ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಬುಧವಾರ ಪಟ್ಟಣ ಪೊಲೀಸ್ ಠಾಣೆ ಎದುರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಮಂಗಳವಾರ ರಾತ್ರಿ ಪಟ್ಟಣದ ದೊಡ್ಡಪೇಟೆಯಲ್ಲಿ 7.30ರ ಹೊತ್ತಿಗೆ ಮೂರ್ನಾಲ್ಕು ಮುಸ್ಲಿಂ ಯುವಕರು ಬೈಕ್ ವ್ಹೀಲಿಂಗ್‌ನಲ್ಲಿ ತೊಡಗಿದ್ದರು. ಇದರಿಂದ ಮಕ್ಕಳು, ಮಹಿಳೆಯರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಬೇಕಿದ್ದರೆ ಹೊರವಲಯದಲ್ಲಿ ವ್ಹೀಲಿಂಗ್ ಮಾಡುವಂತೆ ಸುಶೀಲ್ ಎಂಬಾತ ತಿಳಿಸಿದ್ದಾನೆ. ಇದೇ ಕಾರಣಕ್ಕೆ ರಾತ್ರಿ 9 ಗಂಟೆವರೆಗೆ ಹಿಂಬಾಲಿಸಿ, ಸುಶೀಲ್ ವಾಯುವಿಹಾರಕ್ಕೆ ತೆರಳಿದ್ದಾಗ ಆತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಇದು ಆತಂಕಕಾರಿ ಘಟನೆಯಾಗಿದ್ದು, ಖಂಡನೀಯ. ಈ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮುಸ್ಲಿಂ ಯುವಕರ ವರ್ತನೆ ಮಿತಿಮೀರುತ್ತಿದೆ. ಶಿರಾಳಕೊಪ್ಪದಲ್ಲಿ ಉರುಸ್ ಆಚರಣೆಗೆ ಸಂಬಂಧಿಸಿದಂತೆ ಬೆಂಗಳೂರು ಎಸ್‌ಪಿ ಕಚೇರಿಯಲ್ಲಿ ಹೊಡೆದಾಟ, ಹೊಳೆಹೊನ್ನೂರಿನ ಮಸೀದಿಯಲ್ಲಿನ ಮರ ಕಡಿದ ಕಾರಣಕ್ಕೆ ಹಿಂದೂ ಯುವಕನ ವಿರುದ್ಧ ಹಲ್ಲೆಗಳು ನಡೆದಿವೆ. ದುಷ್ಟಶಕ್ತಿಗಳಿಗೆ ಇನ್ನು ಎಷ್ಟು ನಿರಪರಾಧಿ ಹಿಂದೂಗಳ ಹತ್ಯೆಯಾಗಬೇಕು. ಕುಟ್ಟಪ್ಪ, ವಾಮನ ಪೂಜಾರಿ, ರಾಜು, ಪ್ರವೀಣ್ ನೆಟ್ಟಾರು, ಹರ್ಷ ಸಹಿತ ಹಲವರ ಹತ್ಯೆಯಾಗಿದೆ. ಇದರಿಂದ ಹಿಂದೂ ಸಮಾಜವನ್ನು ಹೆದರಿಸಲು ಸಾಧ್ಯ ಎಂಬುದು ಕನಸು ಮಾತ್ರ ಎಂದರು.ಈ ಸಂದರ್ಭ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಚೂರಿ ಇರಿತ ಘಟನೆಯಿಂದ ಸಮಾಜ ಆಘಾತಗೊಂಡಿದೆ. ಪ್ರಕರಣ ಬಗ್ಗೆ ನಿಷ್ಪಕ್ಷವಾತ ತನಿಖೆ, ಇಲಾಖೆ ಬಗೆಗಿನ ನಿರೀಕ್ಷೆ ಹುಸಿಯಾಗದ ರೀತಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರನ್ನು ಶೀಘ್ರ ಬಂಧಿಸಲಾಗುವುದು. ಪಾರದರ್ಶಕ ತನಿಖೆ ಮೂಲಕ ಸಮಾಜದಲ್ಲಿ ಶಾಂತಿ- ನೆಮ್ಮದಿ ನೆಲೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
- - -
- ಬಿ.ವೈ.ರಾಘವೇಂದ್ರ, ಸಂಸದ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಯುವಕನಿಗೆ ಚೂರಿ ಇರಿದ ಘಟನೆ ಖಂಡಿಸಿ ಬುಧವಾರ ಶಿಕಾರಿಪುರ ಪೊಲೀಸ್ ಠಾಣೆ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಸದ ರಾಘವೇಂದ್ರ ಮಾತನಾಡಿದರು.