ಚಿತ್ರಕಲಾ ಸ್ಪರ್ಧೆ ಮಾನಸಿಕ ಬೆಳವಣಿಗೆಗೆ ಸಹಕಾರಿ

KannadaprabhaNewsNetwork |  
Published : Feb 21, 2025, 11:47 PM IST
ಚಿತ್ರ 2 | Kannada Prabha

ಸಾರಾಂಶ

ಚಿತ್ರಕಲಾ ಸ್ಪರ್ಧೆಯು ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಜೊತೆಗೆ ಚಿಂತನಾಶೀಲ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಇಸ್ರೋ ಸಂಸ್ಥೆಯ ಮುಖ್ಯಸ್ಥ ಮರಿಯಪ್ಪ ತಿಳಿಸಿದರು

ಹಿರಿಯೂರು: ಚಿತ್ರಕಲಾ ಸ್ಪರ್ಧೆಯು ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಜೊತೆಗೆ ಚಿಂತನಾಶೀಲ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಇಸ್ರೋ ಸಂಸ್ಥೆಯ ಮುಖ್ಯಸ್ಥ ಮರಿಯಪ್ಪ ತಿಳಿಸಿದರು.

ತಾಲೂಕಿನ ಮಸ್ಕಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರು ಬಾಹ್ಯಾಕಾಶ ಇಲಾಖೆ ಇಸ್ರೋ ಸಂಸ್ಥೆ ವತಿಯಿಂದ ಪರಿಸರ ಪ್ರಜ್ಞೆ ಮತ್ತು ಸ್ವಚ್ಛತೆ ವಿಷಯ ಕುರಿತು ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳಿಗೆ ಉಪಯುಕ್ತವಾಗುವ ಅನೇಕ ಸ್ಪರ್ಧೆಗಳನ್ನು ಮಾಡುವುದರ ಮೂಲಕ ಮಕ್ಕಳಲ್ಲಿ ಚಿಂತನಶೀಲ ಗುಣಗಳನ್ನು ಬೆಳೆಸಬೇಕಾಗಿದೆ. ಹೊಸದರ ಬಗ್ಗೆ ತುಡಿತ,ಕಲಿಯುವ ಹಂಬಲವನ್ನು ಮಕ್ಕಳಲ್ಲಿ ಬಿತ್ತಬೇಕಿದೆ ಎಂದರು.

ಪರಿಸರ ವಿಜ್ಞಾನಿಗಳಾದ ಸತ್ಯಮೂರ್ತಿ, ಸ್ನೇಹ ಗುಪ್ತ,ಸಾರ್ಥಕ್, ಶ್ರೀನಾಥ್, ಅಭಿಯಂತರ ಅವಿನಾಶ್, ಜೈಮುನ್ ಥಾಮಸ್,ಹಳೆಯ ವಿದ್ಯಾರ್ಥಿಗಳಾದ ಸುಬ್ರಮಣಿ, ಎಂ.ವಿ.ರಾಮಪ್ಪ, ಎಸ್‌ಡಿಎಂಸಿ ಅಧ್ಯಕ್ಷ ವಿಜಯ್ ಕುಮಾರ್, ಮುಖ್ಯ ಶಿಕ್ಷಕ ಹುಸೇನ್ ಸಾಬ್, ಶಿಕ್ಷಕರಾದ ಎಲ್‌.ಈ. ಗಂಗಮ್ಮ. ಕೆ.ದಾದಾಪೀರ್, ಎ.ಎಸ್.ರಂಜಿತ, ರಮ್ಯ, ಹೊರಕೇರಪ್ಪ, ಎಸ್. ಆರ್.ತನುಜ ಇದ್ದರು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳನ್ನು ಬಹುಮಾನವಾಗಿ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ: ಸುರ್ಜೇವಾಲಾ ವಿಶ್ವಾಸ
ದಾವಣಗೆರೆ ಟಿಕೆಟ್‌ ಘೋಷಣೆ ಮುನ್ನವೇ ಕೈ ನಾಮಪತ್ರ