ಕನ್ನಡಪ್ರಭ ವಾರ್ತೆ ಆಲೂರು
ಈ ವೇಳೆ ಶಾಸಕ ಸಿಮೆಂಟ್ ಮಂಜು ಮಾತನಾಡಿ, ರಾಜ್ಯ ಸರ್ಕಾರ ಧರ್ಮಸ್ಥಳ ವಿಷಯದಲ್ಲಿ ತನಿಖೆ ನಡೆಸಬೇಕೆಂದು ಎಸ್‍ಐಟಿ ರಚಿಸಿದಾಗ ಅದನ್ನು ಸ್ವಾಗತ ಮಾಡಿದ್ದೆವು ಈ ವಿಚಾರದಲ್ಲಿ ಸಮಗ್ರವಾಗಿ, ಪಾರದರ್ಶಕವಾಗಿ ತನಿಖೆಯಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ನಾವು ಸಂಪೂರ್ಣವಾಗಿ ಬೆಂಬಲ ನೀಡಿದ್ದೆವು ಕ್ಷೇತ್ರದ ಹೆಸರನ್ನು ಕೆಡಿಸಲು ಷಡ್ಯಂತರ ಎಣಿದಿರುವ ಗ್ಯಾಂಗಿನ ಎಲ್ಲರನ್ನು ತಕ್ಷಣವೇ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಬೇಕಾಗಿ ದೆ ಎಂದರು.
ಕಳೆದ ಒಂದು ತಿಂಗಳಿಂದ ಧರ್ಮಸ್ಥಳ ವಿಚಾರದಲ್ಲಿ ಯಾವ ಯಾವ ಬೆಳವಣಿಗೆ ಆಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯ ಸರ್ಕಾರ ಧರ್ಮಸ್ಥಳ ವಿಚಾರದಲ್ಲಿ ತನಿಖೆ ನಡೆಸಬೇಕೆಂದು ಎಸ್‍ಐಟಿ ರಚಿಸಿದಾಗ ಅದನ್ನು ಸ್ವಾಗತ ಮಾಡಿದ್ದೆವು. ಈ ವಿಚಾರದಲ್ಲಿ ಸಮಗ್ರವಾಗಿ, ಪಾರದರ್ಶಕವಾಗಿ ತನಿಖೆಯಾಗಬೇಕು ಈಗಾಗಲೇ ಮುಸುಕು ದಾರಿ ಚಿನ್ನಯ್ಯನನ್ನ ಬಂಧನ ಮಾಡಿರುವುದನ್ನು ಸ್ವಾಗಥಿಸುತ್ತೇವೆ ಅದರೆ ಮಹೇಶ್ ಶೆಟ್ಟಿ ತಿಮ್ಮರೋಡಿಗೆ ಜಾಮೀನು ನೀಡಲಾಗಿದೆ ತಿಮ್ಮ ರೋಡಿಯನ್ನ ಪುನಃ ಬಂಧಿಸಬೇಕು.ಅದೇ ರೀತಿ ಮಟ್ಟಣ್ಣನವರ್, ಸುಜಾತ ಭಟ್ ಹಾಗೂ ರಾಜ್ಯ ಅಶಾಂತಿ ಕಾರಣನಾದ ಭಯೋತ್ಪಾದಕನ ರೀತಿ ವರ್ತಿಸುತ್ತಿರುವ ಯೌಟ್ಯೂಬರ್ ಸಮೀರ್‌ನನ್ನು ಮೊದಲು ಅರೆಸ್ಟ್ ಮಾಡಿ ಹೆಚ್ಚಿನ ವಿಚಾರಣೆಗೆ ಒಳ ಪಡಿಸಬೇಕು. ಈ ಮೂಲಕ ರಾಜ್ಯದ ಜನರಿಗೆ ಕ್ಷೇತ್ರದ ವಿರುದ್ಧ ನೆಡೆಯುತ್ತಿರುವ ಷಡ್ಯಂತ್ರವನ್ನು ಬಹಿರಂಗ ಪಡಿಸಿಬೇಕು ಎಂದು ಒತ್ತಾಯಿಸಿದರು.ಆಲೂರು- ಕಟ್ಟಾಯ ಬಿಜೆಪಿ ಮಹಿಳಾ ಮಂಡಲದ ಅಧ್ಯಕ್ಷೆ ಉಮಾ ರವಿ ಪ್ರಕಾಶ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮೃದು ಧೋರಣೆ ಅನುಸರಿಸಿದ್ದಂತಿದೆ. ಇದರಿಂದ ಅಸಂಖ್ಯಾತ ಹಿಂದು ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ತಕ್ಷಣ ಮುಸುಕುಧಾರಿ ಚಿನ್ನಯ್ಯನ ಹಿಂದೆ ಯಾರ್ಯಾರು ಇದ್ದಾರೆ ಕಿಡಿಗೇಡಿಗಳ ಕೈವಾಡ ಇರುವುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಅಬ್ಬನ ಕೃಷ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ, ಲೋಕೇಶ್ ಕಣಗಾಲ್, ಅಜಿತ್ ಚಿಕ್ಕಣಗಾಲ್, ಕದಾಳು ಲೋಕೇಶ್, ಎ.ಎಚ್. ರಮೇಶ್, ಗಣೇಶ್, ಅನೂಪ್ ಮೇಣಸಮಕ್ಕಿ, ಹೇಮಂತ್, ಹನುಮಂಟೆಗೌಡ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.