ನಂಬಿಕೆ, ವಿಶ್ವಾಸವಿದ್ದಾಗ ಮಾತ್ರ ಸಕಲ ಜಲಚರ ರಕ್ಷಿಸಲು ಸಾಧ್ಯ: -ಸುತ್ತೂರು ಶ್ರೀ

KannadaprabhaNewsNetwork |  
Published : Mar 21, 2024, 01:02 AM ISTUpdated : Mar 21, 2024, 01:03 AM IST
55 | Kannada Prabha

ಸಾರಾಂಶ

ದೇವಸ್ಥಾನಗಳು ಮನುಷ್ಯನ ಧಾರ್ಮಿಕ ಜಾಗೃತ ತಾಣಗಳು, ದೇವರ ಮೇಲೆ ನಂಬಿಕೆ ಇಡಬೇಕು. ಭಗವಂತ ಇರುವಿಕೆಯಿಂದಲೇ ಉತ್ತಮ ಮಳೆ, ಬೆಳೆಯಾಗುತ್ತಿರುವುದು. ಜಗತ್ತಿನಲ್ಲಿ ಭಗವಂತ ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು. ಇದರಿಂದಾಗಿ ಎಲ್ಲರೂ ಭಗವಂತನ ಮೇಲೆ ನಂಬಿಕೆ, ವಿಶ್ವಾಸ ಇಡಬೇಕು. ಸಿದ್ದಗಂಗಾ ಶ್ರೀಗಳು ಸಮಾಜ ಸುಧಾರಣೆಗಾಗಿ ದುಡಿದವರು

ಕನ್ನಡಪ್ರಭ ವಾರ್ತೆ ಸರಗೂರು

ನಂಬಿಕೆ, ವಿಶ್ವಾಸವಿದ್ದಾಗ ಮಾತ್ರ ಭಗವಂತನು ಸಕಲ ಜಲಚರ ರಕ್ಷಣೆ ಮಾಡಲು ಸಾಧ್ಯವಾಗಲಿದ್ದು, ಎಲ್ಲರೂ ಭಕ್ತಿ ಮಾರ್ಗದಲ್ಲಿ ನಂಬಿಕೆ ಇಡಬೇಕು ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಕಾಟವಾಳು ಗ್ರಾಮದಲ್ಲಿ ಬುಧವಾರ ನಡೆದ ಹುಲಿಮಾಸ್ತಮ್ಮನ ಜಾತ್ರಾ ಮಹೋತ್ಸವ, ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ಸಿದ್ದಗಂಗಾ ಶ್ರೀ ಶಿವಕುಮಾರಸ್ವಾಮೀಜಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೇವಸ್ಥಾನಗಳು ಮನುಷ್ಯನ ಧಾರ್ಮಿಕ ಜಾಗೃತ ತಾಣಗಳು, ದೇವರ ಮೇಲೆ ನಂಬಿಕೆ ಇಡಬೇಕು. ಭಗವಂತ ಇರುವಿಕೆಯಿಂದಲೇ ಉತ್ತಮ ಮಳೆ, ಬೆಳೆಯಾಗುತ್ತಿರುವುದು. ಜಗತ್ತಿನಲ್ಲಿ ಭಗವಂತ ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು. ಇದರಿಂದಾಗಿ ಎಲ್ಲರೂ ಭಗವಂತನ ಮೇಲೆ ನಂಬಿಕೆ, ವಿಶ್ವಾಸ ಇಡಬೇಕು. ಸಿದ್ದಗಂಗಾ ಶ್ರೀಗಳು ಸಮಾಜ ಸುಧಾರಣೆಗಾಗಿ ದುಡಿದವರು ಎಂದು ಅವರು ಹೇಳಿದರು.

ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಅನಾವರಣಗೊಳಿಸಿದ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಪುತ್ಥಳಿ ಸ್ಥಾಪನೆಯಿಂದ ಅವರ ಜೀವನದ ಮೌಲ್ಯಗಳು, ಆದರ್ಶಗಳನ್ನು ನೆನಪಿಸಿಕೊಂಡು ಎಲ್ಲರೂ ಅನುಸರಿಸಬೇಕು. ಸುತ್ತೂರು ಶ್ರೀಕ್ಷೇತ್ರ, ಸಿದ್ದಗಂಗಾ ಶ್ರೀಕ್ಷೇತ್ರದ ಎರಡು ಕಣ್ಣುಗಳಿದ್ದ ಹಾಗೇ. ಹೀಗಾಗಿ ಎಲ್ಲರೂ ಕಾಯಕಯೋಗಿ ಬಸವಣ್ಣ ಅವರ ತತ್ವ, ಸಿದ್ದಾಂತಗಳನ್ನೂ ಅನುಸರಿಸಿ ಉತ್ತಮ ಪ್ರಜೆಯಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಸಮಾಜದ ಸುಧಾರಣೆಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಮಠಗಳಿವೆ. ಅದೇ ರೀತಿ ಮೈಸೂರು ಭಾಗದಲ್ಲಿಯೂ ತುಮಕೂರಿನ ಸಿದ್ದಗಂಗಾ ಮಠ, ಸುತ್ತೂರು ಮಠಗಳಿವೆ. ಇಲ್ಲಿ ಅಕ್ಷರ ದಾಸೋಹ, ಅನ್ನ ದಾಸೋಹದೊಂದಿಗೆ ಉತ್ತಮ ಗುಣಮಟ್ಟದ ಆರೋಗ್ಯವನ್ನೂ ನೀಡುತ್ತಿವೆ. ನಮ್ಮ ಕುಟುಂಬದವರೂ ಮಠಗಳ ತತ್ವ, ಸಿದ್ದಾಂತವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ದೇವನೂರು ಮಠದ ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಂಚೀಪುರ ಮಠದ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿಸ್ವಾಮಿ, ಪಡುವಲು ವಿರಕ್ತಮಠದ ಮಹಾದೇವ ಸ್ವಾಮೀಜಿ, ಕಿರಿಯ ತೋಂಟದಾರ್ಯ ಸ್ವಾಮೀಜಿ, ಬೀಚನಹಳ್ಳಿ ಮಠದ ನಾಗೇಂದ್ರ ಸ್ವಾಮೀಜಿ, ಮಾದಾಪುರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಜಕ್ಕಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೋಟೆ ಅಧ್ಯಕ್ಷರಾದ ಮೊತ್ತ ಬಸವರಾಜಪ್ಪ, ಸರಗೂರು ತಾಲೂಕು ಮಹಾಸಭಾದ ಅಧ್ಯಕ್ಷರಾದ ಡಿ.ಜಿ. ಶಿವರಾಜು, ಮೈಮುಲ್ ನಿರ್ದೇಶಕಿ ದ್ರಾಕ್ಷಾಯಿಣಿ ಬಸವರಾಜಪ್ಪ, ವಿಎಸ್‌.ಎಸ್‌.ಎನ್. ಅಧ್ಯಕ್ಷ ಎಂ.ಎನ್. ಅಣ್ಣಯ್ಯಸ್ವಾಮಿ, ಎಸ್.ಎನ್. ಮಹದೇವಪ್ಪ, ಜಿಪಂ ಮಾಜಿ ಸದಸ್ಯ ಕೆ. ಚಿಕ್ಕವೀರನಾಯಕ, ಜೆ.ಪಿ. ಚಂದ್ರಶೇಖರ್, ಗ್ರಾಪಂ ಅಧ್ಯಕ್ಷ ಸುಧೀರ್, ಶರಣು ವಿಶ್ವವಚನ ಫೌಂಡೇಶನ್‌ನ ವಚನ ಕುಮಾರಸ್ವಾಮಿ, ಎಸ್.ಎನ್. ಮೋಹನ್ ಕುಮಾರ್, ಗ್ರಾಮದ ಮುಖಂಡರಾದ ಕೆ.ಎಸ್. ವೀರಭದ್ರಪ್ಪ, ಕೆ. ರಾಜಪ್ಪ, ಕೆ.ಎಂ. ಬಸಪ್ಪ, ಶಿವರುದ್ರಪ್ಪ, ಗುರುಸ್ವಾಮಿ, ಗ್ರಾಪಂ ಸದಸ್ಯ ಮುತ್ತುರಾಜ್, ಪರಶಿವಮೂರ್ತಿ, ಕೆ,ಎನ್, ಮಂಜು, ಕೆ.ಎಸ್. ಮಲ್ಲಪ್ಪ, ಗುರುಸ್ವಾಮಿ, ಗ್ರಾಮಸ್ಥರು ಇದ್ದರು.

ಇಂದು ಹಾಲುಹರವಿ ಸೇವೆ

ಮಾ. 21ರ ಗುರುವಾರ ಬೆಳಗ್ಗೆ 9ಕ್ಕೆ ಹಾಲುಹರವಿ ಸೇವೆ, ಚಂಡಮದ್ದಲೆ, ಮಂಗಳವಾದ್ಯ ಮತ್ತು ವೀರಗಾಸೆ ಕುಣಿತ, ರಥೋತ್ಸವ ನಡೆಯಲಿದ್ದು, ಮಧಾಹ್ನ 12ಕ್ಕೆ ಹುಲಿಮಾಸ್ತಮ್ಮನ ಕೊಂಡೋತ್ಸವ, ಮಹಾಮಂಗಳಾರತಿ ಸೇವೆ ನೆರವೇರಲಿದೆ.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ