ಕನ್ನಡಪ್ರಭ ವಾರ್ತೆ ಯಳಂದೂರು
ಈ ಸಂದರ್ಭದಲ್ಲಿ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ರಾಮೇಗೌಡರವರು ಬುಡಕಟ್ಟು ಸೋಲಿಗ ಜನಾಂಗದಲ್ಲಿ ಜನಿಸಿ ತಮ್ಮ ತಂದೆಯವರಿಂದ ಅರಣ್ಯ ಗಿಡಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇಂದು ನಶಿಸುತ್ತಿರುವ ಅರಣ್ಯ ಗಿಡಗಳ ಸಂತತಿಯನ್ನು ಉಳಿಸುವ ಪಣತೊಟ್ಟ ಇವರು ನೂರಾರು ಗಿಡಗಳ ಕಾಂಡ, ಬೇರು, ಬೀಜಗಳನ್ನು ತಂದು ಇದನ್ನು ಗಿಡಗಳಾಗಿ ಮಾಡಿ ತಮ್ಮ ನರ್ಸರಿಯಲ್ಲೇ ಬೆಳೆಸಿ ಇವುಗಳನ್ನು ಆಸಕ್ತರಿಗೆ ನೀಡುವಂತಹ ಅಪರೂಪದ ಕರ್ತವ್ಯವನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಪ್ರಕೃತಿಯ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಪರೂಪದ ಜೀವಜಂತುಗಳ ರಕ್ಷಕರಾಗಿದ್ದಾರೆ. ಇವರ ಈ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಸಂದಿವೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯೂ ಕೂಡ ಇವರಿಗೆ ಲಭಿಸಿದ್ದು ಇವರನ್ನು ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದರೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡ, ಇತ್ತೀಚೆಗೆ ಪಕ್ಷದ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ವೆಂಕಟೇಶ್‌ರವರಿಗೂ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್, ಗ್ರಾಪಂ ಮಾಜಿ ಸದಸ್ಯ ಶಿವನಂಜಯ್ಯ, ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ರೂಪೇಶ್, ಮಾದೇಶ್, ಪ್ರದೀಪ್ ಸೇರಿ ಇತರರು ಇದ್ದರು.