ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಜಂಬೂಸವಾರಿ ಮೆರವಣಿಗೆ ವೇಳೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಸ್ಥಬ್ಧ ಚಿತ್ರಗಳು ವಿಶೇಷ ಮೆರಗು ನೀಡಿದವು.ಮೆರವಣಿಗೆ ಪೂಜಾ ಕುಣಿತದಲ್ಲಿ ಶ್ರೀರಂಗಪಟ್ಟಣ ದೊಡ್ಡಪಾಳ್ಯ ಶ್ರೀ ಚಾಮುಂಡೇಶ್ವರಿ ಸಾಂಸ್ಕೃತಿಕ ಕಲಾ ತಂಡ, ಬಾಬುರಾಯನಕೊಪ್ಪಲು ಪ್ರೇಮ್ ಕುಮಾರ್ , ಶ್ರೀರಂಗಪಟ್ಟಣ ರವಿ, ಮಂಡ್ಯ ಕಾರಸವಾಡಿ ಕೆ.ಬಿ.ಸ್ವಾಮಿ, ವಿಕಾಸ್ , ಮದ್ದೂರು ಕಡಿಲುವಾಗಿಲು ಗ್ರಾಮದ ಚೇತನ್ ತಂಡಗಳು ಭಾಗವಹಿಸಿದ್ದರು.
ವೀರಗಾಸೆಯಲ್ಲಿ ಬಾಬುರಾಯನಕೊಪ್ಪಲು ಕಿರಣ್ , ಮಂಡ್ಯ ಹುಳ್ಳೇನಹಳ್ಳಿ ಚಂದನ, ಶ್ರೀರಂಗಪಟ್ಟಣ ಕಿರಂಗೂರು ವಿನಯ್, ಪಾಂಡವಪುರ ದೊಡ್ಡಬೋಗನಹಳ್ಳಿ ರುದ್ರಸ್ವಾಮಿ ತಂಡಗಳು, ಸೋಮನ ಕುಣಿತದಲ್ಲಿ ಮಂಡ್ಯ ಕಾರಸವಾಡಿ ಸಂತೋಷ್ ಕುಮಾರ್ , ನಾಗಮಂಗಲ ಹಳ್ಳಿಸಂದ್ರ ಎ.ವಿಕಾಸ್‌ಗೌಡ, ನಾಗಮಂಗಲ ಸಿ.ಎಸ್.ಮಂಜೇಶ್, ಮಂಡ್ಯ ಮುದಗಂದೂರು ದೇವಲಿಂಗಯ್ಯ, ವಿಕಾಸ್ ತಂಡಗಳು ಮೆರವಣಿಗೆಯಲ್ಲಿ ಸಾಗಿದವು.ಡೊಳ್ಳು ಕುಣಿತದಲ್ಲಿ ಮಂಡ್ಯ ಕಾರಸವಾಡಿ ಜನ್ಮಭೂಮಿ ಜನಪದ ಕಲಾಸಂಘ, ಮೇಳಾಪುರ ಸುಮಂತ ತಂಡ, ಕಾರಸವಾಡಿ ಲೋಕೇಶ್ ತಂಡ, ನಗಾರಿ/ತಮಟೆಯಲ್ಲಿ ಶ್ರೀರಂಗಪಟ್ಟಣ ನೀಲನಕೊಪ್ಪಲು ಸಿದ್ದಲಿಂಗಸ್ವಾಮಿ ತಂಡ, ಅರಕೆರೆ ಹರ್ಷಕುಮಾರ್‌ಗೌಡ ತಂಡ, ಪಟ್ಟಣದ ಕೀರ್ತಿಕುಮಾರ್ ತಂಡ, ಮಂಡ್ಯಕೊಪ್ಪಲು ಕಲಾತಂಡ, ಗಾಂಧಿನಗರ ಅಶೋಕ ಮತ್ತು ತಂಡ ಭಾಗವಹಿಸಿತ್ತು.
ನಂದಿದ್ವಜ ಕುಣಿತದಲ್ಲಿ ಕಾರಸವಾಡಿ ಜಗದೀಶ್ ತಂಡ, ದ್ಯಾವಣ್ಣ ತಂಡ, ಗಾರುಡಿಗೊಂಬೆ ಕಾರಸವಾಡಿ ಸಿದ್ದೇಗೌಡ ತಂಡ ಜನಪದ ಕಲಾತಂಡ, ಚಿಲಿಪಿಲಿ ಗೊಂಬೆಯಲ್ಲಿ ಮದ್ದೂರಿನ ಬಿದರಹಳ್ಳಿ ಶ್ರೀ ಕಬ್ಬಾಳಮ್ಮ ಜಾನಪದ ಕಲಾತಂಡ, ಮಳವಳ್ಳಿ ಮಾರನಹಳ್ಳಿ ಚಂದ್ರ ತಂಡ, ಕೊಂಬುಕಹಳೆಯಲ್ಲಿ ಶ್ರೀರಂಗಪಟ್ಟಣ ಕೊಡಿಯಾಲ ಪವನ್ ಕುಮಾರ್ ತಂಡ, ಕಾರಸವಾಡಿ ರೋಹಿತ್ ತಂಡ, ಮಂಡ್ಯ ಮಳೆಕೊಪ್ಪಲು ನರಸಿಂಹ ತಂಡ ಭಾಗವಹಿಸಿ ಗಮನ ಸೆಳೆಯಿತು.ಒನಕೆ ಕುಣಿತದಲ್ಲಿ ಶ್ರೀರಂಗಪಟ್ಟಣ ಬಸವನಪುರ ಯೋಗೇಶ್ ಮತ್ತು ದೊಡ್ಡಪಾಳ್ಯ ಕುಮಾರ್ ತಂಡ, ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆಯಲ್ಲಿ ಮಂಡ್ಯ ಕೊತ್ತತ್ತಿ ಎಲೆತೋಟದ ಖ್ಯಾತಮ್ಮ ಯುವಕರ ಜಾನಪದ ಕಲಾತಂಡ, ಮಹಿಳಾಪಟ ಕುಣಿತ, ಮಂಡ್ಯ ಕೀಲಾರ ಕ್ಷೀರಸಾಗರ ಮಿತ್ರ ಕೂಟ ಮತ್ತು ರಾಜಮ್ಮ ತಂಡ, ಬ್ಯಾಂಡ್ ಸೆಟ್ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಹೇಶ ತಂಡ, ನಾದಸ್ವರ ಶ್ರೀರಂಗಪಟ್ಟಣ ಅಜಯ್ ತಂಡ, ಮಹಿಳಾ ಕೋಲಾಟದಲ್ಲಿ ಮದ್ದೂರು ಹೊಸಗಾವಿ ಶ್ರೀ ವಿನಾಯಕ ಮಹಿಳಾ ಕೋಲಾಟ ತಂಡ ಪಾಲ್ಗೊಂಡಿತ್ತು.
ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳು ಸಾಕಾಣಿಕೆ ಹಾಗೂ ಅದರ ಉತ್ಪನ್ನಗಳು, ವಿದ್ಯಾ ಭಾರತಿ ಶಾಲೆಯಿಂದ ನವ ದುರ್ಗಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಲಕ್ಷ್ಮೀ ಯೋಜನೆ, ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಶಿಕ್ಷಣ ಇಲಾಖೆ ಸೌಲಭ್ಯದ ಬಗ್ಗೆ ಸ್ಥಬ್ದ ಚಿತ್ರ ಸೇರಿದಂತೆ ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಆರೋಗ್ಯ, ಅಗ್ನಿ ಶಾಮಕ ಇಲಾಖೆ ಹಾಗೂ ಭಗವಾನ್ ಬುದ್ಧ ಕುರಿತು ಸ್ಥಬ್ಧ ಚಿತ್ರಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.