ಕನ್ನಡಪ್ರಭ ವಾರ್ತೆ ಕೆಜಿಎಫ್
ಕೆಜಿಎಫ್‌ನ ಯು.ಗೌತಮ್ ಚಂದ್ ಎಂಬ ಚಿನ್ನದ ವ್ಯಾಪಾರಿಯು ಫೆ.೨೫ ರಂದು ಬಂಗಾರಪೇಟೆ ಪಟ್ಟಣದ ಜ್ಯೂವೆಲ್ಲರಿ ಅಂಗಡಿಗಳಿಗೆ ಚಿನ್ನಾಭರಣಗಳನ್ನು ಸರಬರಾಜು ಮಾಡಲು ಬಂದು, ವ್ಯಾಪಾರ ವಹಿವಾಟು ಮುಗಿಸಿ ಅಂದು ಮದ್ಯಾಹ್ನ ಕೆಜಿಎಫ್‌ಗೆ ವಾಪಸ್ಸಾಗುತ್ತಿದ್ದರು. ಬಂಗಾರಪೇಟೆ ಪಟ್ಟಣದ ಬಸ್‌ನಿಲ್ದಾಣದ ಸಮೀಪ ಯಾರೋ ಇಬ್ಬರು ಅಪರಿಚಿತ ಕಳ್ಳರು, ದ್ವಿಚಕ್ರ ವಾಹನದಲ್ಲಿ ಬಂದು ಕೆಜಿಎಫ್‌ನ ಯು.ಗೌತಮ್‌ಚಂದ್ ರ ಗಮನ ಬೇರೆಡೆಗೆ ಸೆಳೆದು ಅವರ ಚಿನ್ನಾಭರಣ ಹಾಗೂ ನಗದು ಒಳಗೊಂಡ ಬ್ಯಾಗನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಚಿನ್ನದ ಆಭರಣಗಳು ಕಳವಾಗಿರುವ ಕುರಿತು ಗೌತಮ್ ದೂರು ನೀಡಿದ್ದರು.ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಡಿವೈಎಸ್ಪಿ ಎಸ್.ಪಾಂಡುರಂಗ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ನಂಜಪ್ಪ ಮತ್ತು ಸಿಬ್ಬಂದಿ ಆಂದ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಆರೋಪಿಗಳ ಮತ್ತು ಚಿನ್ನದ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಗಾರಪೇಟೆ ಪಿಎಸ್ಐ ನಂಜಪ್ಪ, ರಾಬರ್ಟ್‌ಸನ್‌ಪೇಟೆ ಸಿಪಿಐ ರಾಮಕೃಷ್ಣಯ್ಯ, ಸೈಬರ್ ಕ್ರೈಂ ಪಿಎಸ್ಐ ಲಕ್ಷ್ಮೀನಾರಾಯಣ, ಆಂಡ್ರಸನ್‌ಪೇಟೆ ಪಿಎಸ್‌ಐ ಚೇತನ್‌ಕುಮಾರ್, ಅಪರಾಧ ವಿಶೇಷ ಪತ್ತೆ ದಳದ ಸಿಬ್ಬಂದಿ ಚಂದ್ರಕುಮಾರ್, ಪ್ರಭಾಕರ್, ಅನಿಲ್‌ಕುಮಾರ್, ಚಲಪತಿ, ಮಂಜುನಾಥರೆಡ್ಡಿ, ರಾಮಕೃಷ್ಣಾರೆಡ್ಡಿ, ಮುನಾವರ್‌ಪಾಷ, ವಿಜಯಲಕ್ಷ್ಮೀ, ಎಂ.ಆರ್.ಲಲಿತಾ, ಆರ್.ಮಂಜುಳಾ, ಮುರಳಿ, ಸೋಮಪ್ಪ ಮುಗಳಿ, ಸುಮನ್, ನವೀನ್, ಕೆ.ಒ.ಮಂಜುಳಾ ಭಾಗವಹಿಸಿದ್ದರು.