ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಸ್ಮರಣೆ ಅಗತ್ಯ

KannadaprabhaNewsNetwork |  
Published : Apr 15, 2026, 02:15 AM IST
ಯಲಬುರ್ಗಾದಲ್ಲಿ ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಶಾಸಕ ಬಸವರಾಜ ರಾಯರಡ್ಡಿ ಮಾಲಾರ್ಪಣೆ ಮಾಡಿದರು. | Kannada Prabha

ಸಾರಾಂಶ

ಅಂಬೇಡ್ಕರ್ ವಿಶ್ವಕಂಡ ಮಹಾಚೇತನರಾಗಿದ್ದು, ಸಂವಿಧಾನದ ಮೂಲಕ ದೇಶದ ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ಕಲ್ಪಿಸಿದ್ದಾರೆ

ಯಲಬುರ್ಗಾ: ಜಗತ್ತು ಕಂಡ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆ ಅಗತ್ಯವಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ತಾಲೂಕಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಅಂಬೇಡ್ಕರ್ ವಿಶ್ವಕಂಡ ಮಹಾಚೇತನರಾಗಿದ್ದು, ಸಂವಿಧಾನದ ಮೂಲಕ ದೇಶದ ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ಕಲ್ಪಿಸಿದ್ದಾರೆ. ದೇಶಕ್ಕೆ ಸಮಾನತೆಯ ಹರಿಕಾರ ಅಂಬೇಡ್ಕರ್ ಕೊಡುಗೆ ಬಹುದೊಡ್ಡದಿದೆ. ಶಿಕ್ಷಣದಿಂದ ಮಾತ್ರ ಎಲ್ಲರೂ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಅವರು ಮನಗಂಡಿದ್ದರು. ಹೀಗಾಗಿ, ಪ್ರತಿಯೊಬ್ಬರೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು. ವಿಶ್ವ ಮಟ್ಟದಲ್ಲಿ ಭಾರತದ ಸಂವಿಧಾನ ಬೇರೆ ದೇಶಗಳಿಗೆ ಮಾದರಿಯಾಗಿದೆ. ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಕೊಡುಗೆಯೂ ಅಪಾರವಿದೆ ಎಂದರು.

ತಹಸೀಲ್ದಾರ್ ಪ್ರಕಾಶ ನಾಶಿ ಮಾತನಾಡಿ, ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರು ಮಾಡಿದ ಕೆಲಸ ದೊಡ್ದದು. ಉಭಯ ಮಹಾತ್ಮರ ಚಿಂತನೆಗಳು ಸಮಾಜಕ್ಕೆ ಶಕ್ತಿಯಾಗಿದೆ. ಸಮುದಾಯವರು ಶಿಕ್ಷಣದಿಂದ ವಂಚಿತರಾಗಬಾರದು. ನಮ್ಮ ರಾಷ್ಟ್ರಕ್ಕೆ ಸಂವಿಧಾನ ಪವಿತ್ರವಾದ ಗ್ರಂಥವಾಗಿದೆ ಎಂದರು.

ಶಿಕ್ಷಕ ನಾಗರಾಜ ನಡುವಲಕೇರಿ, ಉಪನ್ಯಾಸಕಿ ಶ್ರೀದೇವಿ ಮೂಕಿಹಾಳ ವಿಶೇಷ ಉಪನ್ಯಾಸ ನೀಡಿದರು.

ಅದ್ದೂರಿ ಮೆರವಣಿಗೆ: ಇಲ್ಲಿನ ಪಪಂ ಕಚೇರಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ‌. ಅಂಬೇಡ್ಕರ್ ಮತ್ತು ಜಗಜೀವನರಾಂ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಗಣ್ಯಮಾನ್ಯರು ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ ಪಪಂ ಮುಖ್ಯಾಧಿಕಾರಿ ನಾಗೇಶ, ಗಣ್ಯರಾದ ಶೇಖರಗೌಡ ಉಳ್ಳಾಗಡ್ಡಿ, ಡಾ. ಶಿವನಗೌಡ ದಾನರಡ್ಡಿ, ಕೆರಿಬಸಪ್ಪ ನಿಡಗುಂದಿ, ಅಂದಪ್ಪ ಹಾಲಕೇರಿ, ಯಮನೂರಪ್ಪ ನಡುಲಮನಿ, ಶಂಕರ ಜಕ್ಕಲಿ, ಸಿದ್ದಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಜಕ್ಕಲಿ, ಕಳಕಪ್ಪ ಕಂಬಳಿ, ಈರಪ್ಪ ಕುಡಗುಂಟಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ರಮೇಶ ಛಲವಾದಿ, ಛತ್ರಪ್ಪ ಮುಧೋಳ, ಶಂಕರ ಭಾವಿಮನಿ, ಶಿವಾನಂದ ಬಣಕಾರ, ಈರಪ್ಪ ಬಣಕಾರ, ದೊಡ್ಡಯ್ಯ ಗುರುವಿನ, ಕಳಕಪ್ಪ ತಳವಾರ್, ಅಧಿಕಾರಿಗಳಾದ ಬಿ. ಮಲ್ಲಿಕಾರ್ಜುನ, ನಿಂಗನಗೌಡ ಪಾಟೀಲ್, ಅಶೋಕ ಗೌಡರ, ಪ್ರಮೋದ ತುಂಬಳ, ಬಸವರಾಜ ಗೋಗೇರಿ, ನಜೀಯಾ, ಹಸೇನ್, ಶಿಕ್ಷಕರಾದ ಬಸವರಾಜ ಕೊಂಡುಗುರಿ, ಮೆಹಬೂಬ್ ಬಾದಷಾ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ರಚನೆಯಾದ ದಿನ ನಿಜವಾದ ಸ್ವಾತಂತ್ರ‍್ಯ ದೊರಕಿದ ದಿನ: ಶಾಸಕ ಕೋಳಿವಾಡ
ಅಂಬೇಡ್ಕರ್ ಸಮಾನತೆಯ ಸಂದೇಶ ಪಾಲಿಸಿ: ಲಕ್ಷ್ಮೀಪ್ರಿಯಾ