್ಯಾಂಡ್, ಕಾಂಕ್ರಿಟ್ ಹಲಗೆ, ಕಾಂಕ್ರಿಟ್ ಗೋಡೆಗಳನ್ನು ತಂದು ಏಕಾಏಕಿ ಗುಂಡಿಗಳನ್ನು ತೋಡಿ ಗೋಡೆ ನಿರ್ಮಿಸಲು ಮುಂದಾಗಿದ್ದು, ಸಾರ್ವಜನಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದ ತಕ್ಷಣ ಅಧಿಕಾರಿಗಳು ಗೋಡೆ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದಾರೆ.
ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಇದ್ದರು.
ಬಾಕ್ಸ್...
ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಒತ್ತುವರಿ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದು, ಜಯನಗರದ ಸಿದ್ದಪ್ಪ, ಬಿ. ರಾಜೀವ ಸೇರಿದಂತೆ 50 ಮಂದಿ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.